ಕರಾಚಿ: ಭಾರತ ವಿರೋಧಿ ಟ್ವೀಟ್ಗಳನ್ನು ಮಾಡುತ್ತಿದ್ದ ಪಾಕಿಸ್ಥಾನಿ ನೂರಾರು ಖಾತೆಗಳನ್ನು ಟ್ವಿಟರ್ ಅಮಾನತುಪಡಿಸಿದೆ. ಭಾರತದಲ್ಲಿ ಅಧಿಕಾರಿಗಳಿಂದ ಆಕ್ಷೇಪ ವ್ಯಕ್ತವಾದ ಹಿನ್ನಲೆಯಲ್ಲಿ, ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಲಾಗಿದೆ.
ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಂಡ ಬಳಿಕ ಪಾಕಿಸ್ಥಾನದಿಂದ ಬೇಕಾಬಿಟ್ಟಿಯಾಗಿ ಭಾರತ ವಿರೋಧಿ ಟ್ವಿಟ್ಗಳು ಹರಿದು ಬರುತ್ತಿದ್ದರು. ಈ ಹಿನ್ನಲೆಯಲ್ಲಿ ಇದುವರೆಗೆ 200 ಖಾತೆಗಳನ್ನು ಸ್ಥಗಿತಗೊಳಿಸಿದೆ ಎಂದು ಹೇಳಲಾಗಿದೆ.
ಕಳೆದ ವಾರದಲ್ಲಿ ಅಮಾನತುಗೊಂಡ 200 ಖಾತೆಗಳು ಕಾಶ್ಮೀರದ ಬಗೆಗೆ ಪೋಸ್ಟ್ ಮಾಡುತ್ತಿದ್ದವು, ಅವುಗಳನ್ನು ನಿಷೇಧಿಸುವ ಮೂಲಕ ಟ್ವಿಟರ್ ತಾರತಮ್ಯದ ಧೋರಣೆಯನ್ನು ಅನುಸರಿಸಿದೆ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ ಎಂಬುದಾಗಿ ಅಲ್ಲಿನ ಡಾನ್ ನ್ಯೂಸ್ ವರದಿ ಮಾಡಿದೆ.
ಅಲ್ಲಿನ ಪತ್ರಕರ್ತರು, ಕಾರ್ಯಕರ್ತರು, ಸರ್ಕಾರಿ ಅಧಿಕಾರಿಗಳು ಮತ್ತು ಮಿಲಿಟರಿ ಅಭಿಮಾನಿಗಳು ಕಾಶ್ಮೀರದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಟ್ವಿಟ್ ವೇಳೆ ಭಾರತ ವಿರೋಧಿ ಸಂದೇಶಗಳನ್ನು ರವಾನೆ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ವಿಟರ್ ವಕ್ತಾರರು, ಪಾಕಿಸ್ಥಾನದ ಆರೋಪವನ್ನು ನಿರಾಕರಿಸಿದ್ದಾರೆ. ಅಲ್ಲದೇ, ಅಮಾನತು ನಿರ್ಧಾರವನ್ನು ನ್ಯಾಯೋಚಿತವಾಗಿಯೇ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. “ಯಾವುದೇ ವಿಷಯದ ಬಗೆಗಿನ ಪರ ಮತ್ತು ವಿರೋಧ ಚರ್ಚೆಗಳನ್ನು ಟ್ವಿಟರ್ ಬೆಂಬಲಿಸುತ್ತದೆ. ಆದರೆ ಭಯೋತ್ಪಾದನೆ, ದ್ವೇಷದ ನಡವಳಿಕೆ, ನಿಂದನೆ ಕುರಿತ ಪೋಸ್ಟ್ಗಳನ್ನು ನಾವು ಸಹಿಸುವುದಿಲ್ಲ” ಎಂದಿದೆ.
ಪ್ರಸ್ತುತ ಪಾಕಿಸ್ಥಾನದಲ್ಲಿ #StopSuspendingPakistanis ಹ್ಯಾಶ್ಟ್ಯಾಗ್ ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.