ಸ್ಯಾಂಟೋ ಡೊಮಿನಿಗೊ: ಮಹಾತ್ಮ ಗಾಂಧಿಯವರ 150 ನೇ ಜನ್ಮ ವರ್ಷಾಚರಣೆ ಸ್ಮರಣಾರ್ಥ ಡೊಮಿನಿಕನ್ ರಿಪಬ್ಲಿಕ್ ತನ್ನ ವಿದೇಶಾಂಗ ಸಚಿವಾಲಯದಲ್ಲಿ ಸ್ಟ್ಯಾಂಪ್ ಅನ್ನು ಬಿಡುಗಡೆಗೊಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿರುವ ವಿದೇಶಾಂಗ ಸಚಿವಾಲಯದ ರಾಜ್ಯ ಖಾತೆ ಸಚಿವ ವಿ. ಮುರಳೀಧರನ್ ಅವರು, “ಭಾರತದ ರಾಷ್ಟ್ರಪಿತನನ್ನು ಗೌರವಿಸುವ ನಿಟ್ಟಿನಲ್ಲಿ ಅಭೂತಪೂರ್ವವಾದ ಸಂದೇಶವನ್ನು ನೀಡಿದ ಡೊಮಿನಿಕನ್ ರಿಪಬ್ಲಿಕ್ಗೆ ಧನ್ಯವಾದಗಳು. ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವಗಳು ಕೆರಿಬಿಯನ್ ಮಾತ್ರವಲ್ಲದೇ ಇಡೀ ಜಗತ್ತಿಗೆ ಅತ್ಯಂತ ಅನಿವಾರ್ಯದಾದುದಾಗಿದೆ” ಎಂದಿದ್ದಾರೆ.
ಭಾರತದಲ್ಲಿನ ಡೊಮಿನಿಕನ್ ರಿಪಬ್ಲಿಕ್ ರಾಯಭಾರಿ ಫ್ರಾಂಕ್ ಹ್ಯಾನ್ಸ್ ಡ್ಯಾನ್ನೆನ್ಬರ್ಗ್ ಕ್ಯಾಸ್ಟೆಲ್ಲಾನೋಸ್ ಅವರು ಪ್ರತಿಕ್ರಿಯೆ ನೀಡಿ, “ನಮ್ಮ ಡೊಮಿನಿಕನ್ ರಿಪಬ್ಲಿಕ್ ರಾಷ್ಟ್ರಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಅವರು ಅಧಿಕೃತ ಭೇಟಿಯನ್ನು ನೀಡಿದ್ದಾರೆ. ಅಲ್ಲಿ ಅವರು ವಿದೇಶಾಂಗ ಸಚಿವರನ್ನು ಭೇಟಿಯಾಗಿ ಉಭಯ ದೇಶಗಳ ನಡುವಿನ ಪ್ರಸ್ತುತ ವಾಣಿಜ್ಯ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಾತುಕತೆಯನ್ನು ನಡೆಸಿದ್ದಾರೆ. ಅಲ್ಲದೇ, ನಾವು ಭಾರತಕ್ಕೆ ಯುಎನ್ ಶಾಶ್ವತ ಭದ್ರತಾ ಮಂಡಳಿಯಲ್ಲಿನ ಅಧಿಕಾರಾವಧಿಯಲ್ಲಿ ನೀಡಿದ ಸಹಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು” ಎಂದಿದ್ದಾರೆ.
ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರ 150 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಸ್ಟ್ಯಾಂಪ್ ಅನ್ನೂ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸ್ಟ್ಯಾಂಪ್ ಡೊಮಿನಿಕನ್ ರಿಪಬ್ಲಿಕ್ ಸ್ಟ್ಯಾಂಪ್ ಆಗಿ ಮುದ್ರಿಸಲ್ಪಟ್ಟಿದೆ. ನಿನ್ನೆ ರಾತ್ರಿ ಡೊಮಿನಿಕನ್ ರಿಪಬ್ಲಿಕಿನ ವಿದೇಶಾಂಗ ಸಚಿವಾಲಯದಲ್ಲಿ ಅಧಿಕೃತವಾಗಿ ಇದನ್ನು ಅನಾವರಣ ಮಾಡಲಾಯಿತು. ಅಲ್ಲಿನ ಅಂಚೆ ಸೇವೆಗಳ ನಿರ್ದೇಶಕರು, ಭಾರತದಲ್ಲಿರುವ ಅಲ್ಲಿನ ರಾಯಭಾರಿ ಕ್ಯಾಸ್ಟೆಲ್ಲಾನೋಸ್, ಅಲ್ಲಿರುವ ಭಾರತದ ರಾಯಭಾರಿ ಮುಂತಾದವರು ಆ ವೇಳೆ ಅಲ್ಲಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.