ನವದೆಹಲಿ: ರಕ್ಷಣಾ ಉತ್ಪಾದನೆಗಳಲ್ಲಿ ಸಮಾನ ಅವಕಾಶಗಳನ್ನು ಒದಗಿಸಬೇಕೆಂಬ ಖಾಸಗಿ ಕೈಗಾರಿಕೆಗಳ ದೀರ್ಘಕಾಲದ ಬೇಡಿಕೆಯನ್ನು ಕೊನೆಗೂ ಅಂಗೀಕರಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಖಾಸಗಿ ವಲಯಗಳಿಗೆ ಸರ್ಕಾರಗಳ ಪರೀಕ್ಷಾ ಸೌಲಭ್ಯಗಳನ್ನು ಶೀಘ್ರದಲ್ಲೇ ತೆರೆಯಲಾಗುವುದು ಎಂದು ಘೋಷಿಸಿದರು.
“ದೇಶೀಯ ಉತ್ಪಾದನೆಯಲ್ಲಿ ಭಾಗವಹಿಸುವವರ ಅಭಿಪ್ರಾಯಗಳನ್ನು ಪಡೆದ ನಂತರ ಸರ್ಕಾರದ ಪರೀಕ್ಷಾ ಸೌಲಭ್ಯಗಳನ್ನು ಖಾಸಗಿ ವಲಯಕ್ಕೆ ಒದಗಿಸುವ ಪ್ರಸ್ತಾಪವನ್ನು ನಾವು ಅನುಮೋದಿಸಿದ್ದೇವೆ” ಎಂದು ರಕ್ಷಣಾ ಸಚಿವರು ಹೇಳಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಏರ್ ಚೀಫ್ ಬಿಎಸ್ ಧನೋವಾ, ಮಿಗ್ 21 ಯುದ್ಧ ವಿಮಾನದ ಹಳೆಯ ಮತ್ತು ನವೀಕರಿಸದ ಆವೃತ್ತಿಗಳನ್ನು ಹಂತಹಂತವಾಗಿ ನಿಲ್ಲಿಸಲಿದ್ದೇವೆ ಎಂದು ಹೇಳಿದರು. “ಮಿಗ್ ಯುದ್ಧ ವಿಮಾನದ ಮೂಲ ಆವೃತ್ತಿಗಳನ್ನು ಈ ವರ್ಷದ ಡಿಸೆಂಬರ್ ವೇಳೆಗೆ ಸ್ಥಗಿತಗೊಳಿಸಲಾಗುವುದು” ಎಂದಿದ್ದಾರೆ.
ಮಿಗ್ಗಳ ಮೊದಲ ಆವೃತ್ತಿಗಳು 55 ವರ್ಷಗಳ ಹಿಂದೆ 1964ರಲ್ಲಿ ಸೂಪರ್ಸಾನಿಕ್ ಜೆಟ್ಗಳಾಗಿ ವಾಯುಸೇನೆಯನ್ನು ಪ್ರವೇಶಿಸಿದವು. ಈ ವಿಮಾನದ ಯಂತ್ರಗಳ ಕೂಲಂಕುಷ ಪರಿಷ್ಕರಣೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಕ್ಕಾಗಿ ಮತ್ತು ರಷ್ಯಾ ಈ ಜೆಟ್ ಹಾರಾಟವನ್ನು ನಿಲ್ಲಿಸಿದರೂ ಕೂಡ ಭಾರತದಲ್ಲಿ ಅದನ್ನು ಯುದ್ಧಕ್ಕೆ ಸಿದ್ಧವಾಗಿಟ್ಟುಕೊಂಡಿದ್ದಕ್ಕಾಗಿ ಧನೋವಾ ವಾಯುಸೇನೆಯ ಎಚ್ಎಎಲ್ ಮತ್ತು ಬೇಸ್ ರಿಪೇರಿ ಡಿಪೋಗಳನ್ನು ಶ್ಲಾಘಿಸಿದ್ದಾರೆ. “ಕೂಲಂಕುಷ ಪರಿಷ್ಕರಣೆಯ ಶೇ.95ರಷ್ಟು ಘಟಕಗಳನ್ನು ನಾವು ದೇಶೀಯವಾಗಿ ತಯಾರಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.