ನವದೆಹಲಿ: ಕೈಗಾರಿಕೋದ್ಯಮಿ ಕುಮಾರಮಂಗಳಂ ಬಿರ್ಲಾ ಅವರು ಮಧ್ಯಪ್ರದೇಶದಲ್ಲಿ 100 ಹೈಟೆಕ್ ಗೋಶಾಲೆಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಅಲ್ಲಿನ ಮುಖ್ಯಮಂತ್ರಿ ಕಮಲ್ನಾಥ್ ಅವರು ಗುರುವಾರ ಘೋಷಣೆ ಮಾಡಿದ್ದಾರೆ.
ತಮ್ಮ ಸಂಸ್ಥೆಯ ಕಾರ್ಪೋರೇಟ್ ಸೋಶಲ್ ರೆಸ್ಪಾನ್ಸಿಬಿಲಿಟಿ (ಸಿಎಸ್ಆರ್) ಫಂಡ್ ಮೂಲಕ ಕುಮಾರ ಮಂಗಳನ್ ಬಿರ್ಲಾ ಅವರು ಮುಂದಿನ 18 ತಿಂಗಳುಗಳೊಳಗೆ 100 ಹೈಟೆಕ್ ಗೋಶಾಲೆಗಳನ್ನು ಮಧ್ಯಪ್ರದೇಶದ ವಿವಿಧ ಭಾಗಗಳಲ್ಲಿ ನಿರ್ಮಾಣ ಮಾಡಲಿದ್ದಾರೆ. ಮುಂಬಯಿಯಲ್ಲಿ ಬಿರ್ಲಾ ಅವರೊಂದಿಗೆ ಸಭೆ ನಡೆಸಿದ ಬಳಿಕ ಕಮಲ್ನಾಥ್ ಈ ಬಗ್ಗೆ ಘೋಷಣೆ ಮಾಡಿದ್ದಾರೆ.
ಈ ವರ್ಷದ ಜನವರಿಯಲ್ಲಿ ಮಧ್ಯಪ್ರದೇಶ ಸರ್ಕಾರವು ತನ್ನ ರಾಜ್ಯದಲ್ಲಿ 1 ಸಾವಿರ ಗೋಶಾಲೆಗಳನ್ನು ನಾಲ್ಕು ತಿಂಗಳೊಳಗೆ ನಿರ್ಮಾಣ ಮಾಡಿ, ಒಂದು ಲಕ್ಷ ಹಸುಗಳಿಗೆ ಆಶ್ರಯ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ನಿಗದಿತ ವೇಳೆಯಲ್ಲಿ ಅದು ಘೋಷಿಸಿದ್ದ ಕಾರ್ಯ ಅನುಷ್ಠಾನಕ್ಕೆ ಬಂದಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸರ್ಕಾರ, ಗೋಶಾಲೆಗಳಿಗೆ ಜಾಗ ಗೊತ್ತುಪಡಿಸುವ ಕಾರ್ಯ ಅಂತಿಮಗೊಂಡಿದೆ ಎಂದಿದೆ.
ಎರಡು ತಿಂಗಳ ಹಿಂದೆ, ಯೋಜನೆಯನ್ನು ಪರಿಶೀಲಿಸುವ ಸಂದರ್ಭದಲ್ಲಿ ಹೇಳಿಕೆ ನೀಡಿದ್ದ ಕಮಲ್ ನಾಥ್ ಅವರು, 300 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚ ಈ ಯೋಜನೆಗೆ ತಗುಲಲಿದೆ. ಅನಿವಾಸಿ ಭಾರತೀಯರಿಗೆ ಈ ಯೋಜನೆಯಲ್ಲಿ ಕೈಜೋಡಿಸುವಂತೆ ಮನವಿ ಮಾಡಲಾಗುವುದು ಎಂದಿದ್ದರು.
ಮುಂದಿನ ಐದು ವರ್ಷಗಳಲ್ಲಿ 300 ಸ್ಮಾರ್ಟ್ ಗೋಶಾಲಾಗಳನ್ನು ನಿರ್ಮಿಸಲು ಸರ್ಕಾರವು ಈಗಾಗಲೇ ಮತ್ತೊಂದು ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಪಶುಸಂಗೋಪನಾ ವಿಭಾಗದ ಮೂಲಗಳು ತಿಳಿಸಿವೆ. ಕಂಪನಿಯು ನಾಲ್ಕು ಗೋಶಾಲೆಗಳನ್ನು ನಿರ್ಮಿಸುವ ಮೂಲಕ ತನ್ನ ಕಾರ್ಯವನ್ನು ಪ್ರಾರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.