ನವದೆಹಲಿ: ಲಂಡನ್ನಲ್ಲಿ ತಾನು ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಭೇಟಿಯಾಗಿರುವುದಾಗಿ ಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ ಹೇಳಿಕೊಂಡಿದ್ದಾರೆ.
ಸುದ್ದಿ ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು, ದಾವೂದ್ ಮಾತ್ರವಲ್ಲದೇ ಛೋಟಾ ಶಕೀಲ್ನನ್ನು ಭೇಟಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಅಲ್ಲದೇ ದಾವೂದ್ ಶರಣಾಗುವ ಆಫರ್ ನೀಡಿದ್ದ, ಆದರೆ ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ಶರದ್ ಪವಾರ್ ಅವರು ಈ ಆಫರನ್ನು ತಿರಸ್ಕರಿಸಿದ್ದರು. ಯುಪಿಎ ಸರ್ಕಾರ ಕೂಡ ಆಫರ್ ತಿರಸ್ಕರಿಸಿತ್ತು ಎಂದಿದ್ದಾರೆ.
ಭಾರತಕ್ಕೆ ಶರಣಾಗಲು ಬಯಸಿದ್ದ ದಾವೂದ್, ಪ್ರಾಣ ಭಯದ ಕಾರಣ ತನ್ನನ್ನು ಗೃಹ ಬಂಧನದಲ್ಲಿರಿಸಬೇಕು ಎಂದು ಕೇಳಿಕೊಂಡಿದ್ದ. ಭಾರತ ಥರ್ಡ್ ಡಿಗ್ರಿ ಟ್ರಿಟ್ಮೆಂಟ್ ನೀಡದಂತೆ ನೋಡಿಕೊಳ್ಳಬೇಕು ಮತ್ತು ತನ್ನನ್ನು ವಾಪಾಸ್ ಹೋಗಲು ಬಿಡಬೇಕು ಎಂದು ಕಂಡೀಷನ್ ಹಾಕಿದ್ದ ಎಂದು ಜೇಠ್ಮಲಾನಿ ಹೇಳಿಕೊಂಡಿದ್ದಾರೆ.
1993ರ ಮುಂಬಯಿ ಸರಣಿ ಸ್ಫೋಟದ ರುವಾರಿಯಾಗಿರುವ ದಾವೂದ್ ಭಾರತಕ್ಕೆ ಅತ್ಯಂತ ಬೇಕಾದ ಭಯೋತ್ಪಾದಕನಾಗಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.