ಶ್ರೀನಗರ: ಜಮ್ಮು ಮತ್ತು ಶ್ರೀನಗರದಲ್ಲಿ ‘ಮೆಡಿ-ಸಿಟಿ’ಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದಾಗಿ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. ಈ ಮೆಡಿ-ಸಿಟಿಯಲ್ಲಿ ದೇಶದ ಹಲವಾರು ಆಸ್ಪತ್ರೆಗಳು ಹೂಡಿಕೆ ಮಾಡಲು ಉತ್ಸಾಹ ತೋರಿಸಿವೆ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಲಿಕ್ ಮಾತನಾಡಿದರು.
“ನಾವು ಜಮ್ಮು ಮತ್ತು ಶ್ರೀನಗರ ಎರಡರಲ್ಲೂ ‘ಮೆಡಿ-ಸಿಟಿ’ಯನ್ನು ಸ್ಥಾಪನೆ ಮಾಡಲು ನಿರ್ಧರಿಸಿದ್ದೇವೆ. ಇದಕ್ಕಾಗಿ ಭೂಮಿಯನ್ನು ನಿಗದಿಪಡಿಸಿದ್ದೇವೆ. ದೇಶಾದ್ಯಂತದ ಹಲವಾರು ಉತ್ತಮ ಆಸ್ಪತ್ರೆಗಳು ಇದರಲ್ಲಿ ಹೂಡಿಕೆ ಮಾಡಲು ಸಿದ್ಧವಾಗಿವೆ. ನಾವು ಅವರನ್ನು ಇಲ್ಲಿಗೆ ಕರೆತರುತ್ತೇವೆ ಮತ್ತು ಮೆಡಿ ಸಿಟಿಯಲ್ಲಿ ಅವರು ಕಾರ್ಯಾಚರಿಸುವಂತೆ ಮಾಡುತ್ತೇವೆ” ಎಂದರು.
ಜಮ್ಮು ಮತ್ತು ಕಾಶ್ಮೀರ ಈಗ ನೇರವಾಗಿ ರಾಷ್ಟ್ರ ರಾಜಧಾನಿಯನ್ನು ಕನೆಕ್ಟ್ ಆಗಿದೆ. ಇದು ಎಲ್ಲರಿಗೂ ಸುವರ್ಣಾವಕಾಶವಾಗಿದೆ. ಅಂದರೆ ಈಗ ಏನು ಕೇಳಿದರೂ ಇಲ್ಲಿನ ಜನರಿಗೆ ಕೇಂದ್ರ ಸರ್ಕಾರ ನೀಡುತ್ತದೆ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಆಡಳಿತದಲ್ಲಿದ್ದ ಯಾವುದೇ ಸರ್ಕಾರಕ್ಕಿಂತ ಹೆಚ್ಚಿನ ಕೆಲಸಗಳನ್ನು ರಾಜ್ಯಪಾಲನಾಗಿ ನಾನು ಮಾಡಿದ್ದೇನೆ ಎಂದು ಅವರು ಹೇಳಿದರು.
“ದೇಶದ ದೃಷ್ಟಿಯಲ್ಲಿ, ರಾಜ್ಯಪಾಲರು ಗಾಲ್ಫ್ ಆಡುವ ಮತ್ತು ಸಾರ್ವಜನಿಕರಿಗಾಗಿ ಏನನ್ನೂ ಮಾಡದ ವ್ಯಕ್ತಿಗಳಾಗಿರುತ್ತಾರೆ. ರಾಜ್ಯಪಾಲರ ಅವಧಿಯೆಂದರೆ ವಿಶ್ರಾಂತಿ ಪಡೆಯುವ ಅವಧಿ ಎಂದು ಭಾವಿಸಿದ್ದಾರೆ. ಆದರೆ ಕಳೆದ ಒಂದು ವರ್ಷದಲ್ಲಿ ನಾವು ಯಾರೂ ಮಾಡದ ಕೆಲಸವನ್ನು ಮಾಡಿದ್ದೇವೆ, ಚುನಾಯಿತ ಸರ್ಕಾರಕ್ಕಿಂತಲೂ ಹೆಚ್ಚಿನ ಕೆಲಸ ಮಾಡಿದ್ದೇವೆ” ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.