ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರ ವಿಶ್ವಸಂಸ್ಥೆಗೆ ನೀಡುವ ಭೇಟಿಯ ಸಂದರ್ಭದಲ್ಲಿ 50KW ‘ಗಾಂಧಿ ಸೋಲಾರ್ ಪಾರ್ಕ್’ ಅನ್ನು ಉದ್ಘಾಟನೆಗೊಳಿಸಲಿದ್ದಾರೆ. ಇದು ವಿಶ್ವಸಂಸ್ಥೆಗೆ ಭಾರತ ನೀಡಿದ ಉಡುಗೊರೆಯಾಗಿದ್ದು, ಹವಾಮಾನ ವೈಪರೀತ್ಯದ ಬಗೆಗಿನ ಭಾರತದ ಇಚ್ಛಾಶಕ್ತಿಯನ್ನು ಪ್ರತಿಬಿಂಬಿಸಲಿದೆ.
ಸೆ.24 ರಂದು ಮೋದಿ ‘ಗಾಂಧೀ ಸೋಲಾರ್ ಪಾರ್ಕ್’ ಅನ್ನು ವಿಶ್ವಸಂಸ್ಥೆಯ ನ್ಯೂಯಾರ್ಕ್ ಕಟ್ಟಡದ ಆವರಣದಲ್ಲಿ ಅನಾವರಣಗೊಳಿಸಲಿದ್ದಾರೆ.
ಭಾರತವು 150 ಮರಗಳಿಂದ ಕೂಡಿದ ಗಾಂಧಿ ಶಾಂತಿ ಉದ್ಯಾನವನ್ನು ಕೂಡ ಭಾರತ ಕೊಡುಗೆಯಾಗಿ ನೀಡುತ್ತಿದೆ, ಇದು ಓಲ್ಡ್ ವೆಸ್ಟ್ಬರಿಯ ವಿಶ್ವವಿದ್ಯಾಲಯದ ಆವರಣದಲ್ಲಿ ಇದ್ದು, ಇದು ಭಾರತದ ಮತ್ತೊಂದು ಪರಿಸರ ಉಡುಗೊರೆಯಾಗಿದೆ.
ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ದೃಷ್ಟಿಯಿಂದ ಗಾಂಧೀ ಸೋಲಾರ್ ಪಾರ್ಕ್ ಯಾವ ರೀತಿಯ ಸಾಧನೆಯನ್ನು ಮಾಡಬಲ್ಲದು ಎಂಬುದನ್ನು ತೋರಿಸುವ ವಿಡಿಯೋವನ್ನು ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಟ್ವೀಟರ್ ಮೂಲಕ ಹಂಚಿಕೊಂಡಿದ್ದಾರೆ.
ಮಹಾತ್ಮ ಗಾಂಧಿಯವರ 150 ನೇ ಜನ್ಮ ವರ್ಷಾಚರಣೆಯ ಸಂದರ್ಭದಲ್ಲೇ ಎರಡು ಉಡುಗೊರೆಗಳ ಮೂಲಕ ಭಾರತವು ಹವಾಮಾನ ವೈಪರೀತ್ಯ ವಿರುದ್ಧದ ತನ್ನ ಹೋರಾಟವನ್ನು ಪ್ರತಿಬಿಂಬಿಸಿದೆ. ಸೌರ ಉದ್ಯಾನದ ಮೂಲಕ ನವೀಕರಿಸಬಹುದಾದ ಸಂಪನ್ಮೂಲಗಳಿಂದ ಹಸಿರು ಶಕ್ತಿಯನ್ನು ಉತ್ಪಾದಿಸುವುದು ಮತ್ತು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ಇಂಗಾಲದ ಹೊರಸೂಸುವಿಕೆಯನ್ನು ತಡೆಯುವ ಸಲುವಾಗಿ ಮರಗಳನ್ನು ನೆಡುವುದನ್ನು ಉತ್ತೇಜಿಸುವುದು ಭಾರತದ ಉದ್ದೇಶವಾಗಿದೆ.
ಗಾಂಧೀ ಜನ್ಮ ವರ್ಷಾಚರಣೆಯ ಪ್ರಯುಕ್ತ ಅಂಚೆ ಚೀಟಿಯನ್ನೂ ವಿಶ್ವಸಂಸ್ಥೆ ಬಿಡುಗಡೆಗೊಳಿಸಲಿದೆ.
Come September end …
When the sun rises over East(river)
The @UN will use solar power…Thanks to the Gandhi Solar Park 🙏🏽#ClimateChange pic.twitter.com/HZ1eZPk14S
— Syed Akbaruddin (@AkbaruddinIndia) September 19, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.