ಇಸ್ಲಾಮಾಬಾದ್: ಅಮೆರಿಕಾದ ಅನುದಾನಗಳನ್ನು ಬಳಸಿಕೊಂಡು ಪಾಕಿಸ್ಥಾನ ಉಗ್ರಗಾಮಿಗಳಿಗೆ ತರಬೇತಿಯನ್ನು ನೀಡುತ್ತಿತ್ತು ಎಂಬ ಸತ್ಯವನ್ನು ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರು ಕೊನೆಗೂ ಒಪ್ಪಿಕೊಂಡಿದ್ದಾರೆ.
“80 ರ ದಶಕದಲ್ಲಿ, ನಾವು ಅಫ್ಘಾನಿಸ್ಥಾನವನ್ನು ಆಕ್ರಮಿಸಿದ್ದ ಸೋವಿಯತ್ ವಿರುದ್ಧ ಜಿಹಾದ್ ಮಾಡಲು ಮುಜಾಹಿದ್ದೀನ್ ಜನರಿಗೆ ತರಬೇತಿ ನೀಡುತ್ತಿದ್ದೆವು. ಈ ಜನರಿಗೆ ಪಾಕಿಸ್ಥಾನದಿಂದ ತರಬೇತಿ ನೀಡಲಾಗುತ್ತಿತ್ತು, ಇದಕ್ಕಾಗಿ ಅಮೆರಿಕಾದ ಸಿಐಎಯಿಂದ ಧನಸಹಾಯ ಬರುತ್ತಿತ್ತು. ಈಗ ಒಂದು ದಶಕದ ನಂತರ ಅಮೆರಿಕನ್ನರು ಅಫ್ಘಾನಿಸ್ತಾನಕ್ಕೆ ಬಂದಿದ್ದಾರೆ”ಎಂದು ಖಾನ್ ರಷ್ಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಆ ಸಮಯದಲ್ಲಿ ಪಾಕಿಸ್ಥಾನ ತಟಸ್ಥವಾಗಿರಬೇಕಿತ್ತು, ಯಾಕೆಂದರೆ ಈಗ ಈ ಭಯೋತ್ಪಾದನಾ ಸಂಘಟನೆಗಳು ನಮ್ಮ ವಿರುದ್ಧವೇ ತಿರುಗಿ ಬಿದ್ದಿವೆ ಎಂದು ಖಾನ್ ಹೇಳಿದ್ದಾರೆ.
“ಆದರೆ ಈಗ ಭಾರತದಲ್ಲಿ ಇರುವ ಗುಂಪುಗಳನ್ನು ಜಿಹಾದಿಗಳು ಎಂದು ಹೇಳುವ ಬದಲು ಭಯೋತ್ಪಾದಕರು ಎಂದು ಹೇಳಲಾಗುತ್ತಿದೆ. ಯಾಕೆಂದರೆ ಅಮೆರಿಕನ್ನರು ಈಗ ಅವರ ಜೊತೆಗಿಲ್ಲ. ಆ ಸಮಯದಲ್ಲಿ ನಾವು ತಟಸ್ಥರಾಗಿದ್ದರೆ ಇಂದು ಅವರು ನಮ್ಮ ವಿರುದ್ಧ ತಿರುಗಿ ಬೀಳುವ ಸ್ಥಿತಿ ಬರುತ್ತಿರಲಿಲ್ಲ” ಎಂದಿದ್ದಾರೆ.
ಅಫ್ಘಾನಿಸ್ಥಾನದಲ್ಲಿ ಅಮೆರಿಕಾದ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ ನಂತರ ಪಾಕಿಸ್ಥಾನವು 70,000 ಕ್ಕೂ ಹೆಚ್ಚು ಜನರನ್ನು ಮತ್ತು 100 ಬಿಲಿಯನ್ ಡಾಲರ್ಗಳನ್ನು ಕಳೆದುಕೊಂಡಿದೆ ಎಂದು ಖಾನ್ ಹೇಳಿದ್ದಾರೆ. ಎಲ್ಲಾ ನಷ್ಟಗಳ ಹೊರತಾಗಿಯೂ, ವಾಷಿಂಗ್ಟನ್ ಅಫ್ಘಾನಿಸ್ಥಾನದಲ್ಲಿ ತನ್ನ ಹಿನ್ನಡೆಗೆ ಪಾಕಿಸ್ಥಾನವನ್ನು ದೂಷಿಸುತ್ತಿದೆ ಎಂದಿದ್ದಾರೆ.
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾಲಿಬಾನ್ ಜೊತೆಗಿನ ಶಾಂತಿ ಮಾತುಕತೆಗಳನ್ನು ರದ್ದುಗೊಳಿಸಿದ ನಂತರ ಮತ್ತು ಗುಂಪಿನ ಪ್ರತಿನಿಧಿಗಳೊಂದಿಗಿನ “ರಹಸ್ಯ ಸಭೆಯನ್ನು” ರದ್ದುಗೊಳಿಸಿದ ನಂತರ ಖಾನ್ ಅವರ ಅಭಿಪ್ರಾಯಗಳು ಹೊರಬಿದ್ದಿವೆ. ಯುಎಸ್ ಮತ್ತು ತಾಲಿಬಾನ್ ಪ್ರತಿನಿಧಿಗಳು ಶಾಂತಿ ಒಪ್ಪಂದ ನಡೆಸುವ ಸಲುವಾಗಿ ಒಂಬತ್ತು ಸುತ್ತಿನ ಮಾತುಕತೆ ನಡೆಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.