ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕೋರಿಕೆಯ ಮೇರೆಗೆ ನಿರ್ಮಲಾ ಸೀತಾರಾಮನ್ ನೇತೃತ್ವದ ಹಣಕಾಸು ಸಚಿವಾಲಯವು ಸಿಯೋಲ್ ಶಾಂತಿ ಬಹುಮಾನದ ನಗದು ಪುರಸ್ಕಾರ 1.3 ಕೋಟಿ ರೂ.ಗಳ ಮೇಲೆ ವಿಧಿಸಲಾಗಿದ್ದ ಆದಾಯ ತೆರಿಗೆ ವಿನಾಯಿತಿಯನ್ನು ಹಿಂಪಡೆದುಕೊಂಡಿದೆ. ಮೋದಿ ಅವರು ಸಚಿವಾಲಯಕ್ಕೆ ಪತ್ರ ಬರೆದು ತೆರಿಗೆ ವಿನಾಯಿತಿ ಹಿಂಪಡೆಯುವಂತೆ ಕೋರಿದ್ದರು.
ದೇಶದ ಇತರ ತೆರಿಗೆದಾರರಂತೆ ನಾನೂ ಕೂಡ ತೆರಿಗೆ ಪಾವತಿಸಲು ಬಯಸುತ್ತೇನೆ ಎಂದು ಮೋದಿ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಮಾರ್ಚ್ ತಿಂಗಳಲ್ಲಿ ಸೆಂಟ್ರಲ್ ಬ್ಯೂರೋ ಆಫ್ ಡೈರೆಕ್ಟ್ ಟ್ಯಾಕ್ಸ್ (ಸಿಬಿಡಿಟಿ)ಯು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10 (17 ಎ) (ಐ) ಅಡಿಯಲ್ಲಿ ಬಹುಮಾನದ ಹಣಕ್ಕೆ ತೆರಿಗೆಯಿಂದ ವಿನಾಯಿತಿಯನ್ನು ನೀಡಿತ್ತು.
ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಅವರು ಆಗಸ್ಟ್ 11 ರಂದು ಸೀತಾರಾಮನ್ ಅವರಿಗೆ ಪತ್ರವನ್ನು ಬರೆದಿದ್ದು, “ದೇಶದ ಇತರ ಕೋಟ್ಯಾಂತರ ತೆರಿಗೆ ಪಾವತಿದಾರರಿಗೆ ಅನ್ವಯವಾಗುವ ಆದಾಯ ತೆರಿಗೆ ನಿಬಂಧನೆಗಳಿಗೆ ಬಹುಮಾನದ ಹಣವೂ ಒಳಪಡಬೇಕು ಎಂದು ನಾನು ವಿನಂತಿಸುತ್ತೇನೆ” ಎಂದಿದ್ದರು.
ಆದಾಯ ತೆರಿಗೆ ಸಂಗ್ರಹದಿಂದ ಬರುವ ಆದಾಯವು ರಾಷ್ಟ್ರ ನಿರ್ಮಾಣದ ಕಡೆಗೆ ಹೋಗುತ್ತದೆ. ಹೀಗಾಗಿ ವಿನಾಯಿತಿಯನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿದ್ದೇನೆ ಎಂದಿದ್ದರು.
ಇದರ ಪರಿಣಾಮವಾಗಿ ಆಗಸ್ಟ್ 14 ರಂದು ಆದೇಶ ಹೊರಡಿಸಿದ ಸಿಬಿಡಿಟಿಯು, ಪ್ರಧಾನಮಂತ್ರಿಯವರ ಕೋರಿಕೆಯ ಮೇರೆಗೆ ಬಹುಮಾನದ ಹಣವನ್ನು ಆದಾಯ ತೆರಿಗೆ ಕಾನೂನುಗಳ ಅಡಿಯಲ್ಲಿ ನಿಯಮಿತ ಮೌಲ್ಯಮಾಪನಕ್ಕೆ ಒಳಪಡಿಸಲಾಗುತ್ತದೆ ಎಂದು ಘೋಷಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.