ನವದೆಹಲಿ: ದೇಶದ ಘಾಟಾನುಘಟಿ ನಾಯಕರು ಎನಿಸಿದ್ದ, ಪ್ರಧಾನಮಂತ್ರಿಗಳಾಗಿ ರಾಜ್ಯಭಾರ ಮಾಡಿದ್ದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ವಾಜಪೇಯಿ ಅವರನ್ನು ಹಿಂದಿಕ್ಕಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಅತ್ಯುತ್ತಮ ಪ್ರಧಾನಿಯಾಗಿ ಹೊರಹೊಮ್ಮಿದ್ದಾರೆ. ಎಬಿಪಿ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಇದುವರೆಗಿನ ಅತ್ಯುತ್ತಮ ಪ್ರಧಾನಿ ಎನಿಸಿಕೊಂಡಿದ್ದಾರೆ.
ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ಮೋದಿಯವರು ತಮ್ಮ ಮೊದಲ 100 ದಿನಗಳನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಅಧಿಕಾರಕ್ಕೆ ಬಂದು ಐದೂವರೆ ವರ್ಷಗಳು ಆಗುತ್ತಾ ಬಂದರೂ ಅವರಿನ್ನೂ ದೇಶದ ಜನಪ್ರಿಯ ನಾಯಕ. ಎಬಿಪಿ ನಡೆಸಿದ ಸಮೀಕ್ಷೆಯಲ್ಲಿ ಅವರು, ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ವಾಜಪೇಯಿ ಅವರನ್ನು ಹಿಂದಿಕ್ಕಿ ಅತ್ಯುತ್ತಮ ಪ್ರಧಾನಿ ಎನಿಸಿಕೊಂಡಿದ್ದಾರೆ.
ಎಬಿಪಿ ನ್ಯೂಸ್ ವಾಹಿನಿಯು ದೇಶದ ಎಲ್ಲಾ ರಾಜ್ಯಗಳ 11,308 ಜನರನ್ನು ಸಂದರ್ಶಿಸಿ ಈ ಸಮೀಕ್ಷೆಯನ್ನು ಸಿದ್ಧಪಡಿಸಿದೆ. ಸಮೀಕ್ಷೆಯಲ್ಲಿ ಶೇ.67ರಷ್ಟು ಜನರು ಮೋದಿ ಅವರನ್ನು ಭಾರತ ಎಂದೂ ಕಂಡಿರದ ಅತ್ಯಂತ ಪ್ರಬಲ ಪ್ರಧಾನಿ ಎಂದು ಹೇಳಿದ್ದಾರೆ. ಶೇ.10.1ರಷ್ಟು ಮಂದಿ ಇಂದಿರಾಗಾಂಧಿ ಅವರನ್ನು ಮತ್ತು ಶೇ.9.7ರಷ್ಟುಮಂದಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಹಾಗೂ ಶೇ. 7.2ರಷ್ಟುಜನರು ಜವಾಹರಲಾಲ್ ನೆಹರು ಅವರನ್ನು ದೇಶದ ಅತ್ಯುತ್ತಮ ಪ್ರಧಾನಿ ಎಂದು ಹೇಳಿದ್ದಾರೆ.
ಇನ್ನು ಮೋದಿ ಅವರ 100 ದಿನದ ಆಡಳಿತ ಹಾಗೂ ಕಾರ್ಯ ವಿಧಾನಕ್ಕೆ ಬಹುತೇಕ ಜನರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಶೇ.41ರಷ್ಟುಮಂದಿ ಮೋದಿ ಸರ್ಕಾರದ ಆಡಳಿತ ‘ಅತ್ಯುತ್ತಮ’ವಾಗಿದೆ ಎಂದರೆ, ಶೇ.27ರಷ್ಟುಮಂದಿ ಉತ್ತಮವಾಗಿದೆ ಎಂದು ಹೇಳಿದ್ದಾರೆ.
ಶೇ.54ರಷ್ಟುಮಂದಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ್ದು ಮೋದಿ ಸರ್ಕಾರದ ಅತ್ಯುತ್ತಮ ಸಾಧನೆ ಎಂದು ಹೇಳಿದ್ದಾರೆ. ಈ ನಿರ್ಧಾರದಿಂದ ಎನ್ಡಿಎ ಸರ್ಕಾರಕ್ಕೆ ಪ್ರಯೋಜನವಾಗಲಿದೆ ಎಂದು ಶೇ. 73.1ರಷ್ಟು ಜನರು ಹೇಳಿದ್ದಾರೆ. ಭಯೋತ್ಪಾದನೆಯ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಿದ್ದು ಸರ್ಕಾರದ ಮಹತ್ವದ ಸಾಧನೆಗಳ ಪೈಕಿ ಒಂದು ಎಂದು ಶೇ.21ರಷ್ಟುಮಂದಿ ಅಭಿಪ್ರಾಯಿಸಿದ್ದಾರೆ.
ಸಮೀಕ್ಷೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆಯೂ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಾ ಅವರ ಸಾಧನೆ ಅತ್ಯುತ್ತಮ ಎಂದು ಶೇ.39.7ರಷ್ಟು ಮಂದಿ, ಉತ್ತಮ ಎಂದು ಶೇ.24.3ರಷ್ಟು ಮಂದಿ ಹೇಳಿದ್ದಾರೆ. ಮೋದಿ ಸರ್ಕಾರದಲ್ಲಿ ಅತ್ಯಂತ ಜನಪ್ರಿಯ ಸಚಿವರ ಪೈಕಿ ಶೇ.50.8ರಷ್ಟು ಮಂದಿ ಅಮಿತ್ ಶಾ ಅವರನ್ನು ಆಯ್ಕೆ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.