ನವದೆಹಲಿ: ಭಾರತದ ತಂಬಾಕು ವಿರೋಧಿ ಜಾಹೀರಾತುಗಳಲ್ಲಿ ಸದಾ ಕಾಣಿಸಿಕೊಳ್ಳುತ್ತಿದ್ದ ೨೮ ವರ್ಷದ ಸುನೀತಾ ತೋಮರ್ ಬುಧವಾರ ಮಧ್ಯಪ್ರದೇಶದಲ್ಲಿ ಮೃತಪಟ್ಟಿದ್ದಾರೆ. ಕ್ಯಾನ್ಸರ್ ಪೀಡಿತರಾಗಿದ್ದ ಅವರು ತಮ್ಮ ಜೀವನದ ಕೊನೆ ಗಳಿಗೆಯನ್ನು ತನ್ನ ಕುಟುಂಬ ಮತ್ತು ಮಕ್ಕಳೊಂದಿಗೆ ಕಳೆಯಲು ಇಚ್ಛೆ ಪಟ್ಟ ಹಿನ್ನಲೆಯಲ್ಲಿ ಕೆಳ ದಿನಗಳ ಹಿಂದೆ ಅವರನ್ನು ನವದೆಹಲಿಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.
ತಂಬಾಕು ಸೇವನೆಯಿಂದಾಗಿ ಸುನೀತಾ ಅವರು ಕೆಲ ವರ್ಷಗಳ ಹಿಂದೆ ಬಾಯಿಯ ಕ್ಯಾನ್ಸರ್ಗೆ ತುತ್ತಾಗಿದ್ದರು. ಹಲವು ಬಾರಿ ಶಸ್ತ್ರಚಿಕಿತ್ಸೆಗೂ ಅವರು ಒಳಪಟ್ಟಿದ್ದರು. ಬಳಿಕ ಆರೋಗ್ಯ ಸಚಿವಾಲಯದೊಂದಿಗೆ ಕೈಜೋಡಿಸಿ ಅವರು ತಂಬಾಕು ವಿರೋಧಿ ಆಂದೋಲನಕ್ಕೆ ಧುಮುಕಿದ್ದರು. ತಂಬಾಕು ವಿರೋಧಿ ಅಥವಾ ಕ್ಯಾನ್ಸರ್ ಜಾಗೃತಿಯ ಬಗೆಗಿನ ಟಿವಿ ಜಾಹೀರಾತು ಇರಲಿ, ಪೋಸ್ಟರ್ ಇರಲಿ ಅಲ್ಲಿ ಸದಾ ಸುನೀತಾ ಅವರು ತಮ್ಮ ಯಶೋಗಾಥೆಯನ್ನು ಹೇಳಿ ಉಳಿದವರಿಗೆ ತಂಬಾಕು ಸೇವಿಸದಂತೆ ಎಚ್ಚರಿಕೆ ನೀಡುತ್ತಿದ್ದರು.
‘ಕಳೆದ ಕೆಲ ದಿನಗಳಿಂದ ಅವರು ತುಂಬಾ ನಿತ್ರಾಣರಾಗಿದ್ದರು, ಅವರ ಕುಟುಂಬ ಅವರ ಚಿಕಿತ್ಸೆಗೆ ಬಹಳಷ್ಟು ಹಣ ವ್ಯಯಿಸಿತ್ತು. ನಮ್ಮ ಆಸ್ಪತ್ರೆಯ ಸಮಾಜ ಕಲ್ಯಾಣ ಇಲಾಖೆ ಅವರ ಚಿಕಿತ್ಸೆಯ ವೆಚ್ಚವನ್ನು ಭರಿಸುತ್ತಿತ್ತು. ಇದೀಗ ಅವರು ತಮ್ಮ ಮನೆಯಲ್ಲೇ ಮೃತ ಪಟ್ಟಿದ್ದಾರೆ’ ಎಂದು ಟಾಟಾ ಆಸ್ಪತ್ರೆಯ ಮುಖ್ಯಸ್ಥ ಡಾ.ಪಂಕಜ್ ಚತುರ್ವೇದಿ ತಿಳಿಸಿದ್ದಾರೆ.
‘ತಂಬಾಕು ಸೇವನೆಯಿಂದ ಕ್ಯಾನ್ಸರ್ ಬರುವುದಿಲ್ಲ ಎಂಬ ಬಿಜೆಪಿ ಸಂಸದ ದಿಲೀಪ್ ಗಾಂಧಿ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಅವರು ಸಾಯುವ ಎರಡು ದಿನಗಳ ಮುಂಚೆಯಷ್ಟೇ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.