ಅಗರ್ತಾಲ: ತ್ರಿಪುರ ಕೇಂದ್ರಿತ ಭಯೋತ್ಪಾದಕ ಸಂಘಟನೆಯಾದ ಸಬೀರ್ ಕುಮಾರ್ ಡೆಬ್ಬರ್ಮಾ ನೇತೃತ್ವದ ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ವಿಪ್ರ (ಎನ್ಎಲ್ಎಫ್ಟಿ-ಎಸ್ಡಿ), ಹಿಂಸಾಚಾರವನ್ನು ತ್ಯಜಿಸಲು ಮತ್ತು ಮುಖ್ಯವಾಹಿನಿಗೆ ಸೇರಲು ಭಾರತ ಸರ್ಕಾರ ಮತ್ತು ತ್ರಿಪುರ ಸರ್ಕಾರದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ.
ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ (ಈಶಾನ್ಯ) ಸತ್ಯೇಂದ್ರ ಗರ್ಗ್, ತ್ರಿಪುರ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಕುಮಾರ್ ಅಲೋಕ್ ಮತ್ತು ಎನ್ಎಲ್ಎಫ್ಟಿ (ಎಸ್ಡಿ) ಯ ಸಬೀರ್ ಕುಮಾರ್ ಡೆಬ್ಬರ್ಮಾ ಮತ್ತು ಕಾಜಲ್ ಡೆಬ್ಬರ್ಮಾ ಅವರುಗಳು ಒಪ್ಪಂದಕ್ಕೆ ಸಹಿ ಹಾಕಿದರು.
ಒಪ್ಪಂದದ ಪ್ರಕಾರ, ಎನ್ಎಲ್ಎಫ್ಟಿ (ಎಸ್ಡಿ) ಭಾರತದ ಸಂವಿಧಾನವನ್ನು ಅನುಸರಿಸಲು ಮತ್ತು ಮುಖ್ಯವಾಹಿನಿಗೆ ಸೇರುವ ಸಲುವಾಗಿ ಹಿಂಸಾಚಾರದ ಹಾದಿಯನ್ನು ತ್ಯಜಿಸಲು ಒಪ್ಪಿಕೊಂಡಿದೆ.
ಎನ್ಎಲ್ಎಫ್ಟಿಯೊಂದಿಗೆ ಶಾಂತಿ ಮಾತುಕತೆಗಳನ್ನು 2015 ರಲ್ಲಿ ಪ್ರಾರಂಭಿಸಲಾಯಿತು ಮತ್ತು 2016 ರಿಂದ ಎನ್ಎಲ್ಎಫ್ಟಿಯಿಂದ ಯಾವುದೇ ಹಿಂಸಾಚಾರದಲ್ಲಿ ಪಾಲ್ಗೊಂಡಿಲ್ಲ.
ಎನ್ಎಲ್ಎಫ್ಟಿ 1997 ರಿಂದ ಕಾನೂನುಬಾಹಿರ ಚಟುವಟಿಕೆ (ತಡೆಗಟ್ಟುವಿಕೆ) ಕಾಯ್ದೆಯಡಿ ನಿಷೇಧಿಸಲ್ಪಟ್ಟ ಸಂಘಟನೆಯಾಗಿದೆ ಮತ್ತು ಇದು ಹಲವು ಹಿಂಸಾಚಾರದಲ್ಲಿ ಭಾಗಿಯಾಗಿದೆ. ಅವರ ಶಿಬಿರಗಳು ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಕಾರ್ಯನಿರ್ವಹಿಸುತ್ತಿತ್ತು. ಪ್ರಸ್ತುತ ಇದು ಶಾಂತಿ ಮಾರ್ಗದಲ್ಲಿ ನಡೆಯಲು ಮುಂದಾಗಿದೆ.
2005-2015ರ ಅವಧಿಯಲ್ಲಿ 28 ಭದ್ರತಾ ಪಡೆಗಳು ಮತ್ತು 62 ನಾಗರಿಕರ ಸಾವಿಗೆ ಕಾರಣವಾದ 317 ಹಿಂಸಾತ್ಮಕ ಚಟುವಟಿಕೆಗಳು ನಡೆಯಲು ಈ ಭಯೋತ್ಪಾದಕ ಗುಂಪು ಕಾರಣವಾಗಿದೆ ಎಂದು ಸರ್ಕಾರದ ಪತ್ರಿಕಾ ಪ್ರಕಟಣೆ ತಿಳಿಸಿದೆ. 88 ಕಾರ್ಯಕರ್ತರನ್ನು ಹೊಂದಿರುವ ಈ ಗುಂಪು ಪ್ರಸ್ತುತ ಶಸ್ತ್ರತ್ಯಾಗ ಮಾಡಲು ಒಪ್ಪಿದೆ.
ಶರಣಾದ ಕಾರ್ಯಕರ್ತರಿಗೆ ಗೃಹ ಸಚಿವಾಲಯದ 2018 ರ ಶರಣಾಗತಿ-ಪುನರ್ವಸತಿ ಯೋಜನೆ ಪ್ರಕಾರ ಶರಣಾಗತಿ ಸೌಲಭ್ಯಗಳನ್ನು ನೀಡಲಾಗುತ್ತದೆ. ಅಲ್ಲದೇ, ಶರಣಾದ ಕಾರ್ಯಕರ್ತರಿಗೆ ವಸತಿ, ನೇಮಕಾತಿ, ಶಿಕ್ಷಣ ಇತ್ಯಾದಿಗಳಲ್ಲಿ ರಾಜ್ಯ ಸರ್ಕಾರ ಸಹಾಯ ಮಾಡಲಿದೆ. ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ ಯೋಜನೆಗಳನ್ನು ಕೈಗೊಳ್ಳಲು ಭಾರತ ಸರ್ಕಾರದ ಸಲಹೆಗಳನ್ನೂ ರಾಜ್ಯ ಸರ್ಕಾರ ತೆಗೆದುಕೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.