ಚೆನ್ನೈ: 37 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 600 ವರ್ಷ ಹಳೆಯ ಎರಡೂವರೆ ಅಡಿ ಎತ್ತರದ 100 ಕೆಜಿ ತೂಕದ ನಟರಾಜನ ಪ್ರತಿಮೆ ಕೊನೆಗೂ ತಮಿಳುನಾಡಿನ ಕಲ್ಲಿಡೈಕುರಿಚಿ ದೇಗುಲವನ್ನು ಇಂದು ಸೇರಿಕೊಂಡಿದೆ. ಒಂದು ವರ್ಷಗಳ ಹಿಂದೆ ಈ ವಿಗ್ರಹವನ್ನು ಪತ್ತೆ ಮಾಡಲಾಗಿತ್ತು.
ನವದೆಹಲಿಗೆ ಆಗಮಿಸಿದ್ದ ತಮಿಳುನಾಡಿನ ವಿಶೇಷ ಅಧಿಕಾರಿ ಎ ಜಿ ಪೊನ್ ಮಾಣಿಕಾವೆಲ್ ನೇತೃತ್ವದ ಐಡಲ್ ವಿಂಗ್ ತಂಡಕ್ಕೆ ಈ ವಿಗ್ರಹವನ್ನು ಹಸ್ತಾಂತರಿಸಲಾಗಿದ್ದು, ನಂತರ ಅದನ್ನು ರೈಲಿನ ಮೂಲಕ ಪುರಚಿ ತಲೈವಾರ್ ಡಾ ಎಂ ಜಿ ರಾಮಚಂದ್ರನ್ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ತರಲಾಯಿತು.
“ಯುಎಸ್ಎ, ಆಸ್ಟ್ರೇಲಿಯಾ ಮತ್ತು ಸಿಂಗಾಪುರದಂತಹ ವಿದೇಶಗಳಿಂದ ಇನ್ನೂ ಅನೇಕ ಕದ್ದ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ. ನನ್ನ ಅಧಿಕಾರಾವಧಿಯ ಉಳಿದ ತಿಂಗಳುಗಳಲ್ಲಿ ಇನ್ನಷ್ಟು ವಿಗ್ರಹಗಳನ್ನು ಮರಳಿ ತರಲು ಪ್ರಯತ್ನ ಮಾಡುತ್ತೇವೆ ” ಎಂದು ಮಣಿಕಾವೆಲ್ ಹೇಳಿದ್ದಾರೆ.
ವಿಗ್ರಹ ರೈಲ್ವೇ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಸೇರಿದ್ದ ಅಪಾರ ಸಂಖ್ಯೆಯ ಜನರು ಅದನ್ನು ಪೂಜೆ ಮಾಡಿ ಸ್ವಾಗತಿಸಿದರು ಮತ್ತು ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಕೊಂಡೊಯ್ದರು.
1982ರ ಜುಲೈ 5ರಂದು ಸುಮಾರು 37 ವರ್ಷಗಳ ಹಿಂದೆ ಈ ವಿಗ್ರಹವನ್ನು ಕಲ್ಲಿಡೈಕುರುಚಿಯಲ್ಲಿನ ಕುಲಸೇಕರಮುಡಯರ್ ಅರಮ್ವಲರ್ತ ನಾಯಕಿ ಅಮ್ಮನ್ ದೇಗುಲದಿಂದ ಕದಿಯಲಾಗಿತ್ತು. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಇದನ್ನು ಪತ್ತೆ ಮಾಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.