ನವದೆಹಲಿ: ಭಾರತೀಯ ವಾಯುಸೇನೆಯು ಆರ್-27 ಏರ್ ಟು ಏರ್ ಮಿಸೈಲ್ ಅನ್ನು ಖರೀದಿ ಮಾಡುವ ಸಲುವಾಗಿ ಸೋಮವಾರ ರಷ್ಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಬರೋಬ್ಬರಿ 1500 ಕೋಟಿ ರೂಪಾಯಿ ಮೌಲ್ಯದ ಒಪ್ಪಂದ ಇದಾಗಿದೆ. ವಾಯುಸೇನೆಯ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಒಪ್ಪಂದ ಮಹತ್ವದ ಪಾತ್ರವನ್ನು ನಿಭಾಯಿಸಲಿದೆ.
ಈ ಮಿಸೈಲ್ಗಳನ್ನು 10-I ಪ್ರಾಜೆಕ್ಟ್ಗಳ ಅಡಿಯಲ್ಲಿ ಖರೀದಿ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ. ಈ ಪ್ರಾಜೆಕ್ಟ್ ಮೂರು ಸೇನೆ ಪಡೆಗಳಿಗೆ ನಿರ್ಣಾಯಕ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಮತ್ತು ಬಿಡಿಭಾಗಗಳನ್ನು ನಿಗದಿತ ಕನಿಷ್ಠ ಅವಧಿಗೆ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಇದನ್ನು ವಾರ್ ವೇಸ್ಟೇಜ್ ರಿಸರ್ವ್ ಎಂದೂ ಕರೆಯಲಾಗುತ್ತದೆ.
ಆರ್-27 ಮಿಸೈಲ್ 4m ಉದ್ದವಿದ್ದು, ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ವಾಯು ಗುರಿಗಳನ್ನು ಧ್ವಂಸ ಮಾಡಬಲ್ಲ ರೀತಿಯಲ್ಲಿ ವಿನ್ಯಾಸಿತಗೊಂಡಿವೆ. ಇದರ ಸುತ್ತಳತೆ 0.77m ಆಗಿದ್ದು, ಭಾರ 253 ಕೆಜಿ ಇದೆ. 25 ಕಿಮೀ ಎತ್ತರದಲ್ಲಿ, ಸುಮಾರು 60 ಕಿಮೀ ದೂರದವರೆಗೆ ಇದನ್ನು ಚಿಮ್ಮಿಸಬಹುದಾಗಿದೆ. ಈ ಕ್ಷಿಪಣಿಯ ಗೈಡೆನ್ಸ್ ವ್ಯವಸ್ಥೆಯು ಕಮಾಂಡ್ ಅಪ್ಡೇಟ್ಸ್ಗಳೊಂದಿಗೆ ಸೆಮಿ ರಾಡರ್ ಅನ್ವೇಷಕವನ್ನು ಒಳಗೊಂಡಿದೆ.
ಕಳೆದ 50 ದಿನಗಳಲ್ಲಿ, ವಾಯುಸೇನೆಯು ರಕ್ಷಣಾ ಸಚಿವಾಲಯ ಅನುಮೋದಿಸಿದ ತುರ್ತು ಅವಶ್ಯಕತೆಗಳ ಅಡಿಯಲ್ಲಿ ಉಪಕರಣಗಳನ್ನು ಪಡೆಯಲು ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದೆ. ಕ್ಷಿಪಣಿಗಳಾದ ಸ್ಪೈಸ್ 2000, ಸ್ಟ್ರಮ್ ಅಟಾಕಾ ಎಟಿಜಿಎಂಗಳು ಮತ್ತು ತುರ್ತು ಖರೀದಿ ಮಾದರಿಯಲ್ಲಿ ಹೆಚ್ಚಿನ ಸಂಖ್ಯೆಯ ಬಿಡಿಭಾಗಗಳನ್ನು ಖರೀದಿ ಮಾಡಲು ಸುಮಾರು 7,600 ಕೋಟಿ ರೂ.ಗಳನ್ನು ವ್ಯಯಿಸಿದೆ.
ಪುಲ್ವಾಮಾ ದಾಳಿಯ ನಂತರ, ಪಾಕಿಸ್ಥಾನದೊಂದಿಗಿನ ಗಡಿಗಳನ್ನು ಸುಭದ್ರವಾಗಿಡಲು ಹೆಚ್ಚಿನ ಒತ್ತುಗಳನ್ನು ನೀಡಲಾಗುತ್ತಿದೆ. ಇದಕ್ಕಾಗಿ ರಕ್ಷಣಾ ಉಪಕರಣಗಳನ್ನು ಖರೀದಿಸಲು ಕೇಂದ್ರ ಸರ್ಕಾರವು ಮೂರು ಸೇವೆಗಳಿಗೆ ತುರ್ತು ಅಧಿಕಾರವನ್ನು ನೀಡಿದೆ. ನೀಡಿರುವ ಅಧಿಕಾರಗಳ ಅಡಿಯಲ್ಲಿ, ಭದ್ರತಾ ಪಡೆಗಳು ಸುಮಾರು 300 ಕೋಟಿ ರೂಪಾಯಿವರೆಗಿನ ತಮ್ಮ ಆಯ್ಕೆಯ ಉಪಕರಣಗಳನ್ನು ಮೂರು ತಿಂಗಳೊಳಗೆ ಖರೀದಿ ಮಾಡಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.