ಮುಂಬಯಿ: ಹೊಟ್ಟೆ ಹೊರೆಯಲು, ಕುಟುಂಬವನ್ನು ಸಾಕಲು, ಉದ್ಯಮ ಮಾಡಲು ಹೀಗೆ ಹಲವಾರು ಆಸೆ ಆಕ್ಷಾಂಕೆಗಳನ್ನು ಹೊತ್ತು ಕೊಂಡು ದೇಶದ ಮೂಲೆ ಮೂಲೆಯಿಂದ ಜನರು ಮುಂಬಯಿ ಎನ್ನುವ ಮಾಯಾನಗರಿಗೆ ಬರುತ್ತಾರೆ.
ಫುಟ್ಪಾತ್ನಲ್ಲಿ ಮಲಗಿದ ಅದೆಷ್ಟೋ ಮಂದಿಯನ್ನು ಇದೇ ಮುಂಬಯಿ ಕೋಟ್ಯಾಧಿಪತಿಗಳನ್ನಾಗಿ ಮಾಡಿದೆ. ಇಲ್ಲಿ ಕೂಲಿ ಕೆಲಸ ಮಾಡಿದ ಹಲವರು ಈಗ ಸೂಪರ್ ಸ್ಟಾರ್ಗಳಾಗಿ ಮೆರೆಯುತ್ತಿದ್ದಾರೆ. ಎಲ್ಲರ ಕನಸನ್ನು ಸಾಕಾರಗೊಳಿಸುವುದಕ್ಕಾಗಿಯೇ ಮುಂಬಯಿಗೆ ಕನಸಿನ ನಗರಿ ಅಂತಲೂ ಕರೆಯುತ್ತಾರೆ.
ಆದರೆ ಇಲ್ಲಿಗೆ ಬಂದ ಎಲ್ಲರೂ ಆಗಸದೆತ್ತರಕ್ಕೆ ಬೆಳೆಯುತ್ತಾರೆ ಎಂದು ಹೇಳಲಾಗದು, ಈ ಜನನಿಬಿಡ ನಗರದಲ್ಲಿ ಅಡ್ರೆಸ್ ಇಲ್ಲದೇ ಕಳೆದು ಹೋದವರ ಸಂಖ್ಯೆಯೂ ಅತ್ಯಧಿಕ ಪ್ರಮಾಣದಲ್ಲಿದೆ. ಪ್ರತಿ ತಿಂಗಳು 884ಮಂದಿ ನಾಪತ್ತೆಯಾಗುತ್ತಾರೆ. ಇದರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು. ಪೊಲೀಸರು ಇದರಲ್ಲಿ ಶೇ.90ರಷ್ಟು ಮಂದಿಯನ್ನು ಪತ್ತೆ ಹಚ್ಚುತ್ತಾರೆ. ಆದರೆ ಉಳಿದವರ ಪತ್ತೆಯೇ ಇರುವುದಿಲ್ಲ.
ಕಳೆದ ಹತ್ತು ವರ್ಷದಲ್ಲಿ 1,10,547 ಮಂದಿ ಮುಂಬಯಿ ನಗರದಲ್ಲಿ ಕಾಣೆಯಾಗಿದ್ದಾರೆ. ಇದರಲ್ಲಿ 1,00,439 ಮಂದಿಯನ್ನು ಪತ್ತೆ ಹಚ್ಚಲಾಗಿದೆ. 10,108 ಮಂದಿಯ ಸುಳಿವೇ ಇಲ್ಲ ಎಂದು ಪೊಲೀಸ್ ವರದಿಗಳು ತಿಳಿಸಿವೆ.
ಪಾತಕ ಮತ್ತು ಅಪರಾಧ ಲೋಕಕ್ಕೂ ಕುಖ್ಯಾತಿ ಪಡೆದಿರುವ ಮುಂಬಯಿ ನಗರದಲ್ಲಿ ಮಾನವ ಕಳ್ಳ ಸಾಗಾಣೆ, ವೇಶ್ಯಾವಾಟಿಕೆಗಳು ಯಥೇಚ್ಛವಾಗಿ ನಡೆಯುತ್ತವೆ, ನಾಪತ್ತೆಯಾದವರು ಇದೇ ಜಾಲದಲ್ಲಿ ಸಿಲುಕಿರುವ ಸಾಧ್ಯತೆಯೂ ಹೆಚ್ಚಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.