ಬೆಂಗಳೂರು: ಶೀಘ್ರದಲ್ಲೇ ಬೆಂಗಳೂರು ನಗರದ ಹಲವೆಡೆ ಉಚಿತ ಹೈಸ್ಪೀಡ್ ವೈಫೈ ವಲಯಗಳು ಲಭ್ಯವಾಗಲಿದೆ. ಟೆಕ್ ದಿಗ್ಗಜ ಗೂಗಲ್ನ ಜಿಸ್ಟೇಶನ್ ಮತ್ತು ಸಿಸ್ಕೋ ಈ ಕಾರ್ಯಕ್ಕಾಗಿ ಕೈಜೋಡಿಸಿವೆ. ಒಟ್ಟು 500 ಸ್ಥಳಗಳಲ್ಲಿ ಉಚಿತ ವೈಫೈ ಝೋನ್ ಸ್ಥಾಪನೆ ಮಾಡುವ ಯೋಜನೆ ರೂಪಿಸಲಾಗಿದೆ.
ಬೆಂಗಳೂರಿನ ಸುಮಾರು 500 ಸ್ಥಳಗಳಲ್ಲಿ ಉಚಿತ ಹೈಸ್ಪೀಡ್ ವೈಫೈ ಸೇವೆಗಳನ್ನು ನೀಡಲು ಯೋಜನೆಯನ್ನು ರೂಪಿಸಲಾಗುತ್ತಿದೆ. ಈಗಾಗಲೇ ಜಯನಗರ ಬಸ್ ನಿಲ್ದಾಣ, ಬಿಟಿಎಂ ಲೇಔಟ್ನ ಉಡುಪಿ ಗಾರ್ಡನ್ ಸೇರಿದಂತೆ ಸುಮಾರು 25 ಕಡೆಗಳಲ್ಲಿ ಪ್ರಾಯೋಗಿಕವಾಗಿ ಉಚಿತ ಹೈಸ್ಪೀಡ್ ವೈಫೈ ವಲಯಗಳನ್ನು ಆರಂಭಿಸಲಾಗಿದೆ.
2019ರ ಸೆಪ್ಟಂಬರ್ ತಿಂಗಳ ವೇಳೆಗೆ ಬಸ್ ನಿಲ್ದಾಣ, ಆಸ್ಪತ್ರೆ, ಬಸ್, ಟ್ರಾಫಿಕ್ ಏರಿಯಾ ಸೇರಿದಂತೆ 200 ಸ್ಥಳಗಳಲ್ಲಿ ವೈಫೈ ನಿಡುವ ಗುರಿಯನ್ನು ಹೊಂದಲಾಗಿದೆ. ಎರಡನೇ ಹಂತದಲ್ಲಿ ಮತ್ತೆ 300 ಸ್ಥಳಗಳಿಗೆ ವೈಫೈ ನೀಡಲಾಗುತ್ತದೆ. ಇದರಿಂದಾಗಿ ಲಕ್ಷಾಂತರ ಜನರಿಗೆ ಸಹಾಯಕವಾಗಲಿದೆ. ಮುಂಬರುವ ದಿನಗಳಲ್ಲಿ ಇತರ ನಗರಗಳಿಗೂ ಈ ಯೋಜನೆಯನ್ನು ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ಗೂಗಲ್ ರೈಲ್ಟೆಲ್ ಜೊತೆ ಕೈಜೋಡಿಸಿ ಈಗಾಗಲೇ ರೈಲು ನಿಲ್ದಾಣಗಳಲ್ಲಿ ಉಚಿತವ ವೈಫೈ ನೀಡುವ ಕಾರ್ಯವನ್ನು ಮಾಡುತ್ತಿದೆ. ಹೀಗಾಗಿ ಈ ಯೋಜನೆ ರೈಲು ನಿಲ್ದಾಣಗಳನ್ನು ಒಳಗೊಳ್ಳುತ್ತಿಲ್ಲ.
ಯೋಜನೆಯ ಬಗ್ಗೆ ಮಾತನಾಡಿರುವ ಸಿಸ್ಕೋ ಇಂಡಿಯಾ & ಸಾರ್ಕ್ ಅಧ್ಯಕ್ಷ ಸಮೀರ್ ಗಾರ್ಡೆ “ಹೆಚ್ಚಿನ ವೇಗದ ಇಂಟರ್ನೆಟ್ ಲಭ್ಯತೆಯನ್ನು ನೀಡುವುದರಿಂದ ಬಳಕೆದಾರರ ಕ್ರಿಯಾಶೀಲತೆ ಹೆಚ್ಚಾಗುತ್ತದೆ ಮತ್ತು ಲಕ್ಷಾಂತರ ಬಳಕೆದಾರರಿಗೆ ಇದರಿಂದ ಅನುಕೂಲವಾಗುತ್ತದೆ. ಡಿಜಿಟಲೀಕರಣ ಮತ್ತು ಡಿಜಿಟಲ್ ನಾಗರಿಕ ಸೇವೆಗಳ ಯಶಸ್ಸು ಸಹ ಹೈ-ಸ್ಪೀಡ್ ಇಂಟರ್ನೆಟ್ನೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಸಾರ್ವಜನಿಕ ವೈ-ಫೈ ಹಾಟ್ಸ್ಪಾಟ್ಗಳ ಬೇಡಿಕೆ ಮುಂದಿನ ಮೂರು ವರ್ಷಗಳಲ್ಲಿ ಶೇ.100 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ, ಇದು ಸಿಸ್ಕೋ ಮತ್ತು ನಮ್ಮ ಪಾಲುದಾರರಿಗೆ ಹೊಸ ಮಾರುಕಟ್ಟೆಗಳನ್ನು ಸೃಷ್ಟಿಸುತ್ತದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.