ಶಿಮ್ಲಾ: ಹಿಮಾಚಲಪ್ರದೇಶದ ಸುಂದರ್ ನಗರ್ ಜಿಲ್ಲೆಯ ಅತಿಥಿ ಗೃಹವೊಂದರಲ್ಲಿ ಮತಾಂತರದ ಉದ್ದೇಶವಿಟ್ಟುಕೊಂಡು ಕ್ರಿಶ್ಚಿಯನ್ ಮಿಷನರಿಗಳು ಆಯೋಜನೆಗೊಳಿಸಿದ್ದ ‘ಪ್ರಾರ್ಥನಾ ಸಭೆಯ’ ವಿರುದ್ಧ ವಿಶ್ವ ಹಿಂದೂ ಪರಿಷತ್ ಬೃಹತ್ ಪ್ರತಿಭಟನೆಯನ್ನು ನಡೆಸಿದೆ. ‘ಕ್ರಿಶ್ಚಿಯನ್ ಮಿಷನರಿ ಗೋ ಬ್ಯಾಕ್’ ಎಂಬ ಘೋಷಣೆಗಳನ್ನು ಕೂಗಿ ಪ್ರಾರ್ಥನಾ ಸಭೆಗೆ ಅಡ್ಡಿವುಂಟು ಮಾಡಿದರು.
ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಬಳಿಕ ಆಗಮಿಸಿದ ಸುಂದರ್ ನಗರ್ ತಹಶಿಲ್ದಾರ್ ಮಿಷನರಿಗಳ ಬಗ್ಗೆ ಕಾರ್ಯಕ್ರಮ ನಡೆಸಲು ಅನುಮತಿ ಪಡೆದ ದಾಖಲೆಯನ್ನು ಕೇಳಿದ್ದಾರೆ. ಆದರೆ ದಾಖಲೆ ನೀಡಲು ಅವರು ವಿಫಲರಾಗಿದ್ದಾರೆ. ಹೀಗಾಗಿ ಕಾರ್ಯಕ್ರಮ ಅರ್ಧಕ್ಕೆ ಮೊಟಕುಗೊಂಡಿದೆ.
ಕಾರ್ಯಕ್ರಮದ ಆಯೋಜಕರು ನಾವು ಯಾವುದೇ ಮತಾಂತರ ನಡೆಸುತ್ತಿಲ್ಲ, ಕೇವಲ ಇತರ ಧರ್ಮಗಳಂತೆ ಬೋಧನೆ ನಡೆಸುತ್ತಿದ್ದೇವೆ ಎಂದು ವಾದಿಸಿದ್ದಾರೆ.
ಆದರೆ ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಕ್ರಿಶ್ಚಿಯನ್ ಮಿಷನರಿಗಳ ಕುತಂತ್ರವನ್ನು ಬಲವಾಗಿ ಖಂಡಿಸಿ ವಿರೋಧ ಮಾಡುತ್ತಿದ್ದಾರೆ. ಸ್ಥಳಿಯ ಜಿಲ್ಲಾಡಳಿತಗಳು ಇಂತಹ ಕಾರ್ಯಕ್ರಗಳ ಮೇಲೆ ಹದ್ದಿನ ಕಣ್ಣಿಡಬೇಕು ಎಂದು ವಾದಿಸಿದ್ದಾರೆ. ಅಲ್ಲದೇ, ಮತಾಂತರಗೊಂಡ ಜನರಿಗೆ ಸರ್ಕಾರದ ವತಿಯಿಂದ ಜಾತಿಗೆ ಅನುಗುಣವಾಗಿ ನೀಡುವ ಸೌಲಭ್ಯಗಳಿಂದ ವಂಚಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಕ್ರಮವಾದ ರೀತಿಯಲ್ಲಿ ಪ್ರಾರ್ಥನಾ ಸಭೆಗಳನ್ನು ನಡೆಸಿ ಜನರಿಗೆ ಮತಾಂತರವಾಗಲು ಆಮಿಷ ಒಡ್ಡುತ್ತಿರುವ ಘಟನೆಗಳು ದೇಶವ್ಯಾಪಿಯಾಗಿ ನಡೆಯುತ್ತಿದೆ. ಈ ಬಗ್ಗೆ ಹಲವಾರು ಪ್ರಕರಣಗಳೂ ದಾಖಲಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.