ಸ್ವಾಮಿ ವಿವೇಕಾನಂದರು ಭಾರತದಾದ್ಯಂತ ಪ್ರಯಾಣಿಸಿ, ಅವರು ನಾಗರಿಕತೆಯ ದೀಪ ಎಂದು ಬಣ್ಣಿಸಿದ ಕಾಶ್ಮೀರದಲ್ಲಿ ಉಳಿದುಕೊಂಡರು. ಮುಸ್ಲಿಂ ದಾಳಿಕೋರರ ಆಕ್ರಮಣದ ಮೂಲಕ ಮತ್ತು ಕಾಶ್ಮೀರಿ ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸುವ ಮೂಲಕ ಕಾಶ್ಮೀರವನ್ನು ಅನಾಗರಿಕತೆಗೆ ಒಳಪಡಿಸಲಾಯಿತು ಎಂದು ಅವರು ಹೇಳಿದ್ದರು. ಇಂದು, ಕಾಶ್ಮೀರದ ಇತಿಹಾಸದ ಬಗೆಗಿನ ಸ್ವಾಮಿ ವಿವೇಕಾನಂದ ಮಾತುಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ.
ವಿದೇಶದಲ್ಲಿದ್ದಾಗ ಸ್ವಾಮಿ ವಿವೇಕಾನಂದರು ಹಿಂದುತ್ವವನ್ನು ಪ್ರಚಾರ ಮಾಡಿದರು ಮತ್ತು ಸಾಮಾಜಿಕ-ಧಾರ್ಮಿಕ ಐತಿಹಾಸಿಕ ಕಾರಣಗಳನ್ನು ಪ್ರತಿಬಿಂಬಿಸಿದರು. ಹಿಮಾಲಯದಿಂದ ಹಿಡಿದು ದೂರದ ದೇಶಗಳವರೆಗೆ ಪ್ರಯಾಣಿಸಿದ ವಿವೇಕಾನಂದರ ಗಮನದಿಂದ ಕಾಶ್ಮೀರ ಪಾರಾಗಲಿಲ್ಲ. ಈ ಸನ್ನಿವೇಶದಲ್ಲಿ, ಏಪ್ರಿಲ್ 19, 1900 ರಂದು ಸ್ಯಾನ್ಫ್ರಾನ್ಸಿಸ್ಕೋದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣ, ಅವರ ಪೂಜ್ಯತೆಯ ಸ್ವರೂಪವಾಗಿದೆ. ಅವರು ತಮ್ಮ ಭಾಷಣದಲ್ಲಿ ಕಾಶ್ಮೀರ ರಾಜ್ಯದ ಮೇಲೆ ನಡೆದ ವಿದೇಶಿ ಮುಸ್ಲಿಂರ ಆಕ್ರಮಣ ಮತ್ತು ಸ್ಥಳೀಯ ಜನಸಂಖ್ಯೆಯ ಧರ್ಮದ ಪರಿವರ್ತನೆಯನ್ನು ವಿವರಿಸಿದ್ದಾರೆ.
ಸ್ವಾಮಿ ವಿವೇಕಾನಂದರು ತಮ್ಮ ಭಾಷಣದಲ್ಲಿ, ಭಾರತದ ಪ್ರಾಚೀನ ಇತಿಹಾಸದಲ್ಲಿ ಮೂರು ಪ್ರಸಿದ್ಧ ಟರ್ಕಿಶ್ ಚಕ್ರವರ್ತಿಗಳಾದ ಹಸ್ಕ್, ಯುಸ್ಕ್ ಮತ್ತು ಕನಿಷ್ಕ್ ಬಗ್ಗೆ ಉಲ್ಲೇಖಿಸುತ್ತದೆ ಎಂದು ಹೇಳಿದ್ದರು. ರಾಜ ಕನಿಷ್ಕ್, ಕನಿಷ್ಕ್ ಮಹಾಯನ್ ಎಂಬ ಹೆಸರಿನಿಂದ ಬೌದ್ಧಧರ್ಮವನ್ನು ಸ್ಥಾಪಿಸಿದ. ಬಹಳ ಸಮಯದ ನಂತರ, ಅವರಲ್ಲಿ ಅನೇಕರು ಇಸ್ಲಾಂಗೆ ಮತಾಂತರಗೊಂಡರು ಮತ್ತು ಮಧ್ಯ ಏಷ್ಯಾದ ಪ್ರದೇಶಗಳಾದ ಗಾಂಧಾರ್, ಕಾಬೂಲ್ ಇತ್ಯಾದಿಗಳಲ್ಲಿನ ಬೌದ್ಧ ಧರ್ಮದ ಮುಖ್ಯ ಕೇಂದ್ರಗಳು ನಾಶವಾದವು. ಮತಾಂತರಕ್ಕೂ ಮೊದಲು, ಈ ಜನರು ಇತರ ದೇಶದ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪುಸ್ತಕಗಳನ್ನು ಕಲಿಯುತ್ತಿದ್ದರು. ಆದರೆ ಇಸ್ಲಾಂಗೆ ಮತಾಂತರಗೊಂಡ ನಂತರ, ಅವರಿಗೆ ಆಸಕ್ತಿಯು ಕೇವಲ ಯುದ್ಧವೊಂದೇ ಆಯಿತು. ಜ್ಞಾನ ಮತ್ತು ನಾಗರಿಕತೆಯ ಸಂಕೇತ ಹೆಚ್ಚು ಪ್ರಚಲಿತಗೊಳ್ಳಲಿಲ್ಲ. ವಾಸ್ತವವಾಗಿ ಅವರು ಸೋಲಿಸಿದ ದೇಶಗಳು ಕ್ರಮೇಣ ಅದರ ನಾಗರಿಕತೆಯಿಂದ ವಂಚಿತವಾಯಿತು. ಪ್ರಸ್ತುತ ಅಫ್ಘಾನಿಸ್ಥಾನ ಗಾಂಧಾರ್ ಪ್ರದೇಶದಲ್ಲಿದೆ, ಆರಂಭಿಕವಾಗಿ ಬೌದ್ಧರು ನಿರ್ಮಾಣ ಮಾಡಿದ್ದ ಸ್ತೂಪಗಳು, ಕೇಂದ್ರಗಳು ಮತ್ತು ದೇವಾಲಯಗಳು ಇನ್ನೂ ಅಲ್ಲಿ ಇವೆ. ಆದರೆ ತುರ್ಕರ ಪ್ರಭಾವದಿಂದಾಗಿ ಮತ್ತು ಸ್ಥಳೀಯರ ಬಹುಪಾಲು ಮತಾಂತರದ ನಂತರ, ಈ ರಚನೆಗಳು ನಾಶವಾಗುತ್ತಾ ಬಂದಿವೆ ಮತ್ತು ಆಧುನಿಕ ಅಫ್ಘಾನಿಗಳು ಅನಾಗರಿಕ, ಮೂರ್ಖ ಜೀವಿಗಳಾಗಿ ಮಾರ್ಪಟ್ಟಿದ್ದಾರೆ. ಕೆಲವರು ಈ ಬೌದ್ಧ ರಚನೆಗಳು ಖಂಡಿತವಾಗಿಯೂ ಮನುಷ್ಯರಿಂದಲ್ಲ ದೇವರಿಂದ ನಿರ್ಮಿಸಲ್ಪಟ್ಟಿವೆ ಎಂದು ಅಭಿಪ್ರಾಯಪಡುತ್ತಾರೆ. ಪ್ರಸ್ತುತ ಇರಾನ್ ಶೋಚನೀಯ ಸ್ಥಿತಿಯಲ್ಲಿದೆ, ಏಕೆಂದರೆ ಅವರ ನಿಯಂತ್ರಕರು ಪ್ರಬಲರಾಗಿರುವ ಅನಾಗರಿಕ ಟರ್ಕನ್ನರು ಮತ್ತು ಅಲ್ಲಿನ ಜನರು ನಿಜವಾದ ಸುಸಂಸ್ಕೃತ ಪ್ರಾಚೀನ ಪರ್ಷಿಯನ್ನರ ವಂಶಸ್ಥರು. ಈ ರೀತಿಯಾಗಿ, ಸುಸಂಸ್ಕೃತ ಆರ್ಯರು ಗ್ರೀಕರ ವಂಶಸ್ಥರಲ್ಲಿ ಕೊನೆಯವರು ಎಂದೇ ಹೇಳಬಹುದು, ರೋಮನ್ನರು ಅನಾಗರಿಕ ತುರ್ಕರುಗಳಿಂದ ನಾಶವಾಗಿದ್ದಾರೆ. ಭಾರತದ ಮೊಘಲರು ಬಹುಶಃ ಈ ಉಗ್ರತೆಯಿಂದ ಹೊರಗುಳಿದಿದ್ದಾರೆ, ಬಹುಶಃ ಹಿಂದೂ ನೀತಿಗಳು ಮತ್ತು ರಕ್ತದ ಮಿಶ್ರಣದಿಂದಾಗಿ ಅವರು ಉಗ್ರತೆಯಿಂದ ಹೊರಗಿದ್ದಾರೆ. ರಜಪೂತರ, ಭಟ್ ಮತ್ತು ಚರಣ್ಗಳ ಐತಿಹಾಸಿಕ ಪುಸ್ತಕಗಳಲ್ಲಿ ಕೇವಲ ವಿಜಯಶಾಲಿಗಳು ಮುಸ್ಲಿಂ ಮತ್ತು ಟರ್ಕಿಶ್ ಯೋಧ ಕುಟುಂಬಗಳಿಂದ ಬಂದವರಾಗಿದ್ದಾರೆ. ಸದಾ ವಿಜಯಶಾಲಿಯಾಗುವ ಭಾರತೀಯ ಮುಸ್ಲಿಂ ಸೇನೆಯಲ್ಲಿ ಬೇರೆ ಬೇರೆ ಜಾತಿಯ ಸೈನಿಕರು ಇದ್ದರೂ ಕೂಡ ನಾಯಕತ್ವ ಮಾತ್ರ ಟರ್ಕರ ಕೈಯಲ್ಲಿ ಇರುತ್ತಿತ್ತು ಎಂಬುದು ಇದಕ್ಕೆ ಕಾರಣ.
ಕಾಶ್ಮೀರದಲ್ಲಿ ತಂಗಿದ್ದಾಗ ಪ್ರಕೃತಿಯೊಂದಿಗಿನ ತಮ್ಮ ಸಂಬಂಧವನ್ನು ಉಲ್ಲೇಖ ಮಾಡಿದ್ದ ಅವರು, ಕಣಿವೆಯ ಅಮೋಘ ಸೌಂದರ್ಯ, ಅಹ್ಲಾದದಾಯಕ ಪ್ರಕೃತಿಯ ಸಂಕೇತವಾದ ಎವರೆಸ್ಟ್ ಶಿಖರವು ಎಲ್ಲಾ ಅಡೆತಡೆಗಳ ನಡುವೆಯೂ ನಮ್ಮನ್ನು ಬಂಧಿಸಿಡುತ್ತದೆ, ಅದನ್ನು ಏರಲು ನಾನು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳುತ್ತಾರೆ. ಅದರ ಮೇಲಿನ ಪ್ರೀತಿ ಹುತಾತ್ಮರಾಗಲು ನಮಗೆ ಪ್ರೇರಣೆ ನೀಡುತ್ತದೆ, ಮನುಷ್ಯನೇ ಆ ಕಾರ್ಯಕ್ಕೆ ತನ್ನನ್ನು ಆರಿಸಿಕೊಳ್ಳುವಂತೆ ಅದು ಪ್ರೇರಣೆ ನೀಡುತ್ತದೆ. ನೋವಿನಲ್ಲೂ ಕಂಡುಕೊಂಡ ಮಾನವರ ಶಾಶ್ವತ ಪ್ರೀತಿಯನ್ನು ನಾವಲ್ಲಿ ಅನ್ವೇಷಿಸಲು ಬಯಸುತ್ತೇವೆ. ನಾವಲ್ಲಿ ಯಾರನ್ನೂ ಮರೆಯಲು ಬಯಸುವುದಿಲ್ಲ. ಹಿಮಾಲಯದ ಮಂಜುಗಡ್ಡೆಗಳು ಕಾಶ್ಮೀರದ ಭತ್ತದ ಗದ್ದೆಗಳನ್ನು ಆಲಂಗಿಸಿಕೊಳ್ಳಬೇಕು. ಆಕಾಶದಲ್ಲಿನ ಮಿಂಚು ಚಿಲಿಪಿಲಿಗುಟ್ಟುವ ಪಕ್ಷಿಗಳ ರಾಗಕ್ಕೆ ಹೊಂದಿಕೆಯಾಗಬೇಕು.
ಕಾಶ್ಮೀರ ಮತ್ತು ಪಂಜಾಬ್ನಿಂದ ಆಹ್ವಾನವನ್ನು ಸ್ವೀಕರಿಸಿದ ನಂತರ, ಸ್ವಾಮಿ ವಿವೇಕಾನಂದರು ಈ ಸ್ಥಳಗಳಿಗೆ ಭೇಟಿ ನೀಡಿದರು. ಅವರು ಒಂದು ತಿಂಗಳಿಗೂ ಹೆಚ್ಚು ಕಾಲ ಕಾಶ್ಮೀರದಲ್ಲಿ ಉಳಿದುಕೊಂಡರು. ಕಾಶ್ಮೀರದ ರಾಜ ಮತ್ತು ಅವನ ಸಹೋದರರು ಅವರ ಕೆಲಸವನ್ನು ಬಹಳವಾಗಿ ಶ್ಲಾಘಿಸಿದ್ದರು. ಮಾರಿ, ರಾವಲ್ಪಿಂಡಿ ಮತ್ತು ಜಮ್ಮುವಿನಲ್ಲಿ ಕೆಲವು ದಿನಗಳ ಕಾಲ ಅವರು ಉಳಿದುಕೊಂಡರು. ಅಲ್ಲಿನ ಸ್ಥಳೀಯ ಜನರನ್ನು ಉದ್ದೇಶಿಸಿ ಮಾತನಾಡಿದರು. ನಂತರ ಅವರು ಸಿಯಾಲ್ಕೋಟ್ಗೆ ಭೇಟಿ ನೀಡಿದರು, ಅಲ್ಲಿ ಒಂದು ಇಂಗ್ಲಿಷ್ ಮತ್ತು ಒಂದು ಹಿಂದಿಯಲ್ಲಿ ಎರಡು ಭಾಷಣಗಳನ್ನು ಮಾಡಿದರು. ಹಿಂದಿ ಭಾಷಣದ ವಿಷಯ “ಭಕ್ತಿ” ಎಂಬುದಾಗಿತ್ತು.
ಅವರ ಈ ಭಾಷಣದಲ್ಲಿ ಅವರು ಮತಾಂತರದ ಬಗ್ಗೆ ಮಾತನಾಡಿದರು ಮತ್ತು ಮತಾಂತರಗೊಂಡ ಮತ್ತು ಸ್ವಂತ ಧರ್ಮಕ್ಕೆ ಮರಳಲು ಬಯಸುವವರಿಗೆ ಪ್ರಾಯಶ್ಚಿತ್ತವನ್ನು ಸಂಘಟಿಸುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದರು. ಆದರೆ ನಮ್ಮಿಂದ ದೂರವಾದ ನೇಪಾಳ ಮತ್ತು ಕಾಶ್ಮೀರದಲ್ಲಿನ ಜನರಿಗೆ ಮತ್ತು ಹೊಸದಾಗಿ ನಮ್ಮ ಧರ್ಮ ಸ್ವೀಕರಿಸಲು ಬಯಸುವವರಿಗೆ ಪ್ರಾಯಶ್ಚಿತ್ತ ಸೂಕ್ತವಾಗುವುದಿಲ್ಲ.
ಕಾಶ್ಮೀರದ ಸೌಂದರ್ಯ ಅವರಿಂದ ಮರೆಯಾಗಿರಲಿಲ್ಲ. ಆಗಸ್ಟ್ 28, 1898 ರಂದು ಶ್ರೀನಗರದಿಂದ ಮಿಸ್ ಹಾಲೆ ಡಿಟಿ ಅವರಿಗೆ ಬರೆದ ಪತ್ರದಲ್ಲೂ ಅವರು ಕಾಶ್ಮೀರದ ಸೌಂದರ್ಯವನ್ನು ಕಾವ್ಯಾತ್ಮವಾಗಿ ವಿವರಿಸಿದ್ದರು. “ಓ ಮೇರಿ, ಕಮಲ ಮತ್ತು ಸರೋವರವನ್ನು ಹಂಸಗಳೊಂದಿಗೆ ಹೊಂದಿರುವ ಕಾಶ್ಮೀರವನ್ನು ನಿಮಗೆ ನೋಡಲು ಸಾಧ್ಯವಾಗುತ್ತದೆ. ಇಲ್ಲಿ ನೀವು ಶಾಂತಿಯಿಂದ ಅಂತ್ಯವನ್ನು ಕಾಣಬಹುದು. ಇದು ಭೂಮಿಯ ಸ್ವರ್ಗವಾಗಿದೆ, ಹೀಗಾಗಿ ಇಲ್ಲಿಗೆ ಭೇಟಿ ಕೊಡುವುದು ಅತ್ಯುತ್ತಮ ಚಿಂತನೆ” ಎಂದಿದ್ದರು.
ಕಾಶ್ಮೀರ ಭೂ ಲೋಕದ ಸ್ವರ್ಗ. ಆದರೆ ಪರಕೀಯರ ದಾಳಿಯಿಂದಾಗಿ ಅದು ಇಂದು ಕುದಿಯುತ್ತಿದೆ. ಅಲ್ಲಿ ಅನಾಗರಿಕತೆ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಆಗಲೇ ಸ್ವಾಮಿ ವಿವೇಕಾನಂದರು ಉಲ್ಲೇಖ ಮಾಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.