ನವದೆಹಲಿ: ಗಣೇಶ ಚತುರ್ಥಿ ಹಬ್ಬ ಹತ್ತಿರ ಬರುತ್ತಿದೆ, ಗಣೇಶನ ವಿಗ್ರಹ ತಯಾರಿಕಾ ಕಾರ್ಯವೂ ಭರದಿಂದ ಸಾಗುತ್ತಿದೆ. ಅದರಲ್ಲೂ ವಿಶೇಷವಾಗಿ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಪರಿಸರ ಸ್ನೇಹಿ ಗಣಪನನ್ನು ತಯಾರಿಸುವ ಕಾರ್ಯಗಳು ನಡೆಯುತ್ತಿವೆ.
ಪರಿಸರ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಲ್ಲಿನ ಕುಶಲಕರ್ಮಿಗಳು ತಮ್ಮ ವಿಗ್ರಹಗಳನ್ನು ಪರಿಸರ ಸ್ನೇಹಿಯಾಗಿ ತಯಾರು ಮಾಡುತ್ತಿದ್ದಾರೆ. ಈ ವಿಗ್ರಹಗಳನ್ನು ನದಿಗಳು ಮತ್ತು ಜಲಮೂಲಗಳಲ್ಲಿ ವಿಸರ್ಜನೆ ಮಾಡುವಾಗ ಯಾವುದೇ ರೀತಿಯಲ್ಲೂ ಹಾನಿಕಾರಕವಾಗದಂತೆ ಎಚ್ಚರಿಕೆಯನ್ನು ವಹಿಸಿ ಈ ಮೂರ್ತಿಗಳನ್ನು ತಯಾರು ಮಾಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಗ್ರಹ ತಯಾರಕರಾದ ಶರವಣ ಕುಮಾರ್ ಅವರು, “ನಾವು 2 ಅಡಿ ಗಾತ್ರದ ಸಣ್ಣ ಪ್ರತಿಮೆಗಳನ್ನು ಜೇಡಿಮಣ್ಣಿನಿಂದ, ಕಾಗದ ಮತ್ತು ತಿರುಳು ಮುಂತಾದ ಇತರ ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸಿ ತಯಾರಿಸುತ್ತೇವೆ. ಪ್ರತಿಮೆಗಳು ನೀರಿನಲ್ಲಿ ಸುಲಭವಾಗಿ ಕರಗಲು ಸಾಧ್ಯವಾಗುವಂತೆ ನಾವು ವಿಗ್ರಹವನ್ನು ತಯಾರಿಸಿದ್ದೇವೆ. ಪ್ರತಿಮೆಗಳಿಗೆ ಬಳಸಲಾದ ಬಣ್ಣಗಳೂ ಪರಿಸರ ಸ್ನೇಹಿಯಾಗಿವೆ. ಆದ್ದರಿಂದ ಅವುಗಳು ಜಲಮೂಲಗಳನ್ನು ಕಲುಷಿತಗೊಳಿಸುವುದಿಲ್ಲ” ಎಂದಿದ್ದಾರೆ.
“ನಾವು ಮಂಗಳ ವಿನಾಯಕ, ಕಮಲದ ವಿನಾಯಕ, ಗೋ ವಿನಾಯಕ, ನಾಗ ವಿನಾಯಕ ಸೇರಿದಂತೆ ಅನೇಕ ಗಣಪನ ಮೂರ್ತಿಗಳನ್ನು ತಯಾರಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
“ಈ ವರ್ಷ ನಮಗೆ ಉತ್ತಮ ಬೇಡಿಕೆಗಳು ಬರುತ್ತಿವೆ. ಆದರೆ ಬೀಜಗಳಿಂದ ತಯಾರಿಸಿದ ಗಣಪನಿಗೆ ಹೆಚ್ಚಿನ ಬೇಡಿಕೆಗಳಿವೆ” ಎಂದಿದ್ದಾರೆ.
ಸೆಪ್ಟಂಬರ್ 2 ರಂದು ಗಣೇಶ ಚತುರ್ಥಿ ಹಬ್ಬ ಇದ್ದು, ದೇಶದಾದ್ಯಂತ ಈಗಿನಿಂದಲೇ ಗಣಪನನ್ನು ಸ್ವಾಗತಿಸಲು ಭರದಿಂದ ಸಿದ್ಧತೆಗಳು ನಡೆಯುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.