ನವದೆಹಲಿ: ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕಿಸ್ಥಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೊಡೆತ ಸಿಕ್ಕಿದೆ. ಭಯೋತ್ಪಾದನೆಗೆ ಹಣಕಾಸು ಒದಗಿಸುವುದರ ವಿರುದ್ಧ ಕ್ರಮ ಜರುಗಿಸುವಲ್ಲಿ ಬದ್ಧತೆಯನ್ನು ತೋರಿಸಲು ವಿಫಲವಾದ ಹಿನ್ನಲೆಯಲ್ಲಿ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್)ನ ಏಷ್ಯಾ ಪೆಸಿಫಿಕ್ ಗ್ರೂಪ್ ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರ್ಪಡೆಗೊಳಿಸಿದೆ.
ಎಫ್ಎಟಿಎಫ್ ಏಷ್ಯಾ ಪೆಸಿಫಿಕ್ ಗ್ರೂಪ್ ಪಾಕಿಸ್ಥಾನವನ್ನು ಪ್ರಸ್ತುತ ತನ್ನ ಎನ್ಹ್ಯಾನ್ಸ್ಡ್ ಎಕ್ಸ್ಪೆಡಿಟೆಡ್ ಫಾಲೋ ಅಪ್ ಲಿಸ್ಟ್ (ಬ್ಲ್ಯಾಕ್ ಲಿಸ್ಟ್)ಗೆ ಹಾಕಿದೆ.
ಆಸ್ಟ್ರೇಲಿಯಾದ ಕ್ಯಾನ್ಬೆರಾದಲ್ಲಿ ನಡೆದ 6 ದಿನಗಳ ಎಫ್ಎಟಿಎಫ್ ಏಷ್ಯಾ ಪೆಸಿಫಿಕ್ ಗ್ರೂಪ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ, ಹಣಕಾಸು ವಂಚನೆ ಮತ್ತು ಭಯೋತ್ಪಾದಕ ಹಣಕಾಸು ನೆರವಿಗೆ ಸಂಬಂಧಿಸಿದ 40 ನಿಯತಾಂಕಗಳ ಪೈಕಿ 32 ರಲ್ಲಿ ಪಾಕಿಸ್ಥಾನವು ವೈಫಲ್ಯವನ್ನು ಕಂಡ ಹಿನ್ನಲೆಯಲ್ಲಿ ಅದನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತದ ಅಧಿಕಾರಿಯೊಬ್ಬರು, “ತನ್ನ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾದ ಕಾರಣ ಪಾಕಿಸ್ಥಾನವನ್ನು ಎಪಿಜಿಯು ಎನ್ಹ್ಯಾನ್ಸ್ಡ್ ಎಕ್ಸ್ಪೆಡಿಟೆಡ್ ಫಾಲೋ ಅಪ್ ಲಿಸ್ಟ್ (ಬ್ಲ್ಯಾಕ್ ಲಿಸ್ಟ್)ನಲ್ಲಿ ಇರಿಸಿದೆ” ಎಂದು ಹೇಳಿದ್ದಾರೆ.
ಭಯೋತ್ಪಾದಕ ಹಣಕಾಸು ಮತ್ತು ಹಣಕಾಸು ವಂಚನೆಗೆ ಸಂಬಂಧಿಸಿದ 11 ಪರಿಣಾಮಕಾರಿ ನಿಯತಾಂಕಗಳ ಪೈಕಿ 10 ರಲ್ಲಿ ಪಾಕಿಸ್ಥಾನದ ಕಾರ್ಯಕ್ಷಮತೆ ತೀವ್ರ ಕಡಿಮೆ ಎಂದು ಕಂಡುಬಂದಿದೆ. ಅಚ್ಚರಿಯೆಂದರೆ, ಒಂದೇ ಒಂದು ನಿಯತಾಂಕದಲ್ಲಿ ತನ್ನನ್ನು ತಾನು ಸಮರ್ಥಿಸಿಕೊಳ್ಳಲು, ಎಫ್ಎಟಿಎಫ್ ಮನವೊಲಿಸಲು ಪಾಕಿಸ್ಥಾನ ಸಂಪೂರ್ಣ ವಿಫಲವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.