ನವದೆಹಲಿ: ಈ ವರ್ಷ ಮಯನ್ಮಾರಿಗೆ ಭಾರತವು ಜಲಾಂತರ್ಗಾಮಿ ನೌಕೆಯನ್ನು ಹಸ್ತಾಂತರ ಮಾಡುತ್ತಿದೆ. ಇದು ಆ ದೇಶದ ಮೊತ್ತ ಮೊದಲ ಜಲಾಂತರ್ಗಾಮಿಯಾಗಲಿದೆ. ದೇಶೀಯವಾಗಿ ರಿಫಿಟ್ ಮಾಡಿದ ಬಳಿಕ ಭಾರತವು ಆ ದೇಶಕ್ಕೆ ಕಿಲೋ ಕ್ಲಾಸ್ ಬೋಟ್ ಅನ್ನು ಹಸ್ತಾಂತರಿಸಲಿದೆ ಎಂದು ಮೂಲಗಳು ತಿಳಿಸಿವೆ.
ವರದಿಯ ಪ್ರಕಾರ, ಮುಂಬರುವ ವರ್ಷಗಳಲ್ಲಿ ತನ್ನದೇ ಆದ ಜಲಾಂತರ್ಗಾಮಿ ನೌಕೆಗಳನ್ನು ಹೊಂದುವತ್ತ ಮುಂದೆ ನೋಡುತ್ತಿರುವ ಮಯನ್ಮಾರ್ ನೌಕಾಪಡೆಯು, ಭಾರತೀಯ ನೌಕಾಸೇನೆಯ ಐಎನ್ಎಸ್ ಸಿಂಧುವೀರ್ ಅನ್ನು ತರಬೇತಿ ಉದ್ದೇಶಗಳಿಗಾಗಿ ಬಳಸಿಕೊಳ್ಳಲಿದೆ.
ಹಿಂದೂಸ್ತಾನ್ ಶಿಪ್ಯಾರ್ಡ್ ಲಿಮಿಟೆಡ್ (ಎಚ್ಎಸ್ಎಲ್), 1980 ರ ದಶಕದಲ್ಲಿ ರಷ್ಯಾದಿಂದ ವಿಶಾಖಪಟ್ಟಣಕ್ಕೆ ತಂದ ಐಎನ್ಎಸ್ ಸಿಂಧುವೀರ್ ಎಂಬ ಕಿಲೋ ಕ್ಲಾಸ್ ಜಲಾಂತರ್ಗಾಮಿ ನೌಕೆಯನ್ನು ಆಧುನೀಕರಿಸುತ್ತಿದೆ. ಆಧುನೀಕರಣ ಕಾರ್ಯವು ಈ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮಯನ್ಮಾರ್ ನೌಕಾಪಡೆಗೆ ತರಬೇತಿ ನೀಡುವ ಸಲುವಾಗಿ ಜಲಾಂತರ್ಗಾಮಿ ನೌಕೆಯನ್ನು ದೇಶೀಯವಾಗಿ ರಿಫಿಟ್ ಮಾಡಲಾಗುತ್ತಿದೆ.
ವರದಿಯ ಪ್ರಕಾರ, ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಲು ಮಯನ್ಮಾರಿಗೆ ಭಾರತವು ನೀಡುತ್ತಿರುವ ನೆರವಿನ ವಿಸ್ತರಣೆಯ ಭಾಗವಾಗಿ ಈ ಜಲಾಂತರ್ಗಾಮಿಯನ್ನು ಹಸ್ತಾಂತರ ಮಾಡಲಾಗುತ್ತಿದೆ.
ಸಾಮರ್ಥ್ಯ ವೃದ್ಧಿಗಾಗಿ ಭಾರತವು ಈ ತಿಂಗಳ ಆರಂಭದಲ್ಲಿ ಮಯನ್ಮಾರಿಗೆ 38 ಮಿಲಿಯನ್ ಡಾಲರ್ ರಫ್ತು ಒಪ್ಪಂದದ ಭಾಗವಾಗಿ ‘ಶಯೆನಾ’ ಹೆಸರಿನ ಸುಧಾರಿತ ಲೈಟ್ ಟಾರ್ಪಿಡೊಗಳನ್ನು ಪೂರೈಸಿದೆ. ಸರ್ಕಾರಿ ಸ್ವಾಮ್ಯದ ಕಂಪನಿಯಾದ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್) ಟಾರ್ಪಿಡೊಗಳನ್ನು ತಯಾರಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.