ಲೇಹ್: ಕಾಶ್ಮೀರದ ಮೇಲೆ ಪಾಕಿಸ್ಥಾನಕ್ಕೆ ಯಾವುದೇ ಅರ್ಹತೆ ಇಲ್ಲ, ಅದು ಭಾರತಕ್ಕೆ ಮಾತ್ರ ಸೇರಿದ್ದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಲಡಾಖಿನ ಲೇಹ್ನಲ್ಲಿ ಹೇಳೀದ್ದಾರೆ.
“ನಾನು ಪಾಕಿಸ್ಥಾನಕ್ಕೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ, ಕಾಶ್ಮೀರದ ವಿಷಯದಲ್ಲಿ ನಿತ್ಯ ಬೊಬ್ಬಿಡುವ ಪಾಕಿಸ್ಥಾನಕ್ಕೆ ಕಾಶ್ಮೀರ ಯಾವಾಗ ಸೇರಿತ್ತು?” ಎಂದು ಹೇಳುವ ಮೂಲಕ ರಾಜನಾಥ್ ಸಿಂಗ್ ಅವರು, ಕಾಶ್ಮೀರ ಯಾವತ್ತೂ ಪಾಕಿಸ್ಥಾನದ ಭಾಗವಾಗಿರಲಿಲ್ಲ, ಮುಂದೆಯೂ ಅದು ಅದರ ಭಾಗವಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಪಾಕಿಸ್ಥಾನ ರಚನೆಯಾದಾಗಿನಿಂದ ನಾವು ಅದರ ಅಸ್ತಿತ್ವವನ್ನು ಗೌರವಿಸುತ್ತಿದ್ದೇವೆ, ಆದರೆ ಕಾಶ್ಮೀರ ಎಂದೂ ಅದಕ್ಕೆ ಸೇರಿರಲಿಲ್ಲ ಮುಂದೆಯೂ ಸೇರುವುದಿಲ್ಲ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಬಗೆಗಿನ ಭಾರತದ ನಿರ್ಧಾರವನ್ನು ವಿರೋಧಿಸಿರುವ ಪಾಕಿಸ್ಥಾನವು, ತನ್ನ ವಾದಕ್ಕೆ ವಿಶ್ವದ ಬೆಂಬಲವನ್ನು ಪಡೆಯಲು ಪ್ರಯತ್ನಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿದ್ದು ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ್ದು ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವಿನ ದ್ವಿಪಕ್ಷೀಯ ಆಂತರಿಕ ವಿಷಯ ಎಂದು ಹೆಚ್ಚಿನ ರಾಷ್ಟ್ರಗಳು ಈಗಾಗಲೇ ಒಪ್ಪಿಕೊಂಡಿವೆ, ಈ ಮೂಲಕ ಭಾರತದ ವಾದಕ್ಕೆ ಮನ್ನಣೆಯನ್ನು ನೀಡಿದೆ. ಇದರಿಂದಾಗಿ ಕಾಶ್ಮೀರದ ವಿಷಯದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕೋಲಾಹಲ ಸೃಷ್ಟಿಸುವ ಇಸ್ಲಾಮಾಬಾದ್ ಪ್ರಯತ್ನಗಳು ವಿಫಲವಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.