ರೋಹ್ಟಕ್ : ಪ್ರಧಾನಿ ನರೇಂದ್ರ ಮೋದಿ ಅವರು ಹರಿಯಾಣದ ರೋಹ್ಟಕ್ನಲ್ಲಿ ಭಾನುವಾರ ಸಮಾವೇಶವನ್ನು ಆಯೋಜನೆಗೊಳಿಸಿದ್ದರು. ಈ ಸಮಾವೇಶವು ಪ್ರಕೃತಿ ಸಂರಕ್ಷಣೆಯ ನಿಟ್ಟಿನಲ್ಲಿ ಮಹತ್ವಪೂರ್ಣವಾದ ಸಂದೇಶವನ್ನು ರವಾನಿಸಿದೆ. ಸಮಾವೇಶವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಇಲ್ಲಿ ಕೈಗೊಳ್ಳಲಾಗಿತ್ತು.
ರೋಟಕ್ ಜಿಲ್ಲಾಡಳಿತವು ಸಮಾವೇಶದ ಹಿನ್ನೆಲೆಯಲ್ಲಿ 4000 ಮಣ್ಣಿನ ಮಡಕೆಗಳನ್ನು ನೀರಿನ ಶೇಖರಣೆಗಾಗಿ ತಂದಿಟ್ಟಿತ್ತು. ಏಕ ಬಳಕೆಯ ಪ್ಲಾಸ್ಟಿಕನ್ನು ಬಳಸದಂತೆ ಪ್ರಧಾನಿ ಮೋದಿಯವರು ಕರೆ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿತ್ತು.
ಸಮಾವೇಶದ ಆವರಣದಲ್ಲಿ ನೀರಿನ ಬಾಟಲಿಗಳು ಸೇರಿದಂತೆ ಯಾವುದೇ ಪ್ಲಾಸ್ಟಿಕ್ಗಳನ್ನು ಬಳಸಬಾರದೆಂದು ಜಿಲ್ಲಾಡಳಿತವು ಜನರಿಗೆ ಮನವಿಯನ್ನು ಮಾಡಿಕೊಂಡಿತ್ತು.
ಇದೇ ಮೊದಲ ಬಾರಿಗೆ ಪ್ರಧಾನಿಯವರ ಸಮಾವೇಶದಲ್ಲಿ 3000 ಮಣ್ಣಿನ ಮಡಕೆಗಳನ್ನು ಬಳಕೆ ಮಾಡಲಾಗಿದೆ ಎಂದು ಹರಿಯಾಣ ಕೇಡರ್ ಐಪಿಎಸ್ ಅಧಿಕಾರಿ ಪಂಕಜ್ ನೈನ್ ಹೇಳಿದ್ದಾರೆ. ಈ ಮಣ್ಣಿನ ಮಡಕೆಗಳು 2 ಲಕ್ಷ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ರಿಪ್ಲೇಸ್ ಮಾಡಿವೆ ಎಂದು ಅವರು ಹೇಳಿದ್ದಾರೆ.
3000 Earthen Pots will b used for the first time in Hon’ble PM @narendramodi rally tomorrow in Rohtak, aftr his decision of nt using plastic. It will replace 2 lakhs plastic bottles, doing great for local artisans n environment.
Thnks @PMOIndia @mlkhattar for grt decision 🙏 pic.twitter.com/GY76O8jn7w— Pankaj Nain IPS (@ipspankajnain) September 7, 2019
ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ನೀರಿನ ಸಂರಕ್ಷಣೆಯನ್ನು ಮಾಡುವ ಸಲುವಾಗಿ ಮಳೆನೀರುಕೊಯ್ಲು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಿಕೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.