ನವದೆಹಲಿ: ಭಾರತೀಯ ಸೇನೆಯು ಪ್ರಮುಖ ಆಡಳಿತ ಸುಧಾರಣೆಗಳನ್ನು ಮತ್ತು ಪುನರ್ ರಚನೆಯ ಕಾರ್ಯವನ್ನು ನಡೆಸುತ್ತಿದೆ. ಪಶ್ಚಿಮ ಮತ್ತು ಪೂರ್ವ ಗಡಿಯುದ್ದಕ್ಕೂ ಸಮಗ್ರ ಯುದ್ಧ ತಂಡಗಳನ್ನು (integrated battle groups (ಐಬಿಜಿ)) ನಿಯೋಜಿಸಲು ಭಾರತ ನಿರ್ಧರಿಸಿದೆ.
ಇಂಡೋ-ಪಾಕ್ ಗಡಿಯಲ್ಲಿ ನಿಯೋಜಿಸಬೇಕಾದ ಐಬಿಜಿಗಳನ್ನು ರಚಿಸಲು ಹಿಮಾಚಲ ಪ್ರದೇಶ ಮೂಲದ ಐಎಕ್ಸ್ ಕಾರ್ಪ್ಸ್ನ ಮರುಸಂಘಟನೆಯನ್ನು ರಕ್ಷಣಾ ಸಚಿವಾಲಯ ಅನುಮೋದನೆಗೊಳಿಸಿದೆ. ಐಎಕ್ಸ್ ಕಾರ್ಪ್ಸ್ ಅನ್ನು 2009 ರಲ್ಲಿ ರಚಿಸಲಾಯಿತು ಮತ್ತು ಇದು ಸೇನೆಯ ಕಿರಿಯ ದಳಗಳಲ್ಲಿ ಒಂದಾಗಿದೆ ಮತ್ತು ಇದು ವೆಸ್ಟರ್ನ್ ಆರ್ಮಿ ಕಮಾಂಡ್ನ ಭಾಗವಾಗಿದೆ.
ಐಬಿಜಿಯ ನಿಯೋಜನೆಯು ಪಾಕಿಸ್ಥಾನದೊಂದಿಗಿನ ನಿರೀಕ್ಷಿತ ಯುದ್ಧದ ಸಂದರ್ಭದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಅಭಿವೃದ್ಧಿಪಡಿಸಿದ ‘ಕೋಲ್ಡ್ ಸ್ಟಾರ್ಟ್ ಸಿದ್ಧಾಂತ’ದ ಒಂದು ಭಾಗವಾಗಿದೆ. ಬ್ರಿಟಿಷ್ ನಿಯತಕಾಲಿಕೆಯಾದ ದಿ ಎಕನಾಮಿಸ್ಟ್ ಪ್ರಕಾರ, “ಕೋಲ್ಡ್ ಸ್ಟಾರ್ಟ್ ಎಂಬುದು ಪಾಕಿಸ್ಥಾನದ ಭೂಪ್ರದೇಶವನ್ನು ಶೀಘ್ರವಾಗಿ ವಶಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾದ ಸೀಮಿತ-ಯುದ್ಧ ತಂತ್ರಕ್ಕೆ ನೀಡಲಾದ ಹೆಸರು ಅಥವಾ ಸಿದ್ಧಾಂತ. ಇಲ್ಲಿ ಪರಮಾಣು ಸಂಘರ್ಷಕ್ಕೆ ಆಸ್ಪದವಿಲ್ಲ.
ಡಿಸೆಂಬರ್ 13, 2001 ರಂದು ಸಂಸತ್ತಿನ ಮೇಲೆ ನಡೆದ ದಾಳಿಯ ನಂತರ, ಭಾರತವು ‘ಆಪರೇಷನ್ ಪರಾಕ್ರಮ್’ ಯೋಜಿಸಿ ಗಡಿಯಲ್ಲಿ ತನ್ನ ಪಡೆಗಳನ್ನು ಸಜ್ಜುಗೊಳಿಸಿತ್ತು ಆದರೆ ಪಾಕಿಸ್ಥಾನವು ಈ ಬೆಳವಣಿಗೆಯ ಬಗ್ಗೆ ತಿಳಿದುಕೊಂಡು ಪ್ರತಿ ತಂತ್ರಗಳನ್ನು ಸಿದ್ಧಪಡಿಸಿತು. ಆದ್ದರಿಂದ ಸಶಸ್ತ್ರ ಪಡೆಗಳ ಬೃಹತ್ ಕ್ರೋಢಿಕರಣವು ಯಾವುದೇ ಫಲಿತಾಂಶವನ್ನು ನೀಡಲಿಲ್ಲ. ಇದರಿಂದಾಗಿ ಭಾರತವು ‘ಕೋಲ್ಡ್ ಸ್ಟಾರ್ಟ್’ ಸಿದ್ಧಾಂತವನ್ನು ಸಿದ್ಧಪಡಿಸಿತು.
2000 ರ ದಶಕದ ಆರಂಭದಲ್ಲಿ ಇದನ್ನು ಪ್ರಸ್ತಾಪಿಸಲಾಗಿದ್ದರೂ, ನಂತರ ಸರ್ಕಾರವು ಈ ಮೂಲಭೂತ ಸುಧಾರಣೆಯನ್ನು ಜಾರಿಗೆ ತಂದಿಲ್ಲ. ಆದರೆ ಬಾಲಕೋಟ್ ವಾಯುದಾಳಿಯ ನಂತರ ಪಾಕಿಸ್ಥಾನದೊಂದಿಗೆ ಉದ್ವಿಗ್ನತೆಯು ಹೆಚ್ಚಾಗಿದೆ. ಒಂದು ವೇಳೆ ಈ ದಾಳಿಯ ಸಂದರ್ಭದಲ್ಲಿ ಐಜಿಬಿಗಳ ನಿಯೋಜನೆ ಇದ್ದಿದ್ದರೆ ಭಾರತೀಯ ವಾಯುಪಡೆಯ ವಿಶ್ವಾಸ ಇನ್ನಷ್ಟು ಹೆಚ್ಚಾಗುತ್ತಿತ್ತು ಎಂದು ರಕ್ಷಣಾ ತಂತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನಲೆಯಲ್ಲಿ ಪಶ್ಚಿಮ ಮತ್ತು ಪೂರ್ವ ಗಡಿಯುದ್ದಕ್ಕೂ ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ಗಳನ್ನು ನಿಯೋಜನೆಗೊಳಿಸಲು ನಿರ್ಧರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.