ನವದೆಹಲಿ: ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಹಾರಗಳು ಈಗಲೂ ಸುರಕ್ಷತಾ ಸಮಸ್ಯೆಗಳನ್ನು ಎದುರಿಸುತ್ತಿವೆ. ತಂತ್ರಜ್ಞಾನ ಸುಧಾರಿಸಿದರು ಕೂಡ ರಿಸ್ಕ್ ಕಡಿಮೆಯಾಗಿಲ್ಲ. ಆದರೆ ಐಸಿಐಸಿಐ ಬ್ಯಾಂಕ್ ರಿಸ್ಕ್ ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದ್ದು, ಕರೆನ್ಸಿ ನೋಟುಗಳನ್ನು ಎಣಿಕೆ ಮಾಡಲು ಇಂಡಸ್ಟ್ರಿಯಲ್ ರೊಬೊಟಿಕ್ ಆರ್ಮ್ಸ್ ಅನ್ನು ನಿಯೋಜನೆಗೊಳಿಸಿದೆ.
ಐಸಿಐಸಿಐ ಬ್ಯಾಂಕ್ ಕರೆನ್ಸಿ ನೋಟುಗಳನ್ನು ಎಣಿಸಲು ಇಂಡಸ್ಟ್ರಿಯಲ್ ರೊಬೊಟಿಕ್ ಆರ್ಮ್ಸ್ ಅನ್ನು ನಿಯೋಜಿಸಿದ ದೇಶದ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬ್ಯಾಂಕಿನ ಹೇಳಿಕೆಯ ಪ್ರಕಾರ, ಒಂದು ದಿನದಲ್ಲಿ ಆರು ದಶಲಕ್ಷಕ್ಕೂ ಹೆಚ್ಚಿನ ನೋಟುಗಳನ್ನು ಎಣಿಸಲು ಮತ್ತು ಅದನ್ನು ಮೊತ್ತಕ್ಕೆ ಅನುಸಾರವಾಗಿ ವಿಂಗಡಿಸಲು 12 ನಗರಗಳಲ್ಲಿ ಇಂತಹ 14 ರೋಬೋಗಳನ್ನು ನಿಯೋಜಿಸಲಾಗುತ್ತಿದೆ.
ಈ ಯಂತ್ರವು ನೋಟು ವಿಂಗಡಣೆಯಲ್ಲಿ ಯಾವುದೇ ಘರ್ಷಣೆಯಿಲ್ಲದ ಸಂಪೂರ್ಣವಾಗಿ ಯಾಂತ್ರಿಕೃತ ಪ್ರಕ್ರಿಯೆಯನ್ನು ತರುತ್ತದೆ, ಇದು ಹೆಚ್ಚಿನ ಪ್ರಮಾಣದ ನೋಟುಗಳನ್ನು ನಿರಂತರವಾಗಿ ಹೆಚ್ಚಿನ ನಿಖರತೆ ಮತ್ತು ನಮ್ಯತೆಯೊಂದಿಗೆ ಎಣಿಸುತ್ತದೆ. ಇದರಿಂದ ಬ್ಯಾಂಕ್ ಸಿಬ್ಬಂದಿಗೆ ನೋಟು ಎಣಿಕೆಗೆ ಹೆಚ್ಚಿನ ಗಮನವನ್ನು ನೀಡಬೇಕಾದ ಅವಶ್ಯಕತೆಗಳು ಇರುವುದಿಲ್ಲ.
ಭಾರತದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿದ ಹೆಗ್ಗಳಿಕೆಗೆ ಐಸಿಐಸಿಐ ಪಾತ್ರವಾಗಿದೆ. ಜಾಗತಿಕವಾಗಿಯೂ ಇಂತಹ ಕ್ರಮಗಳನ್ನು ಕೈಗೊಂಡ ಸಂಸ್ಥೆಗಳ ಸಂಖ್ಯೆ ಬೆರಳೆಣಿಕೆಯಷ್ಟೇ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.