ಗುವಾಹಟಿ: ಅಸ್ಸಾಂ ಸರ್ಕಾರ ಆಗಸ್ಟ್ 31 ರ ಶನಿವಾರದಂದು ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (ಎನ್ಆರ್ಸಿ)ನ ಅಂತಿಮ ಪಟ್ಟಿಯನ್ನು ಪ್ರಕಟಿಸಲಿದೆ. ಈ ಪಟ್ಟಿಯನ್ನು ಪ್ರಕಟಿಸುವುದಕ್ಕೂ ಮುಂಚಿತವಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ. ಕೇಂದ್ರ ಸಶಸ್ತ್ರ ಅರೆಸೈನಿಕ ಪಡೆ (ಸಿಎಪಿಎಫ್) ಯ 51 ಕಂಪನಿಗಳನ್ನು ಶುಕ್ರವಾರದೊಳಗೆ ಅಸ್ಸಾಂನಲ್ಲಿ ನಿಯೋಜಿಸಲಾಗುತ್ತಿದೆ.
ಅಸ್ಸಾಂನ ಸೆಕ್ರೆಟರಿಯೇಟ್ ಮತ್ತು ವಿಧಾನಸಭಾ ಕಟ್ಟಡಗಳು ಇರುವ ದಿಸ್ಪುರದಲ್ಲಿ ಸೆಕ್ಷನ್ 144 ಅನ್ನು ಹಾಕಲಾಗಿದೆ. ಭಂಗಘರ್, ಬಸಿಷ್ಠ, ಹತಿಗಾಂವ್, ಸೋನಾಪುರ್ ಮತ್ತು ಖೇತ್ರಿ ಮುಂತಾದ ಸೂಕ್ಷ್ನ ಪ್ರದೇಶಗಳಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಲಾಗಿದೆ. ಆಗಸ್ಟ್ 28 ರಿಂದ ದಿಸ್ಪುರದಲ್ಲೂ ನಿಷೇಧಾಜ್ಞೆಗಳು ಜಾರಿಯಲ್ಲಿವೆ ಮತ್ತು ಮುಂದಿನ ಸೂಚನೆ ಬರುವವರೆಗೂ ಅದು ಜಾರಿಯಲ್ಲೇ ಇರಲಿವೆ.
ಅಸ್ಸಾಂ ಎನ್ಆರ್ಸಿ ಪಟ್ಟಿಯನ್ನು ಪ್ರಕಟಿಸುವ ಹಿನ್ನಲೆಯಲ್ಲಿ ಪಟ್ಟಿಯ ಬಗೆಗಿನ ಸುಳ್ಳು ವದಂತಿಗಳನ್ನು ಜನರು ನಂಬಬಾರದು ಎಂದು ಗೃಹ ಸಚಿವಾಲಯ ಗುರುವಾರ ಜನರಿಗೆ ಮನವಿ ಮಾಡಿಕೊಂಡಿದೆ. “ಎನ್ಆರ್ಸಿ ಬಗೆಗಿನ ವದಂತಿಗಳನ್ನು ನಂಬಬೇಡಿ. ಎನ್ಆರ್ಸಿಯಲ್ಲಿ ವ್ಯಕ್ತಿಯ ಹೆಸರನ್ನು ಕೈಬಿಟ್ಟಿರುವುದರ ಅರ್ಥ ಅವನು / ಅವಳು ವಿದೇಶಿಯನೆಂದು ಘೋಷಣೆ ಮಾಡಿರುವುದೆಂದಲ್ಲ ”ಎಂದು ಗೃಹ ಸಚಿವಾಲಯದ ವಕ್ತಾರರು ಟ್ವೀಟ್ ಮಾಡಿದ್ದಾರೆ.
“ಅಂತಿಮ ಎನ್ಆರ್ಸಿ ಪಟ್ಟಿಯಿಂದ ಹೊರಗುಳಿದ ಪ್ರತಿಯೊಬ್ಬ ವ್ಯಕ್ತಿಯು ವಿದೇಶಿ ನ್ಯಾಯಮಂಡಳಿಗಳಿಗೆ ಮನವಿಯನ್ನು ಸಲ್ಲಿಸಬಹುದು, ಇಂತಹ ನ್ಯಾಯಮಂಡಳಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸಲಾಗುತ್ತಿದೆ” ಎಂದು ಹೇಳಿದ್ದಾರೆ.
DO NOT BELIEVE RUMOURS ABOUT NRC.
Non-inclusion of a person’s name in NRC does NOT amount to his/her being declared a foreigner.
Every individual left out from final NRC can can appeal to Foreigners Tribunals, an increased number of which are being established. pic.twitter.com/8pzNlFV5Ok
— Spokesperson, Ministry of Home Affairs (@PIBHomeAffairs) August 29, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.