ವಾಷಿಂಗ್ಟನ್: ಅಮೆರಿಕದ 5 ರಾಜ್ಯಗಳಾದ ನ್ಯೂಜೆರ್ಸಿ, ಅರ್ಕಾನ್ಸಾಸ್, ಕೊಲೊರಾಡೋ, ಡೆಲವೇರ್ ಮತ್ತು ಇಂಡಿಯಾನಗಳ ಗವರ್ನರ್ಗಳು ಮುಂದಿನ ತಿಂಗಳು ಭಾರತಕ್ಕೆ ಆಗಮಿಸುತ್ತಿದ್ದಾರೆ. ಉಭಯ ದೇಶಗಳ ನಡುವಣ ಆರ್ಥಿಕ ಬಾಂಧವ್ಯವನ್ನು ವೃದ್ಧಿಸುವುದು ಇವರ ಭೇಟಿಯ ಪ್ರಮುಖ ಉದ್ದೇಶವಾಗಿದೆ.
ಈ ಗವರ್ನರ್ಗಳು ತಮ್ಮ ತಮ್ಮ ರಾಜ್ಯಗಳ ಉನ್ನತ ಉದ್ಯಮಿಗಳು ಸೇರಿದಂತೆ ಉನ್ನತ ಮಟ್ಟದ ವ್ಯಾಪಾರ ನಿಯೋಗದೊಂದಿಗೆ ಭಾರತಕ್ಕೆ ಆಗಮಿಸಲಿದ್ದಾರೆ.
ಭಾರತದ ನರೇಂದ್ರ ಮೋದಿ ಸರಕಾರ ಮತ್ತು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ಉಭಯ ದೇಶಗಳ ನಡುವೆ ಸ್ಟೇಟ್ ಟು ಸ್ಟೇಟ್ ಬಾಂಧವ್ಯವನ್ನು ವೃದ್ಧಿಸಲು ಪ್ರಯತ್ನಿಸುತ್ತಿರುವ ಭಾಗವಾಗಿ ಈ ಐದು ಗವರ್ನರ್ಗಳು ಉದ್ಯಮಿಗಳ ನಿಯೋಗದೊಂದಿಗೆ ಭಾರತಕ್ಕೆ ಆಗಮಿಸುತ್ತಿದ್ದಾರೆ.
ಸ್ಟೇಟ್ ಟು ಸ್ಟೇಟ್ ಬಾಂಧವ್ಯವನ್ನು ವೃದ್ಧಿಸುವ ಸರ್ಕಾರಗಳ ಪ್ರಯತ್ನದ ಭಾಗವಾಗಿಯೇ ಅಮೆರಿಕದಲ್ಲಿರುವ ಭಾರತದ ರಾಯಭಾರಿ ಹರ್ಷವರ್ಧನ ಶ್ರಿಂಗ್ಲಾ ಅವರು ಅಮೆರಿಕದಲ್ಲಿನ 11 ರಾಜ್ಯಗಳಿಗೆ ಭೇಟಿಯನ್ನು ನೀಡಿದ್ದಾರೆ. ಉಭಯ ರಾಷ್ಟ್ರಗಳಲ್ಲೂ ರಾಜ್ಯಗಳು ಅತ್ಯಂತ ಮಹತ್ವದ ಪಾತ್ರವನ್ನು ನಿಭಾಯಿಸುತ್ತದೆ ಎಂದು ಶ್ರಿಂಗ್ಲಾ ಅವರು ತಮ್ಮ ಪ್ರತಿ ಭೇಟಿಯ ವೇಳೆಯಲ್ಲೂ ಒತ್ತಿ ಹೇಳಿದ್ದಾರೆ.
ಅರ್ಕಾನ್ಸಾಸ್ ಗವರ್ನರ್ ಅಸ ಹಚಿನ್ಸನ್ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 6 ರವರೆಗೆ ಭಾರತದಲ್ಲಿರಲಿದ್ದಾರೆ. ಅವರ ಬಳಿಕ ಉಳಿದ ರಾಜ್ಯಗಳ ಗವರ್ನರ್ಗಳು ಭಾರತಕ್ಕೆ ಆಗಮಿಸಲಿದ್ದಾರೆ. ಮುಂದಿನ 2 ತಿಂಗಳ ಅವಧಿಯಲ್ಲಿ 5 ಗವರ್ನರ್ಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.