ನವದೆಹಲಿ: ಕೊಟ್ಟ ಭರವಸೆಯನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಈಡೇರಿಸಿದೆ, ದೇಶದಾದ್ಯಂತದ 5,500 ಜನೌಷಧಿ ಕೇಂದ್ರಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು 1 ರೂಪಾಯಿಗೆ ಲಭ್ಯವಾಗುವಂತೆ ಮಾಡಲು ನಿರ್ಧರಿಸಿದೆ.
ಮೋದಿ ಸರ್ಕಾರವು 2018ರಲ್ಲಿ ಪ್ರತಿ ಪ್ಯಾಡ್ಗೆ 2.50 ರೂಪಾಯಿಗಳ ‘ಜನೌಷಧಿ ಸುವಿಧಾ ಆಕ್ಸೊ-ಬಯೋಡಿಗ್ರೇಡೆಬಲ್ ಸ್ಯಾನಿಟರಿ ನ್ಯಾಪ್ಕಿನ್’ ಅನ್ನು ಬಿಡುಗಡೆ ಮಾಡಿತ್ತು, ಆದರೀಗ ಅದರ ದರವನ್ನು 1 ರೂಪಾಯಿಗೆ ಇಳಿಸಲಾಗಿದೆ. ಈ ಪ್ಯಾಡ್ಗಳನ್ನು ಬಳಸಿ ಬಿಸಾಕಿದಾಗ ಅವುಗಳು ಆಮ್ಲಜನಕದ ಸಂಪರ್ಕಕ್ಕೆ ಬಂದು ಜೈವಿಕವಾಗಿ ಮಣ್ಣಿನಲ್ಲಿ ಕರಗುವಂತಹ ಗುಣವನ್ನು ಹೊಂದಿದೆ. ಹೀಗಾಗಿ ಇವುಗಳು ಪರಿಸರ ಸ್ನೇಹಿ ಪ್ಯಾಡ್ಗಳಾಗಿವೆ.
ಉತ್ತಮ ಗುಣಮಟ್ಟದ ಸ್ಯಾನಿಟರಿ ಪ್ಯಾಡುಗಳು ಕೈಗೆಟುಕುವ ದರದಲ್ಲಿ ಲಭ್ಯವಾಗದ ಹಿನ್ನಲೆಯಲ್ಲಿ ನಮ್ಮ ದೇಶದಲ್ಲಿ ಸಮಾರು 28 ದಶಲಕ್ಷ ಬಾಲಕಿಯರು ಶಾಲೆಯನ್ನು ತೊರೆಯುತ್ತಾರೆ ಎಂದು ವರದಿಗಳು ಹೇಳುತ್ತಿವೆ ಎಂದು ಕೇಂದ್ರ ಖಾತೆ ರಾಜ್ಯ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ಪ್ರಧಾನ್ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನ (ಪಿಎಂಬಿಜೆಪಿ) ಯೋಜನೆಯಡಿ ಸ್ಥಾಪಿಸಲಾದ ಜನೌಷಧಿ ಕೇಂದ್ರಗಳು, ಅಗ್ಗದ ಜನರಿಕ್ ಔಷಧಿಗಳನ್ನು ಎಲ್ಲಾ ಭಾರತೀಯರಿಗೆ ಕೈಗೆಟುಕುವಂತೆ ಮಾಡಿದೆ. ಈ ಮೂಲಕ ಗುಣಮಟ್ಟದ ಕೈಗೆಟುಕುವ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ವದ ಸಾಧನೆಯನ್ನು ಮಾಡುತ್ತಿದೆ. 2019ರ ಜುಲೈ 31ರವರೆಗೆ ಪಿಎಂಬಿಜೆಪಿ ಕೇಂದ್ರಗಳಲ್ಲಿ 1.30 ಕೋಟಿ ಪ್ಯಾಡ್ಗಳನ್ನು ಮಾರಾಟ ಮಾಡಲಾಗಿದೆ.
ಜನರಿಗೆ ತಮ್ಮ ಹತ್ತಿರದ ಜನೌಷಧಿಧಿ ಕೇಂದ್ರಗಳನ್ನು ಪತ್ತೆಹಚ್ಚಲು ಅನುಕೂಲವಾಗುವ ನಿಟ್ಟಿನಲ್ಲಿ ‘ಜನೌಷಧಿ ಸುಗಮ್’ ಎಂಬ ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್ಫಾರ್ಮ್ಗಳಲ್ಲಿ ಮೊಬೈಲ್ ಅಪ್ಲಿಕೇಶನ್ ಅನ್ನೂ ಹೊರ ತರಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.