ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಆರಂಭಿಸಲಾದ ಮೇಕ್ ಇನ್ ಇಂಡಿಯಾ ಯೋಜನೆಯು ಭಾರತದಲ್ಲೇ ಹಲವು ಉತ್ಪನ್ನಗಳು ಉತ್ಪಾದನೆಯಾಗುವಂತೆ ಉತ್ತೇಜನ ನೀಡುತ್ತಿದೆ. ಇದರಿಂದಾಗಿ ಆಮದು ಪ್ರಮಾಣ ಕಡಿಮೆಯಾಗುತ್ತಿದೆ. ರಫ್ತು ಹೆಚ್ಚಾಗುತ್ತಿದೆ.
2014-15ರ ಸಾಲಿನಲ್ಲಿ ಸುಮಾರು 3.1ಶತಕೋಟಿ ಡಾಲರ್ ಮೊತ್ತದಷ್ಟಿದ್ದ ಭಾರತದ ಮೊಬೈಲ್ ಉತ್ಪಾದನೆಯು 2018-19ರ ಸಾಲಿನಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಆ ಸಾಲಿನಲ್ಲಿ ಉತ್ಪಾದನೆಯಾದ ಮೊಬೈಲ್ಗಳ ಮೊತ್ತ 24.3 ಶತಕೋಟಿ ಡಾಲರ್ ಎಂದು ವರದಿಗಳು ಹೇಳುತ್ತಿವೆ.
ಮೊಬೈಲ್ ಉತ್ಪಾದನೆ ಮಾತ್ರ ಹೆಚ್ಚುತ್ತಿರುವುದಲ್ಲದೇ ವಿದೇಶಕ್ಕೂ ಹೆಚ್ಚು ರಫ್ತಾಗುತ್ತಿದೆ. ನರೇಂದ್ರ ಮೋದಿ ಸರ್ಕಾರ ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾಗಳಿಗೆ ಹೆಚ್ಚಿನ ಪ್ರೋತ್ಸಾಹಗಳನ್ನು ನೀಡುತ್ತಿರುವುದು ಇದಕ್ಕೆ ಕಾರಣವಾಗಿದೆ.
ರಷ್ಯಾ, ದಕ್ಷಿಣ ಆಫ್ರಿಕಾ, ಯುಎಇ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಮೊಬೈಲ್ಗಳು ರಫ್ತಾಗುತ್ತಿರುವುದು ಸಕಾರಾತ್ಮಕ ಬೆಹವಣಿಗೆಯಾಗಿದೆ.
ರಫ್ತಿನ ಪ್ರಮಾಣ ಕಳೆದ ಐದು ವರ್ಷಗಳಲ್ಲಿ 8 ಪಟ್ಟು ಹೆಚ್ಚಾಗಿದೆ ಎಂಬುದು ಗಮನಾರ್ಹ. ಮೊಬೈಲ್ ಮಾತ್ರವಲ್ಲದೇ ಹಲವಾರು ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಯಲ್ಲೂ ಭಾರೀ ಏರಿಕೆಯಾಗುತ್ತಿದೆ. ಪ್ರಸ್ತುತ ಅದರ ಮೊತ್ತ 65 ಶತಕೋಟಿ ಡಾಲರಿಗೆ ಏರಿಕೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.