ನವದೆಹಲಿ: ದೇಶ ಕಂಡ ಮಹಾನ್ ಇಂಜಿನಿಯರ್ ಆಗಿದ್ದ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮದಿನವಿಂದು. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಇಂಜಿನಿಯರ್ ದಿನವನ್ನು ಆಚರಿಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಇಂಜಿನಿಯರ್ ದಿನದ ಅಂಗವಾಗಿ ಇಂಜಿನಿಯರ‍್ಸ್‌ಗಳಿಗೆ ಶುಭಕೋರಿದ್ದಾರೆ.
ಟ್ವಿಟ್ ಮಾಡಿರುವ ಪ್ರಧಾನಿ ಮೋದಿ ಅವರು, ಅಸಮಾನ್ಯ ಇಂಜಿನಿಯರ್ ಆದ ಸರ್ ಎಂ. ವಿಶ್ವೇಶ್ವರಯ್ಯನವರಿಗೆ ಗೌರವವನ್ನು ಸಲ್ಲಿಸಿದ್ದಾರೆ. ಅಲ್ಲದೆ ಇಂಜಿನಿಯರ್‌ಗಳು ಶ್ರದ್ಧೆ ಮತ್ತು ಪರಿಶ್ರಮದ ಸಮನ್ವಯ ಎಂದು ಬಣ್ಣಿಸಿದ್ದಾರೆ. ಇಂಜಿನಿಯರ್‌ಗಳ ಹುರುಪು ಉತ್ಸಾಹಗಳಿಲ್ಲದೆ ಪ್ರಗತಿಯು ಅಪೂರ್ಣ ಎಂದಿದ್ದಾರೆ.
Engineers are synonymous with diligence and determination. Human progress would be incomplete without their innovative zeal. Greetings on #EngineersDay and best wishes to all hardworking engineers. Tributes to the exemplary engineer Sir M. Visvesvaraya on his birth anniversary.
— Narendra Modi (@narendramodi) September 15, 2019
ಕೇಂದ್ರ ರೈಲ್ವೆ ಸಚಿವರಾದ ಪಿಯುಶ್ ಗೋಯಲ್ ಅವರು ಇಂಜಿನಿಯರ್ ದಿನದ ಪ್ರಯುಕ್ತ ದೇಶದ ಜನರಿಗೆ ಶುಭಕೋರಿದ್ದು, ವಿಶ್ವೇಶ್ವರಯ್ಯ ಅವರು ಎಲ್ಲರಿಗೂ ಸ್ಫೂರ್ತಿಯ ಮೂಲ ಎಂದಿದ್ದಾರೆ.
Tributes to one of India’s foremost engineers Bharat Ratna M. Visvesvaraya on his birth anniversary. His contribution is a great source of inspiration for all.
Also, greetings to all the hardworking engineers on #EngineersDay. Your role in nation building is indispensable. pic.twitter.com/z1WkcK3DV7
— Piyush Goyal (@PiyushGoyal) September 15, 2019
ಅನೇಕ ಗಣ್ಯರು ಸರ್. ಎಂ. ವಿಶ್ವೇಶ್ವರಯ್ಯ ಅವರ ಜನುಮ ದಿನವನ್ನು ನೆನೆದು, ಇಂಜಿನಿಯರ್‌ಗಳ ದಿನದ ಶುಭಾಶಯವನ್ನು ಕೋರಿದ್ದಾರೆ.
ಸರ್ ಎಂ ವಿಶ್ವೇಶ್ವರಯ್ಯ ಅವರು 1861 ರ ಸೆ.15ರಂದು ಕರ್ನಾಟಕದ ಮುದ್ದೇನಹಳ್ಳಿ ಗ್ರಾಮದಲ್ಲಿ ಜನಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.