ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್-ಟು-ಪೋಸ್ಟಲ್ ಸಂಸ್ಥೆಯಾದ ಇಂಡಿಯಾ ಪೋಸ್ಟ್, ಸುಧಾರಿತ ಬ್ಯಾಂಕಿಂಗ್ ಸೇವೆಗಳು ಇಲ್ಲದ ಕುಗ್ರಾದ ಸ್ಥಳಗಳಿಂದ ಬರುವ ಗ್ರಾಹಕರಿಗಾಗಿ ಆನ್ಲೈನ್ ಮತ್ತು ಆಫ್ಲೈನ್ ಸೇವೆಗಳೆಡರನ್ನೂ ಹೊಂದಿದೆ. ತೆರಿಗೆ ಉಳಿತಾಯಕ್ಕೆ ಸಂಬಂಧಿಸಿದಂತೆ, ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ ಅಡಿಯಲ್ಲಿ ಇಂಡಿಯಾ ಪೋಸ್ಟ್ ಹಲವಾರು ತೆರಿಗೆ ಉಳಿತಾಯ ಯೋಜನೆಗಳನ್ನು ಹೊಂದಿದೆ, ಇದರಲ್ಲಿ ಹೂಡಿಕೆಯನ್ನು ಮಾಡುವ ಮೂಲಕ ಜನರು ತೆರಿಗೆ ವಿನಾಯಿತಿ ಪಡೆಯಬಹುದು. ಪೋಸ್ಟ್ ಆಫೀಸ್ ತೆರಿಗೆ ಉಳಿತಾಯ ಯೋಜನೆಗಳಲ್ಲಿನ ಹೂಡಿಕೆಯ ಮೇಲಿನ ತೆರಿಗೆ ವಿನಾಯಿತಿಯು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ಲಭ್ಯವಿದೆ.
ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯಡಿ, ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್, ನ್ಯಾಷನಲ್ ಸೇವಿಂಗ್ಸ್ ರಿಕರಿಂಗ್ ಡೆಪೋಸಿಟ್ ಅಕೌಂಟ್, ನ್ಯಾಷನಲ್ ಸೇವಿಂಗ್ಸ್ ಟೈಮ್ ಡೆಪೋಸಿಟ್ ಅಕೌಂಟ್, ನ್ಯಾಷನಲ್ ಸೇವಿಂಗ್ಸ್ ಇನ್ಕಂ ಅಕೌಂಟ್, ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್, ಪಬ್ಲಿಕ್ ಪ್ರೊವಿಡೆಂಟ್ ಫಂಡ್ ಅಕೌಂಟ್, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (VIII Issue) ಅಕೌಂಟ್, ಕಿಸಾನ್ ವಿಕಾಸ್ ಪತ್ರ ಅಕೌಂಟ್ ಮತ್ತು ಸುಕನ್ಯಾ ಸಮೃದ್ಧಿ ಅಕೌಂಟ್ ಸೌಲಭ್ಯಗಳನ್ನು ಇಂಡಿಯಾ ಪೋಸ್ಟ್ ಹೊಂದಿದೆ.
ಮೇಲೆ ತಿಳಿಸಿದ ಉಳಿತಾಯ ಯೋಜನೆಗಳ ಪೈಕಿ, ನ್ಯಾಷನಲ್ ಸೇವಿಂಗ್ಸ್ ಟೈಮ್ ಡೆಪೋಸಿಟ್ ಅಕೌಂಟ್, ಪಬ್ಲಿಕ್ ಪ್ರೊವಿಡೆಂಟ್ ಫಂಡ್ ಅಕೌಂಟ್, ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ಸ್ (VIII Issue) ಅಕೌಂಟ್ ಮತ್ತು ಸುಕನ್ಯಾ ಸಮೃದ್ಧಿ ಖಾತೆಗಳು ರೂ. 1.5 ಲಕ್ಷ ರೂಪಾಯಿವರೆಗಿನ ಹೂಡಿಕೆಗಳಿಗೆ ತೆರಿಗೆ ವಿನಾಯಿತಿಯನ್ನು ನೀಡುತ್ತವೆ. ವಿಶೇಷವೆಂದರೆ, ಪಬ್ಲಿಕ್ ಪ್ರೊವಿಡೆಂಟ್ ಫಂಡ್ ಮತ್ತು ಸುಕನ್ಯಾ ಸಮೃದ್ಧಿ ಖಾತೆಯು ಮೂರು ಪಟ್ಟು ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ ಮತ್ತು 1.5 ಲಕ್ಷ ರೂ.ಗಳವರೆಗೆ ತೆರಿಗೆ ವಿನಾಯಿತಿಯನ್ನು ನೀಡುತ್ತದೆ. ಮೇಲಾಗಿ, ಗಳಿಸಿದ ಬಡ್ಡಿ ಮತ್ತು ಮುಕ್ತಾಯ ಅವಧಿ ಮುಗಿದ ನಂತರ ಹಿಂಪಡೆಯುವ ಮೊತ್ತಕ್ಕೆ ಕೂಡ ತೆರಿಗೆ ವಿನಾಯಿತಿ ನೀಡಲಾಗುತ್ತದೆ.
ಪೋಸ್ಟ್ ಆಫೀಸ್ ಟೈಮ್ ಡೆಪೋಸಿಟ್ ಶೇಕಡಾ 7.7 ರಷ್ಟು ಬಡ್ಡಿದರವನ್ನು ಪಡೆಯುತ್ತದೆ, ಇದನ್ನು ವಾರ್ಷಿಕವಾಗಿ ಪಾವತಿಸಲಾಗುತ್ತದೆ ಮತ್ತು ತ್ರೈಮಾಸಿಕವಾಗಿ ಲೆಕ್ಕಹಾಕಲಾಗುತ್ತದೆ. ಪೋಸ್ಟ್ ಆಫೀಸ್ ಪಬ್ಲಿಕ್ ಪ್ರೊವಿಡೆಂಟ್ ಫಂಡ್, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಮತ್ತು ಸುಕನ್ಯಾ ಸಮೃದ್ಧಿ ಖಾತೆಗಳು ವಾರ್ಷಿಕ ಶೇ 7.9 ರಷ್ಟು ಬಡ್ಡಿದರವನ್ನು ನೀಡುತ್ತವೆ. ಸುಕನ್ಯಾ ಸಮೃದ್ಧಿ ಮತ್ತು ಪಬ್ಲಿಕ್ ಪ್ರೊವಿಡೆಂಟ್ ಫಂಡಿನಲ್ಲಿ ಗರಿಷ್ಠ ಹೂಡಿಕೆ ಮಿತಿಯನ್ನು ವಾರ್ಷಿಕವಾಗಿ 1.5 ಲಕ್ಷ ರೂಪಾಯಿಗೆ ನಿಗದಿಪಡಿಸಲಾಗಿದೆ. ಮತ್ತೊಂದೆಡೆ, ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ಸ್ ಸೇವಿಂಗ್ಸ್ ಸ್ಕೀಮ್ ವಾರ್ಷಿಕ ಶೇ 8.6 ರಷ್ಟು ಬಡ್ಡಿದರವನ್ನು ನೀಡುತ್ತದೆ. 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ನಾಗರಿಕರು ಮಾತ್ರ ಈ ಖಾತೆಯನ್ನು ಹೊಂದಲು ಅರ್ಹರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.