ನವದೆಹಲಿ: ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ ಇನ್ನು ಮುಂದೆ ಲೋಕಸಭೆ ಸಂಪೂರ್ಣ ಪೇಪರ್ ಲೆಸ್ ಆಗಲಿದೆ.
ಮುಂದಿನ ಅಧಿವೇಶನದಿಂದ ಕಾಗದ ರಹಿತ ಮಾದರಿಯನ್ನು ಅನುಸರಿಸುವುದಾಗಿ ಸ್ಪೀಕರ್ ಓಂ ಬಿರ್ಲಾ ಅವರು ಹೇಳಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಉಳಿಯಲಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ಹಾರ್ಡ್ಕಾಪಿ ಮತ್ತು ಇ-ಕಾಪಿ ನಡುವಿನ ಆದ್ಯತೆಯ ಬಗ್ಗೆ ಸದನದ ಸದಸ್ಯರನ್ನು ಕೇಳಲಾಗುತ್ತದೆ, ಅದರ ಪ್ರಕಾರ, ಕಾಗದದ ಬಳಕೆಯನ್ನು ಕಡಿತಗೊಳಿಸಲಾಗುತ್ತದೆ. ಸದನದ ಕಲಾಪಗಳು ಮತ್ತು ಇತರ ದಾಖಲೆಗಳನ್ನು ಆನ್ಲೈನ್ನಲ್ಲಿ ಒದಗಿಸಲಾಗುವುದು ಎಂದಿದ್ದಾರೆ.
ಸಂಸದೀಯ ದಾಖಲೆಗಳ ಇ-ಕಾಪಿಯನ್ನು ಬಳಸಲು ಸ್ಪೀಕರ್ ಸದಸ್ಯರನ್ನು ಪ್ರೋತ್ಸಾಹಿಸಲಿದ್ದಾರೆ.
“ಮುಂದಿನ ಸಂಸತ್ತು ಕಾಗದರಹಿತವಾಗಿರಬೇಕು ಎಂದು ನಾವು ಬಯಸುತ್ತೇವೆ. ಅದಕ್ಕಾಗಿ ನಾವು ಪ್ರಯತ್ನಗಳನ್ನು ನಡೆಸುತ್ತಿದ್ದೇವೆ, ಮುಂದಿನ ಎರಡೂವರೆ ತಿಂಗಳಲ್ಲಿ ನೀವು ಇದಕ್ಕಾಗಿ ತಯಾರಿ ನಡೆಸಬೇಕು ”ಎಂದು ಸ್ಪೀಕರ್ ಅವರು ಸಂಸದರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಸಂಸದರು ವೈಯಕ್ತಿಕ ಸಹಾಯಕರನ್ನು ಇರಿಸಿಕೊಳ್ಳಬಹುದು ಮತ್ತು ಅಗತ್ಯ ಮಾಹಿತಿಯನ್ನು ಆನ್ಲೈನ್ನಲ್ಲಿ ನೋಡಬಹುದು ಎಂದು ಬಿರ್ಲಾ ಸಲಹೆ ನೀಡಿದ್ದಾರೆ.
ಸಂಸತ್ತಿನಲ್ಲಿ ಖರ್ಚು ಮಾಡಿದ ಪ್ರತಿ ಪೈಸೆಯನ್ನೂ ಸರಿಯಾಗಿ ಬಳಸುವುದು ನಮ್ಮ ಪ್ರಯತ್ನವಾಗಿರಬೇಕು ಎಂದು ಅವರು ಸಂಸದರಿಗೆ ಕಿವಿ ಮಾತು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.