ಸೂರತ್: ಸ್ವಾತಂತ್ರ್ಯ ದಿನಾಚರಣೆ ಮತ್ತು ರಕ್ಷಾ ಬಂಧನ ಹಬ್ಬದ ಹಿನ್ನಲೆಯಲ್ಲಿ ಗುಜರಾತಿನ ಸೂರತ್ ಶಾಲೆಯೊಂದರ 670 ವಿದ್ಯಾರ್ಥಿಗಳು ಮಾನವ ಸರಪಳಿಯನ್ನು ರಚಿಸಿ ‘ತ್ರಿವರ್ಣ ಧ್ವಜ’ ಮತ್ತು ‘ರಾಖಿ’ಯ ರಚನೆಯನ್ನು ರೂಪಿಸಿದ್ದಾರೆ. ತಿರಂಗಾ ಹಾರುವ ಧ್ವಜಸ್ತಂಭ ಮತ್ತು ಧ್ವಜಸ್ತಂಭದ ನಡುವೆ ರಾಖಿ ಬರುವಂತೆ ಮಾನವ ಸರಪಳಿ ರಚನೆಯನ್ನು ಮಾಡಲಾಗಿದೆ. ಇದು ತುಂಬಾ ಅದ್ಭುತವಾಗಿ ಮೂಡಿ ಬಂದಿದೆ.
ಈ ವರ್ಷ ಸ್ವಾತಂತ್ರ್ಯ ದಿನಾಚರಣೆ ಮತ್ತು ಭಾತೃತ್ವದ ಸಂಕೇತವಾದ ರಕ್ಷಾಬಂಧನವನ್ನು ಒಂದೇ ದಿನ ಆಚರಣೆ ಮಾಡಲಾಗುತ್ತಿದೆ. ಹೀಗಾಗಿ ಈ ಎರಡು ವಿಶೇಷ ಸಂದರ್ಭಗಳನ್ನು ಆಚರಿಸಲು ಸೂರತ್ನ ಶ್ರೀ ಸ್ವಾಮಿನಾರಾಯಣ ಗುರುಕುಲ್ ವಿದ್ಯಾರ್ಥಿಗಳು ವಿಶಿಷ್ಟ ಮಾರ್ಗವನ್ನು ಕಂಡುಕೊಂಡು ಮಾನವ ಸರಪಳಿಯನ್ನು ರಚನೆ ಮಾಡಿದ್ದಾರೆ.
“ಇಲ್ಲಿನ ವಿದ್ಯಾರ್ಥಿಗಳು ರಾಖಿ ಮತ್ತು ರಾಷ್ಟ್ರೀಯ ಧ್ವಜದ ಮಾನವ ಸರಪಳಿಯನ್ನು ರಚಿಸುವ ಮೂಲಕ ರಕ್ಷಾ ಬಂಧನ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರೀತಿ ಮತ್ತು ದೇಶಭಕ್ತಿಯ ಸಂದೇಶವನ್ನು ಪಸರಿಸಲು ಪ್ರಯತ್ನಿಸಿದರು. ನಮ್ಮ ಸ್ವಾತಂತ್ರ್ಯ ದಿನವನ್ನು ದೇಶಭಕ್ತಿಯ ಭಾವದೊಂದಿಗೆ ಮತ್ತು ನಮ್ಮ ಹಬ್ಬವಾದ ರಕ್ಷಾಬಂಧನದ ಉತ್ಸಾಹದೊಂದಿಗೆ ಆಚರಿಸಬೇಕು ಎಂಬ ಸಂದೇಶವನ್ನು ಎಲ್ಲರಿಗೂ ತಲುಪಿಸುವುದು ಈ ಕಾರ್ಯದ ಹಿಂದಿನ ಮುಖ್ಯ ಉದ್ದೇಶವಾಗಿದೆ “ಎಂದು ಗುರುಕುಲ್ನ ಅಧ್ಯಾಪಕ ಸುರೇಶ್ ಸ್ವಾಮಿ ಹೇಳಿದ್ದಾರೆ.
“ಒಬ್ಬ ಸಹೋದರಿ ರಾಖಿಯನ್ನು ತನ್ನ ಸಹೋದರನ ಕೈಗೆ ಕಟ್ಟಿ ಅವಳ ಸುರಕ್ಷತೆ ಮತ್ತು ಆರೋಗ್ಯಕರ ಜೀವನಕ್ಕಾಗಿ ಹಾರೈಕೆ ಕೇಳುವಂತೆಯೇ ನಾವೆಲ್ಲರೂ ನಮ್ಮ ರಾಷ್ಟ್ರವನ್ನು ದೇಶಭಕ್ತಿಯ ಭಾವದೊಂದಿಗೆ ರಕ್ಷಿಸಬೇಕು ಎಂಬ ಸಂದೇಶವನ್ನು ಸಾರಲು ನಮ್ಮ ವಿದ್ಯಾರ್ಥಿಗಳು ಪ್ರಯತ್ನಿಸಿದ್ದಾರೆ. ಗುಜರಾತಿ ಮಾಧ್ಯಮ ಮತ್ತು ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳು ಒಟ್ಟಾಗಿ ಈ ಕಾರ್ಯವನ್ನು ಕೈಗೊಂಡರು” ಎಂದು ಗುರುಕುಲ್ ಪ್ರಾಂಶುಪಾಲರಾದ ಜಗದೀಶ್ ಕುಕಾಡಿಯಾ ಹೇಳಿದ್ದಾರೆ.
ರಾಷ್ಟ್ರೀಯ ಧ್ವಜ ಮತ್ತು ರಾಖಿಯ ರಚನೆಯನ್ನು ಮೇಲಿನಿಂದ ನೋಡಿದಾಗ, ಅದು ಮಾನವ ರಚನೆ ಎಂದು ಯಾರೂ ಊಹೆ ಮಾಡಲು ಸಾಧ್ಯವಾಗದ ರೀತಿಯಲ್ಲಿ ರಚನೆಯನ್ನು ಮಾಡಲಾಗಿದೆ. ಈ ರಚನೆಗಾಗಿ ವಿದ್ಯಾರ್ಥಿಗಳು ಒಂದು ವಾರಗಳ ಕಾಲ ಅಭ್ಯಾಸ ನಡೆಸಿದ್ದಾರೆ ಮತ್ತು ಶಿಸ್ತುಬದ್ಧ ರೀತಿಯಲ್ಲಿ ತಮ್ಮನ್ನು ಮಾನವ ಧ್ವಜ ಮತ್ತು ರಾಖಿಯಾಗಿ ಪರಿವರ್ತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.