ನವದೆಹಲಿ: ಅಕ್ಟೋಬರ್ 2ರ ಒಳಗೆ ದೇಶದ ಎಲ್ಲಾ ಎ1 ಮತ್ತು ಎ ಕೆಟಗರಿಯ ರೈಲ್ವೇ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಕ್ರಶರ್ಗಳನ್ನು ಅಳವಡಿಸಲು ಭಾರತೀಯ ರೈಲ್ವೇಯು ನಿರ್ಧರಿಸಿದೆ.
ಮಾತ್ರವಲ್ಲದೇ, ಎ1 ಮತ್ತು ಎ ಕೆಟಗರಿಯ ರೈಲ್ವೇ ನಿಲ್ದಾಣಗಳಲ್ಲಿ ಕಸದ ಬುಟ್ಟಿಗಳ ಸಂಖ್ಯೆಯನ್ನೂ ಹೆಚ್ಚಿಸಲು ನಿರ್ಧರಿಸಲಾಗಿದೆ. ಇವುಗಳಲ್ಲಿ ಎಸ್ಎಚ್ಎಸ್ ಲೋಗೋಗಳೂ ಇರಲಿವೆ. ರೈಲ್ವೆ ಟಿಕೆಟಿಂಗ್ ಅಂಗಸಂಸ್ಥೆ IRCTC ತನ್ನ ವಿಸ್ತೃತ ಉತ್ಪಾದಕ ಜವಾಬ್ದಾರಿಯ ಭಾಗವಾಗಿ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಹಿಂದಿರುಗಿಸುವ ಯೋಜನೆಯನ್ನು ಆರಂಭಿಸಲಿದೆ. ಎಲ್ಲಾ ಇತರ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಬಾಟಲ್ ನಾಶಪಡಿಸುವ ಯಂತ್ರಗಳನ್ನು ತ್ವರಿತವಾಗಿ ಒದಗಿಸಲಾಗುತ್ತಿದೆ.
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ ಪರಮೇಶ್ವರನ್ ಅಯ್ಯರ್ ಅವರು, ರೈಲ್ವೆ ಮಂಡಳಿಯ ಅಧ್ಯಕ್ಷ ವಿಕೆ ಯಾದವ್ ಅವರನ್ನು ಭೇಟಿ ಮಾಡಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಕ್ಕಾಗಿ ರೈಲ್ವೆ ಮಾಡಬೇಕಾದ ಕೆಲಸದ ವಿಧಾನಗಳ ಬಗ್ಗೆ ಚರ್ಚಿಸಿದ್ದರು. ಭಾರತೀಯ ರೈಲ್ವೆಯು ದೇಶದಾದ್ಯಂತದ ಜನರೊಂದಿಗೆ ಅತಿದೊಡ್ಡ ಸಂಪರ್ಕವನ್ನು ಹೊಂದಿರುವ ಹಿನ್ನಲೆಯಲ್ಲಿ ಅದು ಕೈಗೊಳ್ಳುವ ಕಾರ್ಯಗಳು ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತವೆ.
ಅಲ್ಲದೇ, ರೈಲ್ವೆ ಸಚಿವಾಲಯವು ಸೆಪ್ಟೆಂಬರ್ 11 ರಿಂದ ಅಕ್ಟೋಬರ್ 2 ರವರೆಗೆ ‘ಸ್ವಚ್ಛ್ ಹೀ ಸೇವಾ ಸಪ್ತಾಹ’ವನ್ನು ಆಚರಿಸುತ್ತಿದೆ.
ರೈಲ್ವೆ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು, ಸಪ್ತಾಹದುದ್ದಕ್ಕೂ ರೈಲ್ವೆ ಆಡಳಿತವು ರೈಲ್ವೆ ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಸ್ವಚ್ಛತೆಯ ವಿಶೇಷ ಗಮನ ಹರಿಸಬೇಕು ಎಂದು ಸೂಚನೆಯನ್ನು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.