ನವದೆಹಲಿ: ಬಲದೇವ್ ಕುಮಾರ್ ಎಂಬ ಪಾಕಿಸ್ಥಾನದ ಮಾಜಿ ಸಿಖ್ ಸಮುದಾಯದ ಶಾಸಕ ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಬೇಸತ್ತು ಭಾರತದಲ್ಲಿ ಆಶ್ರಯವನ್ನು ಕೇಳಿದ್ದಾರೆ.
ಪಾಕಿಸ್ಥಾನದಲ್ಲಿ ಹಿಂದು ಮತ್ತು ಸಿಖ್ ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಿರಂತರವಾದ ದೌರ್ಜನ್ಯಗಳು ನಡೆಯುತ್ತಿದೆ ಎಂದು ಆರೋಪಿಸಿರುವ ಅವರು, ತನಗೆ ಆಶ್ರಯ ನೀಡುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
“ಕೇವಲ ಅಲ್ಪಸಂಖ್ಯಾತರು ಮಾತ್ರವಲ್ಲ ಪಾಕಿಸ್ಥಾನದಲ್ಲಿ ಮುಸ್ಲಿಮರು ಕೂಡ ಸುರಕ್ಷಿತವಾಗಿಲ್ಲ. ಹಲವಾರು ಸಂಕಷ್ಟಗಳ ನಡುವೆ ನಾವು ಪಾಕಿಸ್ಥಾನದಲ್ಲಿ ಬದುಕುತ್ತಿದ್ದೇವೆ. ನನಗೆ ಆಶ್ರಯ ನೀಡುವಂತೆ ಭಾರತ ಸರಕಾರಕ್ಕೆ ನಾನು ಮನವಿ ಮಾಡುತ್ತೇನೆ, ಪಾಕಿಸ್ಥಾನಕ್ಕೆ ನಾನೆಂದೂ ವಾಪಸ್ ಹೋಗಲು ಬಯಸುವುದಿಲ್ಲ”ಎಂದಿದ್ದಾರೆ.
ಪಾಕಿಸ್ಥಾನದಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಏಜೆನ್ಸಿಗಳಿಂದ ವ್ಯಾಪಕವಾದ ಧಾರ್ಮಿಕ ಕಿರುಕುಳಗಳು ನಡೆಯುತ್ತಿದೆ ಎಂದಿರುವ ಅವರು, ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಅವರ ನವ ಪಾಕಿಸ್ಥಾನ ಈಡೇರದ ಕನಸು ಎಂದಿದ್ದಾರೆ. ಜಮ್ಮು-ಕಾಶ್ಮೀರದಲ್ಲಿನ ವಿಶೇಷ ಅಧಿಕಾರವನ್ನು ಭಾರತ ವಾಪಸ್ ಪಡೆದ ಬಳಿಕ ಪಾಕಿಸ್ಥಾನದಲ್ಲಿ ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯ ಉತ್ತುಂಗಕ್ಕೇರಿದೆ ಎಂದಿದ್ದಾರೆ.
ನಂಕನ ಸಹಿಬ್ ಪ್ರಾಂತ್ಯದಲ್ಲಿ ಸಿಖ್ ಸಮುದಾಯದ ಧಾರ್ಮಿಕ ಮುಖಂಡರೊಬ್ಬರ ಮಗಳನ್ನು ಅಪಹರಿಸಿ ಯುವಕರು ಮದುವೆಯಾದ ಬಳಿಕ ಪಾಕಿಸ್ಥಾನ ಅಲ್ಪಸಂಖ್ಯಾತರಿಗೆ ಸುರಕ್ಷಿತವಲ್ಲ ಎಂಬುದು ಅರಿವಾಗಿದೆ ಎಂದಿದ್ದಾರೆ. ಧಾರ್ಮಿಕ ಮುಖಂಡರೇ ಸುರಕ್ಷಿತವಲ್ಲ ಎಂಬುದಾದರೆ ಬೇರೆಯವರನ್ನು ಯಾರು ಕೇಳುತ್ತಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.