ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಬುಧವಾರ ಮುಸ್ಲಿಂ ಮಹಿಳಾ (ವಿವಾಹ ಹಕ್ಕುಗಳ ರಕ್ಷಣಾ ಕಾಯ್ದೆ) ಮಸೂದೆ 2019ಗೆ ಅಂಕಿತವನ್ನು ಹಾಕಿದ್ದಾರೆ. ತಲಾಖ್ ಎಂದು ಮೂರು ಬಾರಿ ಉಚ್ಛರಿಸುವ ಮೂಲಕ ಪತ್ನಿಯರಿಗೆ ವಿಚ್ಛೇಧನವನ್ನು ನೀಡುವುದನ್ನು ಅಪರಾಧೀಕರಣಗೊಳಿಸುವ ಮಸೂದೆ ಇದಾಗಿದೆ. ಇಂತಹ ತಪ್ಪು ಎಸಗುವವರಿಗೆ ಮೂರು ವರ್ಷಗಳ ಸಜೆಯನ್ನು ವಿಧಿಸಲಾಗುತ್ತದೆ.
ರಾಷ್ಟ್ರಪತಿಗಳ ಅಂಕಿತದ ಬಳಿಕ ಮಸೂದೆಯು ಕಾಯ್ದೆಯಾಗಿ ಪರಿವರ್ತನೆಗೊಂಡಿದೆ.
ಜುಲೈ 30 ರಂದು ರಾಜ್ಯಸಭೆಯಲ್ಲಿ ಮಸೂದೆಯನ್ನು ಅಂಗೀಕಾರಗೊಳಿಸಲಾಗಿದೆ. ತಕ್ಷಣವೇ ಈ ಬಗ್ಗೆ ಟ್ವಿಟ್ ಮಾಡಿದ್ದ ಕೋವಿಂದ್, “ರಾಜ್ಯಸಭೆಯಲ್ಲಿ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ಸಂರಕ್ಷಣೆ) ಮಸೂದೆ ಅಂಗೀಕಾರದಿಂದಾಗಿ ತ್ರಿವಳಿ ತಲಾಖ್ನ್ನು ನಿಷೇಧಿಸುವ ಸಂಸತ್ತಿನ ಅನುಮೋದನೆ ಪೂರ್ಣಗೊಂಡಂತಾಗಿದೆ. ಲಿಂಗ ಸಮಾನತೆ ಮತ್ತು ನ್ಯಾಯದ ಅನ್ವೇಷಣೆಯಲ್ಲಿ ಇಂದೊಂದು ಮಹತ್ವದ ಮೈಲಿಗಲ್ಲು. ಇಡೀ ದೇಶಕ್ಕೆ ಇದು ಸಂತೃಪ್ತಿಯ ಕ್ಷಣ ” ಎಂದಿದ್ದರು.
Passage in the Rajya Sabha of Muslim Women (Protection of Rights on Marriage) Bill completes Parliament’s approval of ban on the inequitable practice of triple talaq. A milestone in the quest for gender justice; a moment of satisfaction for the entire country #PresidentKovind
— President of India (@rashtrapatibhvn) July 30, 2019
ಜುಲೈ 30ರಂದು ಮೋದಿ ಸರ್ಕಾರವು ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ಅಂಗೀಕರಿಸಿ ಮಹತ್ವದ ದಿಗ್ವಿಜಯವನ್ನು ಸಾಧಿಸಿಕೊಂಡಿತ್ತು. ಈ ಕಾಯ್ದೆಯು ಬೇಕಾಬಿಟ್ಟಿಯಾಗಿ ಪತ್ನಿಗೆ ವಿಚ್ಛೇಧನವನ್ನು ನೀಡುವ ಪುರುಷರಿಗೆ ದೊಡ್ಡ ನಿಯಂತ್ರಣವಾಗಿ ಪರಿಣಮಿಸಲಿದೆ. ಲಿಂಗ ಸಮಾನತೆಯನ್ನು ಸ್ಥಾಪಿಸುವಲ್ಲಿಯೂ ಮಹತ್ವದ ಪಾತ್ರವನ್ನು ನಿಭಾಯಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.