ನವದೆಹಲಿ: ಉನ್ನತ ಶ್ರೇಣಿಯ ಸೇನಾಧಿಕಾರಿಗಳ ಸಮವಸ್ತ್ರಗಳಲ್ಲಿ ಏಕರೂಪತೆಯನ್ನು ತರುವ ಸಲುವಾಗಿ, ಭಾರತೀಯ ಸೇನೆಯು ಕರ್ನಲ್ ಶ್ರೇಣಿಯಿಂದ ಮೇಲ್ಪಟ್ಟ ಸೇನಾಧಿಕಾರಿಗಳ ಸಮವಸ್ತ್ರಗಳಲ್ಲಿ ಇರುವ ವ್ಯತ್ಯಾಸವನ್ನು ದೂರ ಮಾಡಲು ನಿರ್ಧರಿಸಿದೆ.
ವರದಿಗಳ ಪ್ರಕಾರ, ನಿರ್ಧಾರವನ್ನು ಜಾರಿಗೊಳಿಸಿದ ನಂತರ, ಬ್ರಿಗೇಡಿಯರ್-ಶ್ರೇಣಿಯ ಮತ್ತು ಅದಕ್ಕಿಂತ ಉನ್ನತ ಅಧಿಕಾರಿಗಳೆಲ್ಲರೂ ಒಂದೇ ಬೆರೆಟ್, ಕ್ಯಾಪ್, ಶೋಲ್ಡರ್ ಬ್ಯಾಡ್ಜ್, ಲ್ಯಾನ್ಯಾರ್ಡ್ ಮತ್ತು ಬೆಲ್ಟ್ ಅನ್ನು ಹೊಂದಿರಲಿದ್ದಾರೆ.
ಪ್ರಸ್ತುತ, ಅಧಿಕಾರಿಯ ರೆಜಿಮೆಂಟ್ ಅಥವಾ ಆರ್ಮ್ ಅನ್ನು ಅವಲಂಬಿಸಿ, ಬೆರೆಟ್, ಲ್ಯಾನ್ಯಾರ್ಡ್, ಬ್ಯಾಡ್ಜ್ ಇತ್ಯಾದಿಗಳ ಬಣ್ಣವು ಭಿನ್ನವಾಗಿದೆ. ಇದಲ್ಲದೆ, ಬೆಲ್ಟ್ನಲ್ಲಿರುವ ಬ್ಯಾಡ್ಜ್ ಕೂಡ ವಿಭಿನ್ನವಾಗಿದೆ.
“ಬ್ರಿಗೇಡಿಯರ್ ಹುದ್ದೆಯ ಅಧಿಕಾರಿಗಳ ಸಮವಸ್ತ್ರದಲ್ಲಿನ ವ್ಯತ್ಯಾಸಗಳನ್ನು ತೆಗೆದುಹಾಕುವ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ. ಸಮವಸ್ತ್ರವು ಅವರು ಸೇರಿದ ರೆಜಿಮೆಂಟ್, ಆರ್ಮ್ ಅಥವಾ ಸೇವೆಯೊಂದಿಗಿನ ಅವರ ಸಂಪರ್ಕವನ್ನು ತೋರಿಸುತ್ತದೆ. ಆದರೆ ಅವರೆಲ್ಲರೂ ಭಾರತೀಯ ಸೇನಾಧಿಕಾರಿಗಳು, ಆದ್ದರಿಂದ ಯಾವುದೇ ವ್ಯತ್ಯಾಸ ಇರಬಾರದು. ಲ್ಯಾನ್ಯಾರ್ಡ್ ಅಥವಾ ರೆಜಿಮೆಂಟ್ಗೆ ಯಾವುದೇ ಸಂಬಂಧ ಇರಬಾರದು” ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ವರದಿಯ ಪ್ರಕಾರ, ಅಧಿಕಾರಿಗಳ ಮೆಸ್ಸಿಗೆ ಭೇಟಿ ನೀಡಿದಾಗ ಅಧಿಕಾರಿಗಳು ಧರಿಸುವ ಸಂಜೆಯ ಉಡುಪಿನ ಬದಲಾವಣೆಯೊಂದಿಗೆ ಈ ಪ್ರಕ್ರಿಯೆಯು ಪ್ರಾರಂಭವಾಗಲಿದೆ. ಉಡುಗೆಗಾಗಿ ಸೇನೆಯು ಈಗಾಗಲೇ ಮೂರು ರೀತಿಯ ಮಾದರಿಗಳನ್ನು ಸ್ವೀಕರಿಸಿದೆ ಮತ್ತು ಅದರ ಬಗೆಗಿನ ಅಂತಿಮ ತೀರ್ಮಾನವನ್ನು ಶೀಘ್ರದಲ್ಲೇ ತೆಗೆದುಕೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ.
ಸೇನೆಯು ಲೆಫ್ಟಿನೆಂಟ್ ಹುದ್ದೆಯಿಂದ ಹಿಡಿದು ಸೈನ್ಯದ ಮುಖ್ಯಸ್ಥರವರೆಗಿನ ಜನರಲ್ ಹುದ್ದೆಯವರೆಗೆ ಒಟ್ಟು 42,913 ಅಧಿಕಾರಿಗಳನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.