ನವದೆಹಲಿ : ಇದುವರೆಗೆ ಗೋವಿನ ಹಾಲಿನಿಂದ ತಯಾರಿಸಿದ ಉತ್ಪನ್ನಗಳು ಮಾತ್ರ ವಾಣಿಜ್ಯೀಕರಣಗೊಂಡಿತ್ತು, ಇನ್ನು ಮುಂದೆ ಹಸುವಿನ ಸಗಣಿ ಮತ್ತು ಗೋಮೂತ್ರದಿಂದ ತಯಾರಾದ ಉತ್ಪನ್ನಗಳೂ ವಾಣಿಜ್ಯ ರೂಪ ಪಡೆಯಲಿದೆ. ಗೋಮಯ (ಗೋವಿನ ಸಗಣಿ) ಮತ್ತು ಗೋಮೂತ್ರದ ಉತ್ಪನ್ನಗಳ ಸ್ಟಾರ್ಟ್ಅಪ್ಗಳಿಗೆ 60ರಷ್ಟು ಆರಂಭಿಕ ಅನುದಾನವನ್ನು ನೀಡಲು ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಹೊಸದಾಗಿ ರಚನೆಗೊಂಡಿರುವ ರಾಷ್ಟ್ರೀಯ ಕಾಮಧೇನು ಆಯೋಗದ ಮುಖ್ಯಸ್ಥ ವಲ್ಲಭ ಕಠಾರಿಯಾ ಅವರು ಮಾಹಿತಿಯನ್ನು ನೀಡಿದ್ದು, “ಗೋ ಆಧಾರಿತ ಉದ್ಯಮಶೀಲತೆಯ ಕಡೆಗೆ ಮುಖ ಮಾಡುವಂತೆ ನಾವು ಯುವಜನಾಂಗವನ್ನು ಪ್ರೇರೇಪಿಸುತ್ತೇವೆ. ಕೇವಲ ಗೋವಿನ ಹಾಲಿನಿಂದ ಮಾತ್ರವಲ್ಲದೆ ಗೋಮೂತ್ರ ಮತ್ತು ಸಗಣಿಯಿಂದ ಕೂಡ ಆದಾಯವನ್ನು ಗಳಿಸಬಹುದು ಎಂಬ ಬಗ್ಗೆ ನಾವು ಅರಿವು ಮೂಡಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ” ಎಂದಿದ್ದಾರೆ.
ಹಸುವಿನ ಸಗಣಿ ಮತ್ತು ಗೋಮೂತ್ರವನ್ನು ಔಷಧೀಯ ಮತ್ತು ಕೃಷಿ ಉದ್ದೇಶಗಳಿಗೆ ಬಳಸಿಕೊಳ್ಳಬಹುದಾಗಿದೆ. ಹೀಗಾಗಿ ಯುವಕರು ಗೋ ಆಧಾರಿತ ಉದ್ಯಮಶೀಲತೆಯತ್ತ ಮುಖಮಾಡಬೇಕು ಎಂದಿದ್ದಾರೆ. ಸರ್ಕಾರವು ಗೋ ಆಧಾರಿತ ಸ್ಟಾರ್ಟ್ಅಪ್ಗಳಿಗೆ ಶೇಕಡ 60ರಷ್ಟು ಆರಂಭಿಕ ಅನುದಾನವನ್ನು ನೀಡಲಿದೆ ಎಂದಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಸರಕಾರವು ಕಾಮಧೇನು ಆಯೋಗವನ್ನು ರಚನೆ ಮಾಡಿದೆ. ಹಾಲು ಕೊಡುವುದನ್ನು ನಿಲ್ಲಿಸಿದ ಗೋವುಗಳು ಕೂಡ ಪ್ರಯೋಜನಕ್ಕೆ ಬರುವಂತೆ ಮಾಡುವ ಉದ್ದೇಶದೊಂದಿಗೆ ಆಯೋಗವು ಕಾರ್ಯೋನ್ಮುಖವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.