News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೃಷಿಯಲ್ಲಿ ದಿನಕ್ಕೆ ರೂ. 40 ಸಾವಿರ ಗಳಿಸುತ್ತಿದ್ದಾರೆ ಎಂಜಿನಿಯರಿಂಗ್ ಪದವೀಧರ

ಕೃಷಿ ಎಂದರೆ ಕೆಲವು ವಿದ್ಯಾವಂತ ಯುವಕರಿಗೆ ಅದೇನೋ ಒಂದು ರೀತಿಯ ಅಸಡ್ಡೆ. ಕೃಷಿಯಿಂದ ಏನು ಸಿಗುತ್ತದೆ ಎಂಬ ಮನೋಭಾವನೆಯೇ ಅವರಲ್ಲಿ ಹೆಚ್ಚಾಗಿರುತ್ತದೆ. ಆದರೆ  2014 ರಲ್ಲಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರ್ಣಗೊಳಿಸಿರುವ ದೆಹಲಿಯ ಪಲ್ಲಾ ಗ್ರಾಮದ ಅಭಿಷೇಕ್ ತಮ್ಮ ಕುಟುಂಬದ ಕೃಷಿ ಭೂಮಿಯಲ್ಲೇ ಬೆವರು ಸುರಿಸಿ  ಕೃಷಿಕನಾಗಿದ್ದಾರೆ. ಕೃಷಿಯಲ್ಲಿ ಒಂದೊಂದೇ ಸಾಧನೆಗಳನ್ನು ಮಾಡಿದ್ದಾರೆ.

ಅಭಿಷೇಕ್ ಕೃಷಿಯ ಬಗ್ಗೆ ತನ್ನ ನಿಲುವನ್ನು ಮೊದಲಿನಿಂದಲೂ ತನ್ನ ಕುಟುಂಬಕ್ಕೆ ಸ್ಪಷ್ಟಪಡಿಸಿದ್ದರು. ಹೀಗಾಗಿ ಅವರು ಮನೆಯವರು  ತಂದೆಯ ವ್ಯವಹಾರವನ್ನು  ಮುನ್ನಡೆಸುವಂತೆ ಅವರ ಮೇಲೆ ಒತ್ತಡವನ್ನು ಹೇರಲಿಲ್ಲ. ಅವರಿಗೆ ತಮ್ಮ ವೃತ್ತಿ ಜೀವನದ ಮೇಲೆ ಸಂಪೂರ್ಣ ನಿಯಂತ್ರಣ ಇತ್ತು ಮತ್ತು ಅವರ ಭವಿಷ್ಯದ ಯೋಜನೆಗಳು ಕೂಡ ದೃಢವಾಗಿದ್ದವು.

ಆರೋಗ್ಯಕರ ಆಹಾರವನ್ನು ಅಭಿವೃದ್ಧಿಪಡಿಸುವುದು ಅಭಿಷೇಕ್ ಹೆಬ್ಬಯಕೆಯಾಗಿತ್ತು. ಆ ಬಗೆಗಿನ ಅವರ ಕುತೂಹಲವು ಆಳವಾದ ಸಂಶೋಧನೆಯನ್ನು ಮಾಡುವತ್ತ ಪ್ರೇರೇಪಿತು. “ಸಸ್ಯಗಳನ್ನು ಬೆಳೆಸಲು ಕೀಟನಾಶಕಗಳನ್ನು ಬಳಸುವುದರ ಬಗ್ಗೆ ನನಗೆ ತಿಳಿದಿತ್ತು, ಆದರೆ ಕೆಲವು ಸಂಶೋಧನೆಯ ನಂತರವೇ ಹಾಗೆ ಮಾಡುವುದರಿಂದ ಉಂಟಾಗುವ ಭಯಾನಕ ಆರೋಗ್ಯಪರಿಣಾಮಗಳ ಬಗ್ಗೆ ನನಗೆ ತಿಳಿಯಿತು” ಎಂದು ಅವರು ಹೇಳುತ್ತಾರೆ.

ಸಂಶೋಧನೆಯನ್ನು ನಡೆಸಿದರೂ ಕೂಡ ಅವರು ಪರಿಣತಿ ಮತ್ತು ಅನುಭವದ ಕೊರತೆಯಿಂದಾಗಿ ತನ್ನ ಕುಟುಂಬದ 25 ಎಕರೆ ಕ್ಷೇತ್ರದಲ್ಲಿ ಸಾವಯವೇತರ ಕೃಷಿ ಪ್ರಕ್ರಿಯೆಯನ್ನು ತಕ್ಷಣಕ್ಕೆ  ಬದಲಾಯಿಸಲು ಪ್ರಯತ್ನವನ್ನು  ಮಾಡಲಿಲ್ಲ. ಬದಲಾಗಿ, ಯಮುನಾ ನದಿಯ ದಡದಲ್ಲಿರುವ ದೇವಾಲಯದ ಸುತ್ತಲೂ ಒಂದು ಸಣ್ಣ ತರಕಾರಿ ಉದ್ಯಾನವನ್ನು ಸಾವಯವ ಮಾದರಿಯಲ್ಲಿ ಪ್ರಾರಂಭಿಸಿದರು. ಅವರ ಅಜ್ಜ ಈ ದೇವಾಲಯವನ್ನು ನಿರ್ಮಿಸಿದ್ದರು, ಮತ್ತು ಅದರ ಸುತ್ತಲಿನ ಭೂಮಿ ಹೆಚ್ಚು ಫಲವತ್ತಾಗಿತ್ತು ಆದರೆ ಅಲ್ಲಿ ಕೃಷಿ ಮಾಡಲಾಗುತ್ತಿರಲಿಲ್ಲ. ಆದರೆ ಅಲ್ಲಿ ಅಭಿಷೇಕ್ ತರಕಾರಿ ಕೃಷಿ ಆರಂಭಿಸಿದರು. ಒಂದು ವರ್ಷದ ನಂತರ, ಅವರಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ತರಕಾರಿಗಳಿಗಿಂತ ತನ್ನ ಉದ್ಯಾನದಲ್ಲಿನ ತರಕಾರಿಗಳ ಬಣ್ಣ, ರುಚಿ ಮತ್ತು ಗುಣಮಟ್ಟದಲ್ಲಿ ತೀವ್ರ ಬದಲಾವಣೆಯಾಗಿರುವುದು ಕಂಡು ಬಂತು.

ಈ ಯಶಸ್ಸು ಅವರಿಗೆ ತಮ್ಮ ಕುಟುಂಬದ  25 ಎಕರೆ ಆಸ್ತಿಯಲ್ಲಿ ಪ್ರಯೋಗ ಮಾಡುವ ವಿಶ್ವಾಸವನ್ನು ನೀಡಿತು. “ನನಗರಿವಿಲ್ಲದೆಯೇ, ಈ ಸಣ್ಣ ಉದ್ಯಾನವು  ಕೃಷಿ ಉದ್ಯಮಿ ಆಗಲು ನನ್ನ ಮೊದಲ ಹೆಜ್ಜೆಯಾಯಿತು ಎಂದು ಅಭಿಷೇಕ್ ಹೇಳುತ್ತಾರೆ.

ಆರೋಗ್ಯ ಪ್ರಜ್ಞೆ ಹೊಂದಿದ್ದ ಅಭಿಷೇಕ್ ಅವರು ಮೀಟಿ ತುಳಸಿ ಎಂದೂ ಕರೆಯಲ್ಪಡುವ ಸ್ಟೀವಿಯಾ ಸಸ್ಯವನ್ನು ಬೆಳೆಯಲಾರಂಭಿಸಿದರು. ಇದರ ಎಲೆಗಳಲ್ಲಿ ಇರುವ ಸಾರವು ಸಕ್ಕರೆಗೆ ಪರ್ಯಾಯವಾಗಿರುತ್ತದೆ. ದುರದೃಷ್ಟವಶಾತ್, ಅಭಿಷೇಕ್ ಅವರಿಗೆ ಈ ಬೆಳೆಯನ್ನು ಖರೀದಿ ಮಾಡುವ ಯಾರೊಬ್ಬರೂ ಸಿಗಲಿಲ್ಲ ಮತ್ತು 2016 ರಲ್ಲಿ ಅವರು ಈ ಬೆಳೆ ಬೆಳಯುವುದನ್ನೇ ಬಿಟ್ಟು ಬಿಟ್ಟರು.

ನೆರೆಹೊರೆಯ ರೈತರ ಅಪಹಾಸ್ಯ ಮತ್ತು ಉತ್ತಮ ವೃತ್ತಿ ಮಾರ್ಗವನ್ನು ಆಯ್ಕೆ ಮಾಡಲು ಕುಟುಂಬದ ಸಲಹೆಗಳ ನಡೆವೆಯೂ ಅಭಿಷೇಕ್ ಸಾವಯವ ಕೃಷಿಯ ಬಗ್ಗೆ ತಮ್ಮ ಸಂಶೋಧನೆಯನ್ನು ಮುಂದುವರಿಸಿದರು. ತಮ್ಮ ಪ್ರಯೋಗಗಳನ್ನು ತೋರಿಸಲು ಅವರು ಕುಟುಂಬ ಸದಸ್ಯರನ್ನು ಗದ್ದೆಯತ್ತ ಕರೆದುಕೊಂಡು ಹೋಗುತ್ತಿದ್ದರು. ತರಕಾರಿ ಬೆಳೆಯುವುದಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿದರು. ನೀರುಣಿಸುವ ಮಾದರಿಯನ್ನು ಬದಲಾಯಿಸಿಕೊಂಡರು. ತಮ್ಮದೇ ರೀತಿಯಲ್ಲಿ ಸಾವಯವ ಗೊಬ್ಬರನ್ನು ಉತ್ಪಾದಿಸಲು ಆರಂಭಿಸಿದರು.

ಹನಿ ನೀರಾವರಿ ಪದ್ಧತಿಯನ್ನು ಅನುಸರಿಸಿದ ಅವರಿಗೆ ಸಾಕಷ್ಟು ಪ್ರಯೋಜನಗಳು ಸಿಗಲಾರಂಭಿಸಿದವು. ಇದು ಸಮಯವನ್ನು ಸಹ ಉಳಿಸುತ್ತದೆ. ಮೊದಲು ಅಭಿಷೇಕ್  ಒಂದು ಎಕರೆ ಭೂಮಿಗೆ ನೀರುಣಿಸಲು  3-4 ಗಂಟೆಗಳನ್ನು ತೆಗೆದುಕೊಳ್ಳುತ್ತಿದ್ದರು. ಹನಿ ನೀರಾವರಿ ಅಳವಡಿಸಿಕೊಂಡ ಬಳಿಕ ಅವರಿಗೆ ತಗಲುವ ಸಮಯ ಒಂದು ಎಕರೆ ಭೂಮಿಗೆ ಕೇವಲ 15-20 ನಿಮಿಷಗಳು ಮಾತ್ರ. ಸಮಯ ಕಡಿತ ಮಾತ್ರವಲ್ಲದೇ, ಮೋಟರ್‌ನಿಂದ ನೀರನ್ನು ಪಂಪ್ ಮಾಡಲು ಬಳಸುವ ವಿದ್ಯುತ್ ಕೂಡ ಶೇಕಡಾ 70 ರಷ್ಟು ಕಡಿಮೆಯಾಗಿದೆ.

ಮೊದಲ ವರ್ಷದಲ್ಲಿ ಅಭಿಷೇಕ್ ಅವರಿಗೆ ತಮ್ಮ ಭೂಮಿಯ ಕೆಲವು ಪ್ರದೇಶಗಳಲ್ಲಿ ರಾಸಾಯನಿಕಗಳನ್ನು ಬಳಸುವುದು ಅನಿವಾರ್ಯವಾಯಿತು. ನೆರೆಹೊರೆಯ ಭೂಮಿಯಲ್ಲಿರುವ ರೈತರು ಕೀಟಗಳನ್ನು ಕೊಲ್ಲಲು ಸಾಕಷ್ಟು ರಾಸಾಯನಿಕಗಳು ಮತ್ತು ಕೀಟನಾಶಕಗಳನ್ನು ಬಳಸುತ್ತಿದ್ದರು. ಆದ್ದರಿಂದ ಅವರ ಭೂಮಿಯಲ್ಲಿದ್ದ ಕೀಟಗಳು ಅಭಿಷೇಕ್ ಅವರ ಭೂಮಿಗೆ ಬರುತ್ತಿದ್ದವು. ಹೀಗಾಗಿ ಅವರು ಕಡಿಮೆ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಸಿದರು.

ತನ್ನ ತಪ್ಪುಗಳಿಂದ ಪಾಠ ಕಲಿತ ಅಭಿಷೇಕ್ ತರಕಾರಿಗಳನ್ನು ಸ್ಮಾರ್ಟ್ ಆದ ರೀತಿಯಲ್ಲಿ ಬೆಳೆಸಿದರು. ಅವರು ತಮ್ಮ ಬೆಳೆ ಬೆಳಯುವ ಅವಧಿಯನ್ನು ಇತರ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸದ ಸಮಯಕ್ಕೆ ಬದಲಾಯಿಸಿಕೊಂಡರು. ಅಲ್ಲದೇ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಲು ಅಭಿಷೇಕ್ ಸಹಾಯ ಮಾಡಿದ ಮತ್ತೊಂದು ಅನ್ವೇಷಣೆ ಜೈವಿಕ ಕೀಟನಾಶಕ.

“ಜೈವಿಕ ಕೀಟನಾಶಕವು ಹೆಚ್ಚಿನ ತಾಪಮಾನದಲ್ಲಿ ಕಾರ್ಯನಿರ್ವಹಿಸುವುದಿಲ್ಲ, ಆದರೆ ಅದೃಷ್ಟವಶಾತ್, ತಾಪಮಾನವು 45 ಡಿಗ್ರಿಗಳನ್ನು ಮೀರಿದ ದಿನಗಳಿರುವುದು ಒಂದು ಅಥವಾ ಎರಡು ದಿನಗಳು ಮಾತ್ರ. ನನ್ನ ಜಮೀನಿನಲ್ಲಿ ಕೀಟನಾಶಕವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ನನಗೆ ಜೈವಿಕ ಕೀಟನಾಶಕ ಸಹಾಯ ಮಾಡಿತು” ಎಂದು ಅವರು ಹೇಳುತ್ತಾರೆ.

ಕಳೆದ ವರ್ಷ, ಅಭಿಷೇಕ್ ತನ್ನ ಉತ್ಪಾದನಾ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ವರ್ಷಪೂರ್ತಿ ತರಕಾರಿಗಳನ್ನು ಬೆಳೆಯಲು ಬಿದಿರನ್ನು ಬಳಸಿ ಲಂಬ ಕೃಷಿಯನ್ನು ಅನ್ವೇಷಿಸಿದರು. ಅವರು  ಬಿದಿರನ್ನು ನೆಲದಲ್ಲಿ ಅಗೆದು ನೆಟ್ಟಿದ್ದಾರೆ, ಪ್ರತಿ ಬಿದಿರಿನ ನಡುವೆ ಎಂಟು ಅಡಿ ಅಂತರವನ್ನು ಕಾಯ್ದುಕೊಂಡಿದ್ದಾರೆ. ಬಿದಿರುಗಳನ್ನು ನಿರ್ಮಿಸಲು ಮತ್ತು ಪರಸ್ಪರ ಸಂಪರ್ಕಿಸಲು ಅವರು ಗಾಲ್ವನೈಸ್ಡ್ ಐರನ್ (ಜಿಐ) ತಂತಿಯನ್ನು ಬಳಸಿದ್ದಾರೆ.

ಪ್ರತಿ ಬಿದಿರಿನ ನಡುವಿನ ಜಾಗವನ್ನು ಪೆಟ್ಟಿಗೆಯ ಆಕಾರದಲ್ಲಿರುವ ಪ್ಲಾಸ್ಟಿಕ್ ಹಗ್ಗಗಳ ಮೂಲಕ ಮುಚ್ಚಿದರು. ಸಸ್ಯಗಳು ಹಗ್ಗಗಳ ಮೇಲೆ ಹರಡಿ ಅದೇ ಆಕಾರದಲ್ಲಿ ಬೆಳೆಯುತ್ತವೆ.

ಈ ಮಾದರಿಯಲ್ಲಿ ಸಸ್ಯಗಳು ಕೀಟಗಳಿಗೆ ಕಡಿಮೆ ಒಡ್ಡಿಕೊಳ್ಳುವುದರಿಂದ ಮತ್ತು ಪ್ರವಾಹ ಅಥವಾ ಧಾರಾಕಾರ ಮಳೆಯಂತಹ ತೀವ್ರ ಹವಾಮಾನ ಪರಿಸ್ಥಿತಿಗಳು ಅವುಗಳ ಮೇಲೆ ಪರಿಣಾಮ ಬೀರದ ಕಾರಣ ಅದು ಅವರ  ಉತ್ಪಾದನೆಯನ್ನು ಶೇಕಡಾ 80 ರಷ್ಟು ಹೆಚ್ಚಿಸಿತು. ಬೆಳೆಗಳನ್ನು ಕೊಯ್ಲು ಮಾಡಲು ಅಗತ್ಯವಿರುವ ಉದ್ಯೋಗಿಗಳ ಅವಶ್ಯಕತೆಯೂ ಇಲ್ಲಿ ಕಡಿಮೆ. ಇನ್ನೂ ಉತ್ತಮ ಅಂಶವೆಂದರೆ, ಈ ವಿಧಾನವು ಶೇಕಡಾ 70 ರಷ್ಟು ಕಡಿಮೆ ನೀರನ್ನು ಬಳಸುತ್ತದೆ ಎಂದು ಅಭಿಷೇಕ್ ಹೇಳುತ್ತಾರೆ.

ಅಭಿಷೇಕ್ ತನ್ನ ಜಮೀನಿನಲ್ಲಿ ಜೈವಿಕ ಅನಿಲ ಘಟಕವನ್ನು ಸ್ಥಾಪಿಸಿದ್ದಾರೆ, ಅದು ಕೃಷಿ ತ್ಯಾಜ್ಯವನ್ನು ಮೀಥೇನ್ ಅನಿಲವಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ, ಅದು ಅವರ ಕುಟುಂಬದ ಅಡುಗೆಗೆ ಬಳಕೆಯಾಗುತ್ತದೆ.

ಅವರು ವರ್ಷದುದ್ದಕ್ಕೂ ನಿರಂತರ ಕೃಷಿ ಮಾಡುತ್ತಿರುವುದರಿಂದ, ಅವರಿಗೆ ಸಿಗುವ ಲಾಭದ ಪ್ರಮಾಣವೂ ಗಮನಾರ್ಹವಾಗಿ ಹೆಚ್ಚಾಗಿದೆ. ಮಾರುಕಟ್ಟೆಗಳಿಗೆ ಬೆಳೆಗಳನ್ನು ಮಾರುವ ಮೂಲಕ ದಿನಕ್ಕೆ ರೂ. 40,000 ಸಂಪಾದನೆಯನ್ನು ಅವರು ಮಾಡುತ್ತಿದ್ದಾರೆ.

ಅಭಿಷೇಕ್ ಅವರ ಮಾತಿನಲ್ಲಿ ಹೇಳುವುದಾದರೆ, ಎಂಜಿನಿಯರ್‌ನಿಂದ ರೈತನಾಗುವವರೆಗಿನ ಅವರ ಪಯಣವು ಕಲಿಕೆಗಳು ಮತ್ತು ತಪ್ಪುಗಳಿಂದ ಕೂಡಿದೆ, ಆದರೆ ಅವರಿಗೆ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟ ಬಗ್ಗೆ ಅತೀವ ಹೆಮ್ಮೆಯಿದೆ.

“ಕೃಷಿ ಎನ್ನುವುದು ನವಜಾತ ಶಿಶುವನ್ನು ಅರ್ಥಮಾಡಿಕೊಂಡಂತೆ. ಮೊದಲಿಗೆ, ಇದು ಜಟಿಲವಾಗಿದೆ ಎಂದು ತೋರುತ್ತದೆ, ಆದರೆ ಒಮ್ಮೆ ನಾವು ಗಮನ ಹರಿಸಿದರೆ ಮತ್ತು ಪ್ರತಿ ನಡೆಯನ್ನೂ ಎಚ್ಚರಿಕೆಯಿಂದ ಗಮನಿಸಿದರೆ ಕಾರ್ಯ ಸುಲಭವಾಗುತ್ತದೆ. ಸಮಯ ತೆಗೆದುಕೊಂಡು ಸಸ್ಯಗಳನ್ನು ತಿಳಿದುಕೊಂಡರೆ ಯಾವುದೂ ಕಷ್ಟವಲ್ಲ” ಎಂಬುದು ಅಭಿಷೇಕ್ ಮಾತು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top