ಬೆಂಗಳೂರು: ವಿಜ್ಞಾನಿ ಮತ್ತು ಕಮೆಂಟೇಟರ್ ಆಗಿರುವ ಆನಂದ್ ರಂಗನಾಥನ್ ಅವರು ಸಹಜವಾಗಿ ಹಾಕಿದ ಟ್ವಿಟ್ವೊಂದನ್ನು ಗಂಭೀರವಾಗಿ ಪರಿಗಣಿಸಿದ ಕನ್ನಡ ಟಿವಿ ಚಾನೆಲ್ಗಳು ತಪ್ಪು ಗ್ರಹಿಕೆಯ ಸುದ್ದಿಯನ್ನು ಬಿತ್ತರಿಸಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿವೆ.
ಸೀತಾರಾಮನ್ ಅವರನ್ನು ಭೇಟಿಯಾದ ಬಳಿಕ ಟ್ವಿಟ್ ಮಾಡಿದ್ದ ಆನಂದ್ ಅವರು, ಮೈಸೂರು ಪಾಕ್ ಸಿಹಿತಿಂಡಿಯ ಜಿಐ ಟ್ಯಾಗ್ ಅನ್ನು ಸೀತಾರಾಮನ್ ತಮ್ಮ ತವರು ತಮಿಳುನಾಡಿಗೆ ನೀಡಿದ್ದಾರೆ ಎಂದಿದ್ದಾರೆ.
ತಮ್ಮನ್ನು ತಾವು, ಜಿಐ ಟ್ಯಾಗ್ ನೀಡಿದ್ದು ನನ್ನ ಒನ್ ಮ್ಯಾನ್ ಕಮಿಟಿ ಎಂದೂ ಅವರು ಹಾಸ್ಯಭರಿತವಾಗಿ ಹೇಳಿಕೊಂಡಿದ್ದರು. ತಾನೊಬ್ಬ ಅಪ್ಪಟ ಮೈಸೂರು ಪಾಕ್ ಅಭಿಮಾನಿ ಎಂಬುದನ್ನು ಹೇಳಿಕೊಳ್ಳುವುದಷ್ಟೇ ಅವರ ಟ್ವಿಟ್ನ ಉದ್ದೇಶವಾಗಿತ್ತು.
ಆದರೆ ಇದನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಕನ್ನಡ ವಾಹಿನಿಗಳು ತಮಿಳುನಾಡಿಗೆ ಮೈಸೂರು ಪಾಕ್ ಟ್ಯಾಗ್ ಸಿಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿ ಸೀತಾರಾಮನ್ ಅವರ ವಿರುದ್ಧ ಕಿಡಿಕಾರಿವೆ.
ಒಟ್ಟಿನಲ್ಲಿ ಸಹಜವಾಗಿ ಮಾಡಿದ ಟ್ವಿಟ್ ಅನ್ನು ತಪ್ಪಾಗಿ ಅರ್ಥೈಸಿಕೊಂಡ ಕನ್ನಡ ಮಾಧ್ಯಮಗಳು ಈಗ ನಗೆಪಾಟಲಿಗೀಡಾಗಿವೆ.
The only good life, is a South Indian’s life. pic.twitter.com/Jq2ldEbGY3
— Anand Ranganathan (@ARanganathan72) December 22, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.