ನವದೆಹಲಿ: ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರವನ್ನು ನೀಡಿದ್ದ ಸಂವಿಧಾನದ 370ನೇ ಮತ್ತು 35ಎನೇ ವಿಧಿ ಅನ್ನು ತೆಗೆದು ಹಾಕಿದ ಭಾರತದ ನಿರ್ಧಾರವು ಪಾಕಿಸ್ಥಾನಕ್ಕೆ ದೊಡ್ಡ ಹೊಡೆತವನ್ನು ನೀಡಿದೆ. ಈ ನಿರ್ಧಾರದ ಬಳಿಕ ಪಾಕಿಸ್ಥಾನ ವಿಶ್ವಸಂಸ್ಥೆಯ ಬಳಿ ಓಡಿತ್ತು. ಅದರ ಪರಮಾಪ್ತ ಚೀನಾವೂ ಅದಕ್ಕೆ ಬೆಂಬಲ ನೀಡಿತ್ತು. ಈ ಹಿನ್ನಲೆಯಲ್ಲಿ ಚೀನಾದ ಮನವಿಯ ಮೇರೆಗೆ ವಿಶ್ವಸಂಸ್ಥೆಯು ಕಾಶ್ಮೀರ ವಿಷಯದ ಬಗ್ಗೆ ಗುಪ್ತ ಸಭೆಯನ್ನು ಆಯೋಜನೆಗೊಳಿಸಿದೆ.
1947ರ ಸ್ವಾತಂತ್ರ್ಯದ ನಂತರ ಭಾರತ ಮತ್ತು ಪಾಕಿಸ್ಥಾನದ ನಡುವೆ ಬಿಕ್ಕಟ್ಟಿನ ವಿಷಯವಾಗಿರುವ ಕಾಶ್ಮೀರದ ಬಗ್ಗೆ ಚರ್ಚಿಸಲು ವಿಶ್ವಸಂಸ್ಥೆಯು ಸಭೆಯನ್ನು ನಡೆಸುತ್ತಿರುವುದು ಇದು ಬಹಳ ಅಪರೂಪದ ಘಟನೆಯಾಗಿದೆ. 1965ರಲ್ಲಿ ವಿಶ್ವಸಂಸ್ಥೆ ಕಾಶ್ಮೀರದ ಬಗ್ಗೆ ಕೊನೆಯ ಬಾರಿಗೆ ಸಭೆಯನ್ನು ನಡೆಸಿತ್ತು.
ಭಾರತೀಯ ಕಾಲಮಾನ ಇಂದು ಸಂಜೆ 7.30ಕ್ಕೆ ಪೋಲ್ಯಾಂಡಿನಲ್ಲಿ ಕಾಶ್ಮೀರದ ಬಗ್ಗೆ ಗುಪ್ತ ಸಭೆ ನಡೆಯಲಿದೆ. ಈ ಸಭೆಯನ್ನು ಸಂಪೂರ್ಣ ಭದ್ರತಾ ಸಭೆ ಎಂದು ಪರಿಗಣಿಸಲಾಗಿಲ್ಲ, ಆದರೆ ಮುಚ್ಚಿದ ಬಾಗಿಲಿನ ಸಮಾಲೋಚನೆ ಎಂದು ಪರಿಗಣಿಸಲಾಗಿದೆ.
ಕಾಶ್ಮೀರ ವಿಚಾರದ ಬಗ್ಗೆ ಭದ್ರತಾ ಮಂಡಳಿಯಲ್ಲಿ ತುರ್ತು ಸಭೆ ನಡೆಸುವಂತೆ ಪಾಕಿಸ್ಥಾನವು ಮಂಗಳವಾರವೇ ಕೋರಿಕೆ ಸಲ್ಲಿಸಿತ್ತು. ಈ ವಿಚಾರದಲ್ಲಿ ಪಾಕಿಸ್ಥಾನಕ್ಕೆ ಸಹಾಯಹಸ್ತ ಚಾಚಿದ ಮಿತ್ರ ರಾಷ್ಟ್ರ ಚೀನಾ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಗುಪ್ತ ಸಮಾಲೋಚನೆ (Closed Consultations) ನಡೆಸುವಂತೆ ಮನವಿ ಮಾಡಿತ್ತು. ಯುಎನ್ಎಸ್ಸಿಯಲ್ಲಿ ಖಾಯಂ ಸದಸ್ಯನಾಗಿರುವ ಚೀನಾದ ಮನವಿಗೆ ಒಪ್ಪಿರುವ ಮಂಡಳಿಯು ಇಂದು ಚರ್ಚೆ ನಡೆಸಲು ತೀರ್ಮಾನಿಸಿದೆ.
ಜಮ್ಮು-ಕಾಶ್ಮೀರವು ಭಾರತ ಮತ್ತು ಪಾಕಿಸ್ಥಾನ ನಡುವಣ ದ್ವಿಪಕ್ಷೀಯ ವಿಚಾರ, ಮೂರನೇ ಪಕ್ಷದ ಮಧ್ಯಪ್ರವೇಶದ ಇಲ್ಲಿ ಅಗತ್ಯವಿಲ್ಲ. 370ನೇ ವಿಧಿಯನ್ನು ರದ್ದು ಮಾಡಿದ್ದು ಭಾರತದ ಆಂತರಿಕ ವಿಚಾರವಾಗಿದೆ ಎಂದು ಭಾರತ ಬಲವಾಗಿ ಪ್ರತಿಪಾದಿಸಿದೆ.
Tomorrow (16 August) #UNSC members will hold consultations on #Jammu & #Kashmir. ASG Oscar Fernández-Taranco @UNDPPA & UN Military Adviser Carlos Humberto Loitey @UNPeacekeeping
expected to brief. Read more: https://t.co/HAymSzLNd3— Security Council Report (@SCRtweets) August 16, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.