ನವದೆಹಲಿ: ಮಹಾರಾಷ್ಟ್ರದ ಪುಣೆಯ ಆಶಿಶ್ ಕಸೋಡೆಕರ್ ಅವರು ಲಡಾಖ್ನಲ್ಲಿ 555 ಕಿ.ಮೀ ಉದ್ದದ ‘ಲಾ ಅಲ್ಟ್ರಾ ದಿ ಹೈ’ ಮ್ಯಾರಥಾನ್ ಅನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮ್ಯಾರಥಾನ್ ಅನ್ನು ಅತ್ಯಂತ ಕಠಿಣವಾದ ಮ್ಯಾರಥಾನ್ ಎಂದು ಕರೆಯಲಾಗುತ್ತದೆ. ಆಮ್ಲಜನಕದ ಕೊರತೆ, ತಾಪಮಾನ ವ್ಯತ್ಯಾಸ, ಹತ್ತುವಿಕೆ, ದೂರ, 14 ಕಟ್-ಆಫ್ಗಳು ಇತ್ಯಾದಿಗಳು 555 ಕಿ.ಮೀ ಉದ್ದದ ‘ಲಾ ಅಲ್ಟ್ರಾ ದಿ ಹೈ’ ಮ್ಯಾರಥಾನ್ ಅನ್ನು ವಿಶ್ವದ ಕಠಿಣ ಮ್ಯಾರಥಾನ್ ಆಗಿಸಿವೆ. ಇಷ್ಟೆಲ್ಲಾ ಸವಾಲುಗಳನ್ನು ಮೀರಿ ನಿಂತು ಗುರಿ ತಲುಪಿದವನು ಮಾತ್ರ ಇಲ್ಲಿ ವಿಜೇತನಾಗಲು ಸಾಧ್ಯವಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಸೋಡೆಕರ್ ಅವರು, “ಮ್ಯಾರಥಾನ್ನಲ್ಲಿ ಐದು ಸವಾಲುಗಳಿವೆ – ಆಮ್ಲಜನಕದ ಕೊರತೆ, ತಾಪಮಾನ ವ್ಯತ್ಯಾಸಗಳು, 14 ಕಟ್-ಆಫ್ಗಳು, ಹತ್ತುವಿಕೆ ಮತ್ತು ದೂರ. ಆದ್ದರಿಂದ ಇದನ್ನು ವಿಶ್ವದ ಅತ್ಯಂತ ಕಠಿಣ ಮ್ಯಾರಥಾನ್ ಎಂದು ಕರೆಯಲಾಗುತ್ತದೆ, ”ಎಂದು ಅವರು ಹೇಳಿದ್ದಾರೆ.
ಲಡಾಖ್ನಲ್ಲಿ 555 ಕಿ.ಮೀ ಉದ್ದದ ‘ಲಾ ಅಲ್ಟ್ರಾ ದಿ ಹೈ’ ಮ್ಯಾರಥಾನ್ ಅನ್ನು ಪುಣೆ ಮೂಲದ ಆಶಿಶ್ ಕಸೋಡೆಕರ್ ಮತ್ತು 2 ವಿದೇಶಿ ಪ್ರಜೆಗಳು ಅನ್ನು ಪೂರ್ಣಗೊಳಿಸಿದ್ದಾರೆ. ಇದರಲ್ಲಿ ಇಬ್ಬರು ಭಾರತೀಯರು ಸೇರಿದಂತೆ 5 ಜನರು ಭಾಗವಹಿಸಿದ್ದರು. ಮ್ಯಾರಥಾನ್ನ ದೂರವನ್ನು ಈ ವರ್ಷ 333 ಕಿ.ಮೀ.ನಿಂದ 555 ಕಿ.ಮೀ.ಗೆ ವಿಸ್ತರಿಸಲಾಗಿದೆ. ಇದನ್ನು ಐದೂವರೆ ದಿನಗಳಲ್ಲಿ ಪೂರ್ಣಗೊಳಿಸುವ ಸವಾಲನ್ನು ನೀಡಲಾಗಿತ್ತು.
ಮ್ಯಾರಥಾನ್ನ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿರುವ ಮಾಹಿತಿ ಹೇಳುವಂತೆ, ಮ್ಯಾರಥಾನ್ ನಡೆಯುವ ಪ್ರದೇಶವು ಎಷ್ಟು ಸುಂದರವಾಗಿದೆಯೋ ಅಷ್ಟೇ ಕಠಿಣವಾಗಿದೆ.
“ಈ ಪ್ರದೇಶವು ನಮ್ಮನ್ನು 40 ಡಿಗ್ರಿ ಸೆಲ್ಸಿಯಸ್ ಶಾಖವನ್ನು ಅನುಭವಿಸುವಂತೆ ಮಾಡಬಲ್ಲದು ಮತ್ತು ಆರು ಗಂಟೆಗಳ ಅವಧಿಯಲ್ಲಿ ನಮ್ಮನ್ನು ಮೈನಸ್ 12 ಸೆಲ್ಸಿಯಸ್ ಶೀತಕ್ಕೆ ದೂಡಬಲ್ಲದು. ಆಮ್ಲಜನಕದ ಮಟ್ಟವು ಸಮುದ್ರ ಮಟ್ಟದಲ್ಲಿ ನಾವು ಉಸಿರಾಡುವುದಕ್ಕಿಂದ ಶೇ.50ರಷ್ಟು ಆಗಿರುತ್ತದೆ” ಎಂದು ವೆಬ್ಸೈಟ್ ಹೇಳುತ್ತದೆ.
Pune-based Ashish Kasodekar along with 2 foreign nationals completed the 555 kms long ‘La Ultra The High’ marathon in Ladakh. 5 people including 2 Indians participated. Marathon’s distance was extended to 555 kms from 333 kms this yr. It had to be completed in five & a half days. pic.twitter.com/GUczUlMbZf
— ANI (@ANI) August 27, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.