ನವದೆಹಲಿ: ಸಂಸತ್ತಿನ ಕಟ್ಟಡಕ್ಕೆ ಅಳವಡಿಸಲಾದ ಶಾಶ್ವತ ವರ್ಣರಂಜಿತ ದೀಪಗಳನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಂಜೆ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭಾ ಉಪಾಧ್ಯಕ್ಷರು, ಹಲವಾರು ಸಂಪುಟ ಸಚಿವರುಗಳು ಮತ್ತು ಸಂಸದರು ಉಪಸ್ಥಿತರಿದ್ದರು.
875 ಎಲ್ಇಡಿ ದೀಪಗಳಿಂದ ಸಂಸತ್ತಿನ ಕಟ್ಟಡಗಳನ್ನು ವರ್ಣರಂಜಿತಗೊಳಿಸಲಾಗಿದ್ದು, ರಾಷ್ಟ್ರದ ಅತಿದೊಡ್ಡ ಪ್ರಜಾಪ್ರಭುತ್ವದ ದೇವಾಲಯವಾದ ಸಂಸತ್ತಿಗೆ ಇದು ಹೊಸ ಆಕರ್ಷಣೆ ಮತ್ತು ಸೌಂದರ್ಯವನ್ನು ನೀಡಿದೆ. ಈ ದೀಪಗಳು ವಿದ್ಯುತ್ ಶಕ್ತಿಯನ್ನು ಉಳಿಸುತ್ತವೆ ಮತ್ತು ಪರಿಸರ ಸ್ನೇಹಿಯಾಗಿವೆ. ಇವುಗಳು ಆಗಾಗ ಬಣ್ಣಗಳನ್ನು ಬದಲಾಯಿಸುತ್ತಿರುವುದರಿಂದ ಸಂಸತ್ತು ಹೆಚ್ಚು ಭವ್ಯವಾಗಿ ಕಾಣುತ್ತದೆ.
ಈ ದೀಪಗಳನ್ನು ಸಂಸತ್ತಿನ ಗ್ರಂಥಾಲಯ ಮತ್ತು ಸಂಸತ್ತಿನ ಅನೆಕ್ಸರ್ ಕಟ್ಟಡದಲ್ಲಿಯೂ ಅಳವಡಿಸಲಾಗಿದೆ. ಈ ಹಿಂದೆ ಸಂಸತ್ತನ್ನು ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮತ್ತು ಮಹಾತ್ಮ ಗಾಂಧಿ ಜಯಂತಿ ಮುಂತಾದ ವಿಶೇಷ ಸಂದರ್ಭಗಳಲ್ಲಿ ಮಾತ್ರ ಅಲಂಕರಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಅಲಂಕೃತ ದೀಪಗಳು ಶಾಶ್ವತವಾಗಿ ಸಂಸತ್ತನ್ನು ವರ್ಣರಂಜಿತವಾಗಿಯೂ, ಸುಂದರವಾಗಿಯೂ ಇಡಲಿವೆ.
ಸೌತ್ ಬ್ಲಾಕ್ ಮತ್ತು ನಾರ್ತ್ ಬ್ಲಾಕ್ ಅನ್ನು ಈಗಾಗಲೇ ಈ ದೀಪಗಳಿಂದ ಅಲಂಕೃತಗೊಳಿಸಲಾಗಿದೆ.
#WATCH Dynamic Facade Lighting of the Parliament House Estate. #IndependenceDay2019 pic.twitter.com/XxN4yLHfBd
— ANI (@ANI) August 13, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.