ನವದೆಹಲಿ: ಕೊನೆಯ ಮೊಘಲ್ ದೊರೆ ಬಹದ್ದೂರ್ ಷಾ ಜಾಫರ್ನ ವಂಶಸ್ಥನೆಂದು ಹೇಳಿಕೊಳ್ಳುವ ಪ್ರಿನ್ಸ್ ಹಬೀಬುದ್ದೀನ್ ಟ್ಯೂಸಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ನಿರ್ಮಿಸಲು ಚಿನ್ನದ ಇಟ್ಟಿಗೆಯನ್ನು ದಾನ ಮಾಡಲು ಮುಂದಾಗಿದ್ದಾರೆ.
ಅಲ್ಲದೇ, 1529 ರಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಿದ ಮೊದಲ ಮೊಘಲ್ ದೊರೆ ಬಾಬರನ ವಂಶಸ್ಥ ತಾನಾಗಿರುವುದರಿಂದ ಅಯೋಧ್ಯಾದ ಭೂಮಿಯ ನಿಜವಾದ ವಾರಸುದಾರ ತಾನೆಂದು ಇವರು ಹೇಳಿಕೊಂಡಿದ್ದಾರೆ. ಹೀಗಾಗಿ ಬಾಬರಿ ಮಸೀದಿ-ರಾಮ ಜನ್ಮಭೂಮಿ ಭೂಮಿಯನ್ನು ತನಗೆ ಹಸ್ತಾಂತರಿಸಬೇಕೆಂದು ವಾದಿಸುತ್ತಿದ್ದಾರೆ.
ಒಂದು ವೇಳೆ ಸುಪ್ರೀಂಕೋರ್ಟ್ ತನಗೆ ಭೂಮಿಯನ್ನು ಹಸ್ತಾಂತರ ಮಾಡಿದರೆ, ಅದನ್ನು ಸಂಪೂರ್ಣವಾಗಿ ರಾಮಮಂದಿರ ನಿರ್ಮಾಣಕ್ಕೆ ಕೊಡುತ್ತೇನೆ ಎಂದೂ ಹೇಳಿಕೊಂಡಿದ್ದಾನೆ. ರಾಮಮಂದಿರವಿದ್ದ ಜಾಗದಲ್ಲಿ ಬಾಬರಿ ಮಸೀದಿಯನ್ನು ನಿರ್ಮಾಣ ಮಾಡಲಾಗಿದೆ. ಹೀಗಾಗಿ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ಇದನ್ನು ಸರಿಪಡಿಸುವ ಸಲುವಾಗಿ ಆ ಜಾಗದಲ್ಲಿ ರಾಮಮಂದಿರವನ್ನು ನಿರ್ಮಾಣ ಮಾಡಲು ಬಯಸುವುದಾಗಿ ಈತ ಹೇಳಿಕೊಂಡಿದ್ದಾನೆ.
ಈ ಬಗ್ಗೆ ಈಗಾಗಲೇ ಇವರು ಸುಪ್ರೀಂಕೋರ್ಟ್ಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ. ಅವರ ಅರ್ಜಿ ಇನ್ನೂ ವಿಚಾರಣೆಗೆ ಬಂದಿಲ್ಲ.
ಅಯೋಧ್ಯಾಗೆ ಮೂರು ಬಾರಿ ತೆರಳಿ ಅಲ್ಲಿರುವ ತಾತ್ಕಾಲಿಕ ರಾಮಮಂದಿರದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿರುವ ಟ್ಯೂಸಿ ಅವರು, ಇಡೀ ಭೂಮಿಯನ್ನು ರಾಮ ಮಂದಿರಕ್ಕೆ ನೀಡುವ ಪ್ರತಿಜ್ಞೆಯನ್ನು ಮಾಡಿದ್ದಾರೆ.
ರಾಮಮಂದಿರ ಧ್ವಂಸ ಮಾಡಿದ್ದಕ್ಕೆ ಹಿಂದೂ ಸಮುದಾಯದವರ ಕ್ಷಮಾಪಣೆಯನ್ನೂ ಕೇಳಿರುವ ಇವರು, ಕ್ಷಮಾಪಣೆಯ ಸಂಕೇತವಾಗಿ ಚರಣ ಪಾದುಕವನ್ನು ತಲೆ ಮೇಲೆ ಇಟ್ಟುಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.