ನವದೆಹಲಿ: ಮಿಲಿಟರಿ ಪೊಲೀಸ್ನಲ್ಲಿ ಮೊದಲ ಬ್ಯಾಚಿನ ಮಹಿಳಾ ಸಿಬ್ಬಂದಿಯನ್ನು ಬರ ಮಾಡಿಕೊಳ್ಳಲು ಮತ್ತು ಅವರಿಗೆ ತರಬೇತಿಯನ್ನು ನೀಡಲು ಭರದ ಸಿದ್ಧತೆಗಳು ನಡೆಯುತ್ತಿವೆ ಎಂದು ಭಾರತೀಯ ಸೇನೆ ಬುಧವಾರ ತಿಳಿಸಿದೆ.
“ಕಾರ್ಪ್ಸ್ ಆಫ್ ಮಿಲಿಟರಿ ಪೊಲೀಸ್ನಲ್ಲಿ ಮೊದಲ ಬಾರಿಗೆ ಮಹಿಳಾ ಸೈನಿಕರನ್ನು ಸ್ವೀಕರಿಸಲು ಮತ್ತು ತರಬೇತಿಯನ್ನು ನೀಡಲು ಸಿದ್ಧತೆಗಳು ನಡೆಯುತ್ತಿವೆ, ವಸತಿ ಸೌಕರ್ಯಗಳಿಂದ ಹಿಡಿದು ತರಬೇತಿ ಮಾದರಿಗಳವರೆಗೆ, ಅಲ್ಲದೇ ಅವರಿಗೆ ದೇಶಾದ್ಯಂತದಿಂದ ಸರಿಯಾದ ಬೋಧಕರನ್ನು ಆಯ್ಕೆ ಮಾಡುವವರೆಗೆ ಸಿದ್ದತೆಗಳು ಜಾರಿಯಲ್ಲಿದೆ” ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರ್ನಾಟಕ ಮಹಿಳಾ ಪೊಲೀಸ್ ಸೇರಿದಂತೆ ಹಲವು ಮಾದರಿಗಳನ್ನು ಅಧ್ಯಯನ ಮಾಡಲಾಗಿದೆ ಮತ್ತು ಅವರಿಂದ ಉತ್ತಮ ಅಭ್ಯಾಸಗಳನ್ನು ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಿಲಿಟರಿ ಪೊಲೀಸರ ಪಡೆಯಲ್ಲಿ ಮಹಿಳೆಯರ ನೇಮಕಾತಿಗಾಗಿ ಆನ್ಲೈನ್ ನೋಂದಣಿಯನ್ನು ಪ್ರಾರಂಭಿಸುವ ಮೂಲಕ ಕಳೆದ ಏಪ್ರಿಲ್ ತಿಂಗಳಲ್ಲಿ ಸೇನೆಯು ಮಹಿಳೆಯರನ್ನು ಯೋಧರನ್ನಾಗಿ ಸೇರಿಸುವ ಪ್ರಕ್ರಿಯೆಯನ್ನು ಅಧೀಕೃತವಾಗಿ ಪ್ರಾರಂಭ ಮಾಡಿತು.
ಮಿಲಿಟರಿ ಪೋಲಿಸ್ನ ಒಟ್ಟು ಕಾರ್ಪ್ಸ್ ಶೇ.20 ರಷ್ಟಕ್ಕೆ ಮಹಿಳೆಯರನ್ನು ಶ್ರೇಣೀಕೃತ ರೀತಿಯಲ್ಲಿ ಸೇರಿಸಿಕೊಳ್ಳಲಾಗುತ್ತಿದೆ ಮತ್ತು ಅಪರಾಧ ಪ್ರಕರಣಗಳನ್ನು ತನಿಖೆ ಮಾಡುವುದರಿಂದ ಹಿಡಿದು ಅಗತ್ಯವಿರುವ ಕಡೆಗಳಲ್ಲಿ ಕಾರ್ಯಾಚರಣೆಗಳಿಗೂ ಈ ಮಹಿಳೆಯರು ನಿಯೋಜನೆಗೊಳ್ಳಲಿದ್ದಾರೆ.
ಅಂತೆಯೇ, ಸೇನೆಯು ವರ್ಷಕ್ಕೆ 52 ಮಹಿಳೆಯರು ಸೇರಿದಂತೆ ಒಟ್ಟು 800 ಮಹಿಳೆಯರನ್ನು ಮಿಲಿಟರಿ ಪೊಲೀಸ್ನಲ್ಲಿ ಸೇರ್ಪಡೆಗೊಳಿಸಲು ನಿರ್ಧರಿಸಿದೆ.
ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಭೂಸೇನೆಯು ಉದ್ಯೋಗಿಗಳ ಪೈಕಿ ಶೇ. 3.80 ರಷ್ಟು ಮಹಿಳೆಯರನ್ನು ಹೊಂದಿದೆ. ವಾಯುಪಡೆಯು ಶೇ. 13.09ರಷ್ಟು ಮತ್ತು ನೌಕಾಪಡೆಯು ಶೇ.6ರಷ್ಟು ಮಹಿಳೆಯರನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.