News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪ್ರವಾಸೋದ್ಯಮಕ್ಕೆ ಉತ್ತೇಜನ : 51 ಶಕ್ತಿ ಪೀಠಗಳ ಪ್ರತಿರೂಪವನ್ನು ಸ್ಥಾಪನೆ ಮಾಡಲಿದೆ ತ್ರಿಪುರಾ

ತ್ರಿಪುರಾ: ದೇಶದಲ್ಲಿರುವ 51 ಶಕ್ತಿ ಪೀಠಗಳ ಪ್ರತಿರೂಪವನ್ನು ತನ್ನ ರಾಜ್ಯದಲ್ಲಿ ಸ್ಥಾಪನೆ ಮಾಡಲು ತ್ರಿಪುರ ಸರ್ಕಾರ ನಿರ್ಧಾರ ಮಾಡಿದೆ. ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಮಾತ್ರವಲ್ಲದೆ ದೇವತಾಮುರ ಮತ್ತು ಉನ್ನಕೋಟಿ ಹಿಲ್ಸ್‌ಗಳಲ್ಲಿ ಅವುಗಳ ಕಲ್ಲಿನ ವಾಸ್ತುಶಿಲ್ಪಗಳನ್ನು ಕಣ್ತುಂಬಿಕೊಳ್ಳಲು ಹೆಲಿಕಾಪ್ಟರ್ ಸೇವೆಯನ್ನು ಆರಂಭಿಸಿದೆ.

ಒಟ್ಟು 51 ಶಕ್ತಿ ಪೀಠಗಳಿವೆ, ಈ ಶಕ್ತಿ ಪೀಠಗಳ ಪೈಕಿ 38 ಭಾರತದಲ್ಲೇ ಇವೆ. ಉಳಿದ 6 ಬಾಂಗ್ಲಾದೇಶದಲ್ಲಿದೆ, ಮೂರು ನೇಪಾಳದಲ್ಲಿದೆ, ಪಾಕಿಸ್ತಾನದಲ್ಲಿ 2 ಮತ್ತು ಟಿಬೆಟ್­ನಲ್ಲಿ ಮತ್ತು ಶ್ರೀಲಂಕಾದಲ್ಲಿ ತಲಾ ಒಂದು ಶಕ್ತಿ ಪೀಠಗಳಿವೆ.

ತ್ರಿಪುರ ಪ್ರವಾಸೋದ್ಯಮ ಇಲಾಖೆಯು 51 ಶಕ್ತಿ ಪೀಠಗಳು ಪ್ರತಿರೂಪವನ್ನು ಉದಯಪುರದ ತ್ರಿಪುರೇಶ್ವರಿ ದೇಗುಲದ ಸಮೀಪ ನಿರ್ಮಾಣ ಮಾಡಲು ನಿರ್ಧರಿಸಿದೆ.

ಶಕ್ತಿ ಪೀಠಗಳ ಪ್ರತಿರೂಪವನ್ನು ಸ್ಥಾಪನೆ ಮಾಡುವ ಸಲುವಾಗಿ ತ್ರಿಪುರ ಸರ್ಕಾರವು 44 ಕೋಟಿ ರೂಪಾಯಿಗಳ ಯೋಜನೆಯನ್ನು ಸಿದ್ಧಪಡಿಸಿದ್ದು, ಈಗಾಗಲೇ ಅದರ ಪ್ರಾಥಮಿಕ ಯೋಜನಾ ವರದಿಯನ್ನು ಅಂತಿಮಗೊಳಿಸಿದೆ. ತನ್ನ ಪ್ರಸ್ತಾಪನೆಯನ್ನು 15ನೇ ಹಣಕಾಸು ಆಯೋಗದ ಅನುಮೋದನೆಗಾಗಿ ಕಳುಹಿಸಿಕೊಟ್ಟಿದೆ.

ತ್ರಿಪುರ ಸರಕಾರವು ‘ತ್ರಿಪುರ ಹವಾಯಿ ಸಫರ್’ ಎಂಬ ಹೆಲಿಕಾಪ್ಟರ್ ಯೋಜನೆಯನ್ನು ಆರಂಭಿಸಿದ್ದು, ಶನಿವಾರ ಇದು ಪ್ರವಾಸಿಗಳಿಗೆ ಲಭ್ಯವಿರಲಿದೆ. ಈ ಹೆಲಿಕಾಪ್ಟರ್ ಸೇವೆಯಿಂದ ಗೋಮತಿ ಜಿಲ್ಲೆಯ ದೇವತಾಮುರ ಮತ್ತು ಉನ್ನಕೋಟಿ ಜಿಲ್ಲೆಯ ಉನ್ನಕೋಟಿಗೆ ಭೇಟಿ ನೀಡಲು ಬಯಸುವ ಪ್ರವಾಸಿಗರಿಗೆ ಪ್ರಯೋಜನವಾಗಲಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top