ಬೆಂಗಳೂರು : ಚಂದ್ರಯಾನ-2 ಲ್ಯಾಂಡರ್ನಿಂದ ಸಂಪರ್ಕ ಕಳೆದುಕೊಂಡ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೋ ವಿಜ್ಞಾನಿಗಳಿಗೆ ಸಾಂತ್ವನವನ್ನು ನೀಡಿದ್ದಾರೆ. ಇಡೀ ಭಾರತ ನಿಮ್ಮೊಂದಿಗಿದೆ, ಎಂದಿಗೂ ಎದೆಗುಂದಬೇಡಿ. ಚಂದ್ರನ ಮೇಲಿನ ನಮ್ಮ ಶ್ರದ್ಧೆ ಇನ್ನಷ್ಟು ಬಲಿಷ್ಠವಾಗಿದೆ ಮತ್ತು ಉತ್ತಮವಾದುದು ಇನ್ನಷ್ಟೇ ಹೊರಬರಬೇಕಿದೆ ಎಂದು ಮೋದಿ ವಿಜ್ಞಾನಿಗಳಿಗೆ ಭರವಸೆ ತುಂಬಿದ್ದಾರೆ.
“ನೀವು ದೇಶಕ್ಕಾಗಿ ಬದುಕುತ್ತಿರುವವರು. ನಿಮ್ಮ ಕನಸುಗಳನ್ನು ತ್ಯಾಗ ಮಾಡಿ, ದೇಶದ ಘನತೆಯನ್ನು ಹೆಚ್ಚಿಸಲು ನಿದ್ದೆಯಿಲ್ಲದೆ ರಾತ್ರಿ ಕಳೆಯುವವರು” ಎಂದು ಮೋದಿ ಇಸ್ರೋ ಕೇಂದ್ರ ಕಛೇರಿಯಲ್ಲಿ ಇಂದು ಬೆಳಿಗ್ಗೆ ವಿಜ್ಞಾನಿಗಳನ್ನು ಉದ್ದೇಶಿಸಿ ಹೇಳಿದರು.
“ಕಳೆದ ರಾತ್ರಿ, ನಿಮ್ಮ ಮನಸ್ಥಿತಿಯನ್ನು ನಾನು ಅರ್ಥ ಮಾಡಿಕೊಂಡೆ. ನಿಮ್ಮ ಮುಖದಲ್ಲಿನ ನೋವನ್ನು ಅರಿತುಕೊಂಡೆ. ರಾತ್ರಿ ಇಡೀ ನೀವು ನಿದ್ರೆ ಮಾಡಿಲ್ಲ ಎಂದು ನಿಮ್ಮ ಕಣ್ಣುಗಳೇ ಹೇಳುತ್ತವೆ” ಎಂದರು.
30 ನಿಮಿಷಗಳ ಕಾಲ ಮಾತನಾಡಿದ ಪ್ರಧಾನಿ ಮೋದಿ, ಶೀಘ್ರದಲ್ಲೇ ಹೊಸ ಉದಯ ಮತ್ತು ಪ್ರಕಾಶಮಾನವಾದ ನಾಳೆ ಬಂದೇ ಬರುತ್ತಿದೆ.
“ನಮ್ಮ ಯೋಜನೆಯಂತೆ ನಾವು ಚಂದ್ರನ ಮೇಲ್ಮೈಯನ್ನು ತಲುಪದಿರಬಹುದು. ಆದರೆ ಇಸ್ರೋಗೆ ಯಶಸ್ಸಿನ ವಿಶ್ವಕೋಶವನ್ನೇ ಹೊಂದಿದೆ, ಒಂದು ಅಥವಾ ಎರಡು ಸೋಲು ಅದರ ಯಶಸ್ಸಿಗೆ ಧಕ್ಕೆಯಾಗಲು ಸಾಧ್ಯವಿಲ್ಲ” ಎಂದಿದ್ದಾರೆ.
“ನಿಮ್ಮನ್ನು ಈ ದೇಶ ಎಂದಿಗೂ ನೆನಪಿನಲ್ಲಿ ಇಟ್ಟುಕೊಳ್ಳಲಿದೆ. ನಿನ್ನೆ ರಾತ್ರಿ ನಿಮ್ಮೊಂದಿಗೆ ಇದ್ದೆ, ನಿಮ್ಮ ಕಣ್ಣುಗಳ ನಿರೀಕ್ಷೆ ಅರ್ಥವಾಗಿದೆ. ನಿಮ್ಮ ಜೊತೆ ಮಾತಾಡಿ ಹೋಗಲೇ ಬೇಕೆಂದು ತೀರ್ಮಾನಿಸಿದೆ. ನೀವು ಭಾರತಮಾತೆಯ ಜಯಕ್ಕೋಸ್ಕರ ಹೋರಾಡುವವರು, ನಿಮ್ಮ ದುಗುಡದ ಕ್ಷಣಗಳೊಂದಿಗೆ ನಾನು ನಿಮ್ಮೊಂದಿಗೆ ಇದ್ದೆ. ದುಗುಡದ ಜೊತೆಗೆ ಗೆದ್ದೇ ಗೆಲ್ಲುವ ನಿಮ್ಮ ಛಲವನ್ನು ಕಂಡೆ. ಇವತ್ತು ಕೆಲ ಅಡ್ಡಿಗಳಾಗಿವೆ, ಅಡ್ಡಿ ಎಂದಿಗೂ ನಮ್ಮ ದೌರ್ಬಲ್ಯ ಅಲ್ಲ, ಈ ಅಡ್ಡಿಗೆ ಬೆದರಿ ನಾವು ನಮ್ಮ ಯಾನ ನಿಲ್ಲಿಸುವುದಿಲ್ಲ” ಎಂದಿದ್ದಾರೆ.
“ವಿಜ್ಞಾನಕ್ಕೆ ಸೋಲು ಎನ್ನುವುದಿಲ್ಲ, ಪ್ರಯೋಗಗಳಷ್ಟೇ ಗೊತ್ತು. ಪ್ರತೀ ಪ್ರಯೋಗವೂ ಹೊಸ ಜ್ಞಾನವನ್ನು ನೀಡುತ್ತದೆ. ಚಂದ್ರಯಾನ ನಿರೀಕ್ಷೆಯಲ್ಲಿ ಸ್ವಲ್ಪ ಎಡವಿದರೂ ನಮಗೆ ಸೋಲಾಗಿಲ್ಲ. ಇಡೀ ದೇಶ ಆನಂದದಿಂದ ಇದೆ, ಜೊತೆಗೆ ಎಲ್ಲರೂ ಗರ್ವ ಪಟ್ಟಿದ್ದಾರೆ. ನಾನು ಎಲ್ಲೇ ಇದ್ದರೂ ಚಂದ್ರಯಾನದ ಮಾಹಿತಿ ಪಡೆದುಕೊಳ್ಳುತ್ತಿದೆ. ವರ್ಷಗಟ್ಟಲೇ ನಿಮ್ಮ ಪ್ರಯತ್ನಗಳ ಅರಿವು ನನ್ನಲ್ಲಿದೆ. ಇಸ್ರೋ ಮೊದಲ ಯತ್ನದಲ್ಲೇ ಮಂಗಳ ಗ್ರಹದಲ್ಲಿ ತಿರಂಗಾ ಹಾರಿಸಿದೆ. ಚಂದ್ರನಲ್ಲಿ ನೀರಿದೆ ಎಂದು ಮೊದಲು ಜಗತ್ತಿಗೆ ತಿಳಿಸಿದ್ದು ಭಾರತ. ಈ ಚಂದ್ರಯಾನವು ಹೊಸದನ್ನು ಹೇಳಲು ಹೊರಟಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.