ವಾಡ್ಲಿವೋಸ್ಟಾಕ್: ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಅಲ್ಲಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಉನ್ನತ ನಿಯೋಗ ಮಟ್ಟದ ಮಾತುಕತೆಯನ್ನು ನಡೆಸಿದ್ದಾರೆ. 5ನೇ ಈಸ್ಟರ್ನ್ ಎಕನಾಮಿಕ್ ಫೋರಂ ಸೈಡ್ ಲೈನಿನಲ್ಲಿ ಈ ಮಾತುಕತೆ ಜರುಗಿದೆ.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಐತಿಹಾಸಿಕ ಕ್ಷಣವು ಭಾರತ ಮತ್ತು ರಷ್ಯಾ ಬಾಂಧವ್ಯಕ್ಕೆ ಹೊಸ ಆಯಾಮವನ್ನು ನೀಡಲಿದೆ ಎಂದು ಬಣ್ಣಿಸಿದ್ದಾರೆ.
“ಈಸ್ಟರ್ನ್ ಎಕನಾಮಿಕ್ ಫೋರಂಗೆ ನೀವು ನನಗೆ ನೀಡಿದ ಆಹ್ವಾನವು ಉನ್ನತ ಗೌರವವನ್ನು ನೀಡಿದೆ. ಇದು ಉಭಯ ದೇಶಗಳ ನಡುವಣ ಬಾಂಧವ್ಯಕ್ಕೆ ಹೊಸ ಆಯಾಮವನ್ನು ನೀಡುವ ಐತಿಹಾಸಿಕ ಕ್ಷಣವಾಗಿದೆ. ನಾಳೆ ಫೋರಮ್ ನಲ್ಲಿ ಭಾಗಿಯಾಗಲು ನಾನು ಕಾತುರನಾಗಿದ್ದೇನೆ” ಎಂದಿದ್ದಾರೆ.
“ರಷ್ಯಾ ನಮ್ಮ ಅವಿಭಾಜ್ಯ ಸ್ನೇಹಿತ ಮತ್ತು ನಂಬಿಕಸ್ಥ ಪಾಲುದಾರ ನೀವು ಉಭಯ ದೇಶಗಳ ಕಾರ್ಯತಂತ್ರ ಮತ್ತು ಪ್ರತಿಷ್ಠಿತ ಪಾಲುದಾರಿಕೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ವಯಕ್ತಿಕ ಗಮನವನ್ನು ನೀಡಿದ್ದೀರಿ. ಇಬ್ಬರು ಅವಿಭಾಜ್ಯ ಸ್ನೇಹಿತರಾಗಿ ನಾವು ನಿರಂತರವಾಗಿ ಭೇಟಿಯಾಗುತ್ತೇವೆ. ಹಲವಾರು ಸಂದರ್ಭಗಳಲ್ಲಿ ನಾನು ನಿಮ್ಮೊಂದಿಗೆ ದೂರವಾಣಿ ಸಂಭಾಷಣೆಯನ್ನು ನಡೆಸಿದ್ದೇನೆ” ಎಂದು ಮೋದಿ ವ್ಲಾಡಿಮಿರ್ ಪುಟಿನ್ ಅವರಿಗೆ ಹೇಳಿದ್ದಾರೆ.
ಜ್ವೆಜ್ಡಾಕ್ಕೆ ಭೇಟಿ ನೀಡುವ ಮೂಲಕ ಮೋದಿ ಮತ್ತು ಪುಟಿನ್ ಶೃಂಗಸಭೆಗೆ ಚಾಲನೆ ದೊರಕಿದೆ.
ಮುಂದಿನ ಮೇ ನಲ್ಲಿ ನಡೆಯಲಿರುವ ಎರಡನೇ ಮಹಾಯುದ್ಧ ವಿಜಯದ 75 ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.