ಬೆಂಗಳೂರು: ಚಂದ್ರಯಾನ-2 ಗಗನ ನೌಕೆ ಚಂದ್ರನತ್ತ ಅತ್ಯಂತ ಯಶಸ್ವಿಯಾಗಿ ಪಯಣಿಸುತ್ತಿದೆ. ಬುಧವಾರ ಬೆಳಗ್ಗೆ 3.42ರ ವೇಳೆಯಲ್ಲಿ ಅದು ತನ್ನ ಎರಡನೇ ಸುತ್ತಿನ ಡಿ-ಆರ್ಬಿಟ್ ಮೆನೋವರ್ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಈ ಮೂಲಕ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ ದಕ್ಷಿಣ ಧ್ರುವಕ್ಕೆ ಪಯಣಿಸುವ ಕಾರ್ಯಕ್ಕೆ ಬೇಕಾದ ಆರ್ಬಿಟ್ ಅನ್ನು ಸಾಧಿಸಲಾಗಿದೆ.
ಚಂದ್ರಯಾನ-2 ಆರ್ಬಿಟರ್ 96 km×125 km ಕಕ್ಷೆಯಲ್ಲಿ ಚಂದ್ರನನ್ನು ಸುತ್ತುತ್ತಿದ್ದು, ಲ್ಯಾಂಡರ್ ಮತ್ತು ಆರ್ಬಿಟರ್ ಎರಡೂ ಆರೋಗ್ಯಯುತವಾಗಿದೆ ಎಂದು ಇಸ್ರೋ ಹೇಳಿದೆ. ವಿಕ್ರಮ್ ಲ್ಯಾಂಡರ್ 35 km×101km ಕಕ್ಷೆಯಲ್ಲಿ ಸುತ್ತುತ್ತಿದೆ.
ಸೆಪ್ಟಂಬರ್ 7ರಂದು ಮಧ್ಯಾಹ್ನ 1.30 am- 2.30am ನಡುವೆ ಚಂದ್ರಯಾನ-2 ಗಗನ ನೌಕೆ ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿಯುವ ಕಾರ್ಯವನ್ನು ಆರಂಭಿಸಲಿದೆ. 2.30ರ ಸುಮಾರಿಗೆ ಅದು ಗುರಿಯನ್ನು ತಲುಪುವ ನಿರೀಕ್ಷೆ ಇದೆ. ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಈ ರೋಚಕ ಕ್ಷಣವನ್ನು ಕಣ್ತುಂಬಿಕೊಳ್ಳಲಿದ್ದಾರೆ.
ಸೆ.3ರಂದು ಚಂದ್ರಯಾನ -2 ನೌಕೆಯ ಮೊದಲ ಡಿ-ಆರ್ಬಿಟಿಂಗ್ ಕಾರ್ಯ ಯಶಸ್ವಿಯಾಗಿ ನಡೆದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.