ನವದೆಹಲಿ: ಲಿಬರಲ್ಸ್ ಎಂದು ಕರೆಯಲ್ಪಡುವ ಭಾರತದ ಕೆಲವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಕಲಿ ಸುದ್ದಿಗಳನ್ನು ಬಿತ್ತರಿಸಲು ಹೋಗಿ ಮುಖಭಂಗಕ್ಕೀಡಾಗಿದ್ದಾರೆ. ಅವರ ನಕಲಿ ಸುದ್ದಿ ಅವರ ನಿಜ ಮುಖವನ್ನು ಬಯಲು ಮಾಡುತ್ತಿದೆ.
ಹೋಸ್ಟನ್ನಲ್ಲಿ ಭಾರತೀಯ ಅಮೆರಿಕನ್ನರು ಮೋದಿಯವರಿಗಾಗಿ ‘ಹೌಡಿ ಮೋದಿ’ ಎಂಬ ದೊಡ್ಡ ಸಮಾರಂಭವನ್ನು ನಡೆಸಲು ಉದ್ದೇಶಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಸ್ವತಃ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮಿಸುತ್ತಿದ್ದಾರೆ. ಆದರೆ 2020 ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಲಿರುವ ಭಾರತೀಯ ಮೂಲದ ತುಳಸಿ ಗಬ್ಬಾರ್ಡ್ ಅವರು ಈ ಸಮಾರಂಭಕ್ಕೆ ಆಗಮಿಸುತ್ತಿಲ್ಲ.
ಇದನ್ನೇ ದೊಡ್ಡ ವಿಷಯವನ್ನಾಗಿ ಮಾಡಿದ ಲಿಬರಲ್ಗಳು ಅರ್ಥಾತ್ ಬುದ್ಧಿಜೀವಿಗಳು, ಹಿಂದೂ ಆಗಿರುವ ಅಮೆರಿಕಾದ ಅಧ್ಯಕ್ಷಿಯ ಅಭ್ಯರ್ಥಿಯೇ ಮೋದಿಯವರನ್ನು ತಿರಸ್ಕರಿಸಿದ್ದಾರೆ, ಹೌಡಿ ಮೋದಿಗೆ ಆಗಮಿಸಲು ನೀಡಿ ಆಹ್ವಾನವನ್ನು ಗಬ್ಬಾರ್ಡ್ ತಿರಸ್ಕರಿಸಿದ್ದಾರೆ ಎಂದು ಸುದ್ದಿ ಹರಡಿದ್ದಾರೆ. ‘Organisation for Minorities in India’ ಎಂಬ ಸಂಘಟನೆ ನಡೆಸುತ್ತಿರುವ ofmi.org ಎಂಬ ವೆಬ್ ಸೈಟ್ ಈ ಬಗ್ಗೆ ಮೊದಲು ಸುದ್ದಿ ಮಾಡಿತ್ತು. ಅದರ ಸುದ್ದಿಯನ್ನೇ ರಾಣಾ ಆಯೂಬ್, ಅಶೋಕ್ ಸ್ವೈನ್, ವಿನೋದ್ ಕಪ್ರಿ ಮುಂತಾದವರು ಹಂಚಿಕೊಂಡು ಮೋದಿ ಘನತೆಗೆ ಧಕ್ಕೆ ತರುವಂತಹ ಒಕ್ಕಣೆಗಳನ್ನು ಹಾಕಿದ್ದಾರೆ.
Tulsi Gabbard refuses invitation to attend Howdy Modi event in Houston..What a turnaround. Where does this leave her Indian fanboys https://t.co/c8O5x7XSSu
— Rana Ayyub (@RanaAyyub) September 16, 2019
ಆದರೆ ತುಳಸಿ ಗಬ್ಬಾರ್ಡ್ ಅವರೇ ಈ ನಕಲಿ ಸುದ್ದಿಗಾರರಿಗೆ ದಿಟ್ಟ ಉತ್ತರವನ್ನು ನೀಡಿ ಬಾಯಿ ಮುಚ್ಚುವಂತೆ ಮಾಡಿದ್ದಾರೆ.
ರಾಣಾ ಆಯೂಬ್ ಟ್ವಿಟ್ಟಿಗೆ ಪ್ರತಿಕ್ರಿಯೆ ನೀಡಿರುವ ತುಳಸಿ ಗಬ್ಬಾರ್ಡ್, “ಈ ಲೇಖನ ತಪ್ಪು ಮಾಹಿತಿಯನ್ನು ಹೊಂದಿದೆ. ಪೂರ್ವ ನಿಗದಿತ ಅಧ್ಯಕ್ಷೀಯ ಪ್ರಚಾರ ಕಾರ್ಯಕ್ರಮದಿಂದಾಗಿ ನನಗೆ ಹೌಡಿ ಮೋದಿ ಕಾರ್ಯಕ್ರಮಕ್ಕೆ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಆದರೆ ಮೋದಿಯವರನ್ನು ನಾನು ಖಂಡಿತವಾಗಿಯೂ ಭೇಟಿಯಾಗುತ್ತೇನೆ. ವಿಶ್ವದ ಹಳೆಯ ಪ್ರಜಾಪ್ರಭುತ್ವ ಮತ್ತು ಅತೀ ದೊಡ್ಡ ಪ್ರಜಾಪ್ರಭುತ್ವದ ಬಾಂಧವ್ಯ ಗಟ್ಟಿಗೊಳಿಸುವ ಸಂಬಂಧ ಮಾತುಕತೆ ನಡೆಸುತ್ತೇನೆ” ಎಂದಿದ್ದಾರೆ.
This article is misinformed. I’m not attending the Houston event due to previously scheduled presidential campaign events. However I’m hoping to meet PM Modi on his visit to discuss the importance of maintaining the strong partnership of the world’s oldest & largest democracies.
— Tulsi Gabbard (@TulsiGabbard) September 18, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.